ಅನ್ನದಾತನ ಸಡಗರ; ಎತ್ತುಗಳಿಗೆ ಸಿಂಗಾರ
ಅರಸೀಕೆರೆ: ಯುಗಾದಿಯ ಸಂಭ್ರಮದ ನಡುವೆಯೂ ರೈತ ತನ್ನ ಜಮೀನಿನಲ್ಲಿ ಬಂಗಾರದ ಬೆಳೆ ಬರಲೆಂದು ಆಶಿಸಿ ಹೊನ್ನಾರು ಕಟ್ಟುವ ಕಾಯಕದಲ್ಲಿ ತಾಲ್ಲೂಕಿನ ಅನ್ನದಾತರು ನಿರತವಾಗಿದುದು ಗುರುವಾರ ಎಲ್ಲೆಡೆ ಕಂಡುಬಂದಿದ್ದು ವಿಶೇಷವಾಗಿತ್ತು.
ತಾಲ್ಲೂಕಿನ ಜಾವಗಲ್, ಗಂಡಸಿ, ಕಣಕಟ್ಟೆ, ಬಾಣಾವರ, ಹೋಬಳಿಗಳಲ್ಲಿ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಅನೇಕ ಹಳ್ಳಿಗಳ ರೈತರು ತಮ್ಮ ನೇಗಿಲು, ನೊಗ ಇತ್ಯಾದಿ ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸಿ ಎತ್ತುಗಳನ್ನು ಸಿಂಗರಿಸಿ, ವಾದ್ಯ ತಮಟೆಗಳೊಂದಿಗೆ ಊರ ಮುಂದಿನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊನ್ನಾರು ಕಟ್ಟುವ ಕಾಯಕಕ್ಕೆ ಚಾಲನೆ ನೀಡಿದರು.
ನಂತರ ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಸಾಂಕೇತಿಕವಾಗಿ ಭೂಮಿ ಉಳುಮೆಗೆ ಮುಂದಾಗಿ ನೇಗಿಲು, ಎತ್ತುಗಳಿಗೆ ಚಿನ್ನ ಮುಟ್ಟಿಸುವ ಮೂಲಕ ಉಳುಮೆ ಮಾಡಿ ಬಂಗಾರದ ಬೆಳೆ ಬಾರಲೆಂದು ಉತ್ತಮ ಮಳೆ ಬೆಳೆ ಆಗುವ ಮೂಲಕ ರೈತರ ಸಂಕಷ್ಟ ನಿವಾರಣೆಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
'ರೇವತಿ'ಗಾಗಿ ಪ್ರಾರ್ಥನೆ: ಮಾ. 31ರಂದು ರೇವತಿ ಮಳೆ ಹುಟ್ಟಿದ್ದು ಬರದ ಬೇಗುದಿಯಲ್ಲಿ ಸಿಲುಕಿ ನರಳುತ್ತಿರುವ ಜನ ಜಾನುವಾರಗಳ ಹಿತಕಾಯಲು ರೇವತಿ ಮಳೆ ಬರಲೆಂದು ಆಶಿಸಿ ರೈತ ಸಮುದಾಯ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

