ಹಾಸನ

'ರಸ್ತೆ ನಿಯಮ ಪಾಲನೆ ಕಡ್ಡಾಯ'

Published On :

ಚನ್ನರಾಯಪಟ್ಟಣ: ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಸ್ತುತ ಚತುಷ್ಪಥ ರಸ್ತೆಯಾಗಿರುವುದರಿಂದ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ವಾಹನ  ಸವಾರರು ಮತ್ತು ಪಾದಚಾರಿಗಳು ರಸ್ತೆ ದಾಟುವಾಗ ಜಾಗ್ರತೆ ವಹಿಸಬೇಕು ಎಂದು ವೃತ್ತ ನಿರೀಕ್ಷಕ ಎಚ್.ಎಂ. ಶೈಲೇಂದ್ರ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದು ಹೋಗಿರುವ ಗೌಡಗೆರೆ, ಮಲ್ಲವ್ವನ ಘಟ್ಟ ಜೋಗಿಪುರ ನಂತರ ಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವಾಹನಗಳು ವೇಗವಾಗಿ ಚಲಿಸುವುದರಿಂದ ರಸ್ತೆ ಬದಿಯಲ್ಲಿ ನಡೆಯುವ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ನಡುವೆಯೇ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು,  ಎಚ್ಚರಿಕೆಯಿಂದ ವಾಹನ ಓಡಿಸಬೇಕು. ಎಲ್ಲಾ ವಾಹನಗಳಿಗೂ ಕಡ್ಡಾಯ ದಾಖಲಾತಿ ಹಾಗೂ ವಿಮೆ ಮಾಡಿಸಬೇಕು ಎಂದು ತಿಳಿಸಿದರು.
ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಪ್ರಯಾಣಿಸುವುದು ಸೂಕ್ತವಲ್ಲ. ಈ ರೀತಿ ಹೆಚ್ಚು ಜನ ಪ್ರಯಾಣಿಸುವುದರಿಂದ ಅಪಘಾತಕ್ಕೆ ಎಡೆಮಾಡಿ ಕೊಡುವುದರ ಜೊತೆಗೆ ಅವರಿಗೆ ಅಪಘಾತ ವಿಮೆ ಕೂಡ ದೊರಕು ವುದಿಲ್ಲ ಎಂದು ಎಚ್ಚರಿಸಿದರು.
ಗ್ರಾಮಸ್ಥರ ದೂರು: ಗ್ರಾಮದಲ್ಲಿಯೇ ಮುಖ್ಯ ವೃತ್ತವಿರುವುದರಿಂದ ಇಲ್ಲಿರುವ ಹೈಮಾಸ್ಟ್ ದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ. ಕೆಲ ಕೆಎಸ್‌ಆರ್‌ಟಿಸಿ ಬಸ್‌ಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಆಯಾ ಮಾರ್ಗಗಳಲ್ಲಿ ಸೂಕ್ತ ನಾಮಫಲಕ ಹಾಕಿಲ್ಲ. ವೃತ್ತದ ರಸ್ತೆ ಹಿಗ್ಗಿಸಿಲ್ಲ. ರಸ್ತೆ ಬದಿ ನಿರ್ಮಿಸುತ್ತಿರುವ ಚರಂಡಿ ಸಮರ್ಪಕವಾಗಿಲ್ಲ. ಒಟ್ಟಾರೆ ವೃತ್ತ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ದೂರಿದರು.
ರಸ್ತೆ ನಿರ್ಮಾಣ, ಅಂಡರ್ ಪಾಸ್, ಸರ್ವಿಸ್ ರಸ್ತೆಗಳ ಕುರಿತು ಮಾಹಿತಿ  ರಾಷ್ಟ್ರೀಯ  ಹೆದ್ದಾರಿಯವರಿಗೆ ಲಿಖಿತ ಮಾಹಿತಿ ನೀಡಲಾಗಿದೆ ಎಂದು ವೃತ್ತ ನಿರೀಕ್ಷಕರು ಉತ್ತರಿಸಿದರು.
ಪಟ್ಟಣ ಠಾಣೆ ಉಪ ನಿರೀಕ್ಷಕ ರಾಜು, ಪೊಲೀಸ್ ಸಿಬ್ಬಂದಿ, ಗ್ರಾಪಂ ಮಾಜಿ  ಅಧ್ಯಕ್ಷ ಗುರುವೇಗೌಡ, ಮಾಜಿ ಸದಸ್ಯ ದೇವರಾಜೇಗೌಡ, ಅಶೋಕ್,ಗ್ರಾಪಂ ಸದಸ್ಯ ಪುಟ್ಟೇಗೌಡ, ವೆಂಕಟೇಶ್, ನವೀನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.