ಹಾಸನ

ಗುಡಿಸಲುಗಳು ಬೆಂಕಿಗಾಹುತಿ

Published On :

ಕ.ಪ್ರ. ವಾರ್ತೆ ಟಿ ಅರಸೀಕೆರೆ ಟಿ ಏ. 2
ನಾರಾಯಣಘಟ್ಟಹಳ್ಳಿಯಲ್ಲಿ ಹಬ್ಬವಿದ್ದ ಪ್ರಯುಕ್ತ ಕುಟುಂಬ ಸದಸ್ಯರೆಲ್ಲರೂ ಅಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತರು ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪರಿಣಾಮ 17ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಕಸ್ತೂರಬಾ ಕನ್ಯಾ ವಿದ್ಯಾಲಯದ ಸಮೀಪ ಮಂಗಳವಾರ ನಡೆದಿದೆ.
ವಿದ್ಯಾಲಯಕ್ಕೆ ಹೊಂದಿಕೊಂಡಂತಿರುವ ಖಾಲಿ ಜಾಗದಲ್ಲಿ ಇದ್ದ ಗುಡಿಸಲು ನಿವಾಸಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ತಾಲೂಕಿನ ನಾರಾಯಣಘಟ್ಟಹಳ್ಳಿ ಸಮೀಪ ಕಸ್ತೂರಬಾ ಕನ್ಯಾ ವಿದ್ಯಾಲಯಕ್ಕೆ ಹೊಂದಿಕೊಂಡಂತಿರುವ ಖಾಲಿ ಜಾಗದಲ್ಲಿ ಸುಮಾರು 42 ಕುಟುಂಬಗಳು ಕೆಲ ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸ್ತವ್ಯ ಹೂಡಿದ್ದರು. ಮಂಗಳವಾರ ಮಧ್ಯರಾತ್ರಿ ವೇಳೆಯಲ್ಲಿ ಅಪರಿಚಿತರು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ.
ಸಾಮಗ್ರಿಗಳು ಅಗ್ನಿಗಾಹುತಿ: ಇದರಿಂದ ಗುಡಿಸಲಿನಲ್ಲಿ ವಾಸವಿದ್ದ ರಂಗಸ್ವಾಮಿ, ಅಣ್ಣಪ್ಪ, ಯೋಗೀಶ, ಲಕ್ಷ್ಮಮ್ಮ, ಗಂಗಾಧರ, ರುದ್ರಪ್ಪ, ರೇವಣ್ಣ, ಪುಟ್ಟಮ್ಮ, ಶಿವಣ್ಣ, ರವಿ ಕುಮಾರ್, ವೆಂಕಟೇಶ್, ಅಜ್ಜಮ್ಮ, ಗಂಗಮ್ಮ, ಕೊರ್ಲಯ್ಯ, ರಾಮಚಂದ್ರಪ್ಪ, ಸಿದ್ದೇಶ, ನಾರಾಯಣಪ್ಪ ಎಂಬುವವರಿಗೆ ಸೇರಿದ ಗುಡಿಸಲುಗಳಲ್ಲಿನ ಪಾತ್ರೆ, ಸಾಮಾನು ಸರಂಜಾಮುಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ತಗುಲಿದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಪ್ರವೃತ್ತರಾದರೂ ಯಾವುದೇ ಪ್ರಯೋಜನವಾಗಿಲ್ಲ.
ಆಗ್ರಹ: ದೃಶ್ಯವನ್ನು ಕಣ್ಣಾರೆ ಕಂಡ ಗುಡಿಸಲು ನಿವಾಸಿಗಳು ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಬೇಕು. ಅನ್ಯಾಯಕ್ಕೊಳಗಾಗಿರುವ ಜನರಿಗೆ ನ್ಯಾಯ ಒದಗಿಸಬೇಕೆಂದು ತಾಲೂಕು ಆಡಳಿತವನ್ನು ಆಗ್ರಹಿಸಿದರು.
ಕಂದಾಯ ಅಧಿಕಾರಿ ಮಾರುತಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.


ಹೇಮಾವತಿ ನದಿಗೆ
ಬಿದ್ದು ಯುವಕ ಸಾವು
ಸಕಲೇಶಪುರ: ಹೇಮಾವತಿ ನದಿಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ಯುವಕನೊಬ್ಬ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ಘಟನೆ ಸಾವಿಗೀಡಾದ ಘಟನೆ ಬುದವಾರ ನಡೆದಿದೆ. ಕುಶಾಲನಗರ ಬಡಾವಣೆಯ ರಿಜ್ವಾನ್ (18) ಮೃತಪಟ್ಟ ದುರ್ದೈವಿ. ಪಟ್ಟಣದ ಬಿ.ಎಂ ರಸ್ತೆಯಲ್ಲಿ ಕಲ್ಲಗಂಡಿ ಹಣ್ಣು ವ್ಯಾಪಾರಮಾಡುವ ಶಕೀಲ್ ಎಂಬುವವರ ಪುತ್ರನಾದ ಈತ ಮದ್ಯಾಹ್ನದ  ವೇಳೆ ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದ್ದು ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.



ಶಾಕ್‌ಗೆ ಬಲಿ
ಅರಕಲಗೂಡು: ನಿರಂತರ ಜೋತಿ ಯೋಜನೆಯಡಿ ಹಾಯಿಸಲಾಗಿದ್ದ ವಿದ್ಯುತ್ ತಂತಿ ಮರವೊಂದಕ್ಕೆ ತಗುಲಿ ವಿದ್ಯುತ್ ಪಸರಿಸಿದ ಕಾರಣದಿಂದ ತೋಟಕ್ಕೆ ದನ ಕರೆದೊಯ್ಯುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲೂಕಿನ ಮರಿತಮ್ಮನಹಳ್ಳಿ ಗ್ರಾಮದ ಯುವಕ ಅನಂತಶೆಟ್ಟಿ ಎಂಬುವವರ ಮಗ ಕುಮಾರ (35) ದುರ್ಮರಣಕ್ಕೆ ತುತ್ತಾದ ಯುವಕನಾಗಿದ್ದು,ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಅರಕಲಗೂಡು ಪೊಲೀಸರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.