ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಭಾಗ್ಯ'
ಹಾಸನ: ಆರೋಗ್ಯ ಎಂಬುದು ಕೇವಲ ಮೂರು ಅಕ್ಷರಗಳಿದ್ದರೂ ಆರೋಗ್ಯ ಕಲ್ಪನೆ ತುಂಬಾ ವಿಸ್ತಾರವಾದದ್ದು. ಮೂಲಭೂತವಾಗಿ ಎಲ್ಲಾ ಮಕ್ಕಳಿಗೂ ಮುಖ್ಯವಾಗಿ ಬೇಕಾಗಿರುವುದು ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಆಹಾರ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಗೋಪಿನಾಥ್ ಕಿವಿಮಾತು ಹೇಳಿದರು.
ತಾಲೂಕಿನ ಹಂಗರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಇತ್ತೀಚೆಗೆ ಏರ್ಪಡಿಸಿದ್ದ 'ಆರೋಗ್ಯ ಅರಿವು' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೊಪ್ಪು, ತರಕಾರಿ, ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹಣ ಕೊಟ್ಟು ಆರೋಗ್ಯ ಕೊಂಡುಕೊಳ್ಳಲಾಗುವುದಿಲ್ಲ. ಮನೆಯಲ್ಲಿಯೇ ಬೆಳೆದು ತಿನ್ನಬಹುದಾದ ಪೌಷ್ಟಿಕ ಆಹಾರ ಬಿಟ್ಟು, ಹಣಕೊಟ್ಟು ಟಾನಿಕ್ ಕೊಂಡು ಆರೋಗ್ಯ ಪಡೆಯುವುದನ್ನು ಬಿಡಬೇಕೆಂದರು. ಸಾಂಕ್ರಾಮಿಕ ರೋಗಗಳು ಬಂದ ಮೇಲೆ ಚಿಕಿತ್ಸೆ ಪಡೆಯುದಕ್ಕಿಂತ ಬಾರದ ರೀತಿ ಮುಂಜಾಗರುಕತೆ ವಹಿಸಿಕೊಳ್ಳುವುದು. ಮನೆ ಮುಂಭಾಗದ ಚರಂಡಿ ಸ್ವಚ್ಛಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಕ್ಷಯ, ಏಡ್ಸ್, ಮಲೇರಿಯಾ, ಡೆಂಘೀ ಮುಂತಾದ ಕಾಯಿಲೆಗಳ ಬಗ್ಗೆ ತಿಳಿದುಕೊಂಡು ತಮ್ಮ ತಂದೆ-ತಾಯಿಯರಿಗೆ ಈ ಸಂಬಂಧ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಆರೋಗ್ಯ ನಿರೀಕ್ಷಕ ಆರ್. ಬಿ.ಪುಟ್ಟೇಗೌಡ, ನೇತ್ರಾಧಿಕಾರಿ ಡಾ.ಹೇಮಲತಾ ಮಾತನಾಡಿ, ಡಾ. ಗೋಪಿನಾಥ್ ಮತ್ತಿತರರು ಮಾತನಾಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಡಾ.ರಾಮಚಂದ್ರ, ಶಿಕ್ಷಕಿ ಟಿ.ಶೋಭಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಂಜಮ್ಮ, ಹಿರಿಯ ಶಿಕ್ಷಕ ಧನಂಜಯ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

