ಸ್ನೇಹಿತ ಷರೀಫ್ ಮರೆಯಲಾದೀತೆ?
ಕ.ಪ್ರ.ವಾರ್ತೆ ಟಿ ಹಾಸನ ಟಿ ಏ. 2
“ÈæßOÛQ - ಮದೀನದಲ್ಲಿ ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ನನಗೆ ಇಲ್ಲಿ ಆರೋಗ್ಯ ಸರಿ ಇಲ್ಲ. ನೀವು ನಿಮ್ಮ ಆರೋಗ್ಯವನ್ನು ಸರಿಯಾಗಿ «æàÞtOæàØÙ’.
ಇದು ಕಾಂಗ್ರೆಸ್ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್ ಅವರು ನನಗೆ ಬರೆದ ಪತ್ರ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು. ಪ್ರಪಂಚದ ಅತ್ಯಂತ ಪುಣ್ಯ ಕ್ಷೇತ್ರ ಮೆಕ್ಕಾ- ಮದೀನ. ಅಲ್ಲಿ ನನಗೆ ಮತ್ತು ಜೆಡಿಎಸ್ಗೆ ಶುಭ ಹಾರೈಸಿದ್ದಾರೆ. ಇಂಥಹ ಸ್ನೇಹಿತನನ್ನು ಮರೆಯಲಿಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಪ್ರಚೋದಿತರಾಗಬೇಡಿ: ದೊಡ್ಡ ಸ್ಥಾನದಲ್ಲಿ ಕುಳಿತವರು ಅತಿ ಕೆಟ್ಟದಾಗಿ ಮಾಡಬಾರದು. ಡಾ. ಪರಮೇಶ್ವರ್ ಹೇಳಿಕೆಯಿಂದ ಯಾರೂ ಪ್ರಚೋದಿತರಾಗಬಾರದು. ಸೋನಿಯಾಗಾಂಧಿ ಅವರು ನನ್ನನ್ನು ಕೆಟ್ಟದಾಗಿ ತೆಗಳಬೇಕು. ಜೆಡಿಎಸ್ ಅಳಿಸಬೇಕು ಎಂದು ಫರ್ಮಾನು ಹೊರಡಿಸಿದ್ದರೆ, ಏನೂ ಮಾಡಲಾಗದು. ರಾಜಕೀಯ ಪಕ್ಷವನ್ನು ರಾಜಕಾರಣಿಗಳು ತೆಗಿಯಲು ಸಾಧ್ಯವಿಲ್ಲ. ಕನ್ನಡಿಗರಿಗೆ ಯಾರನ್ನು ಎಲ್ಲಿಡಬೇಕು ಎಂಬುದು ತಿಳಿದಿದೆ. ಈ ಸತ್ಯ ತಿಳಿದರೆ ಅತಿರೇಕದ ಭಾಷಣ ನಡೆಯುವುದಿಲ್ಲ ಎಂದರು.
ಪಿಎಂ ಆಸೆ ಹೊಂದಿಲ್ಲ: ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂಢಿಸಿಂಗ್ ಪ್ರಧಾನಿ ಆಗುವ ಆಸೆ ಹೊಂದಿದ್ದಾರೆ. ನಾನಂಥ ಆಸೆ ಹೊಂದಿಲ್ಲ. ತೃತೀಯ ರಂಗದಲ್ಲಿ ದೇವೇಗೌಡ ಪ್ರಮುಖ ಪಾತ್ರ ವಹಿಸುತ್ತಾನೆ ಎಂಬ ಹಿನ್ನೆಲೆಯಲ್ಲಿ ಇಂತಹ ಮಾತುಗಳನ್ನು ರಾಜ್ಯ ಮುಖಂಡರು ಆಡುತ್ತಿದ್ದಾರೆ. ಇದು ಸರಿಯಲ್ಲ. ನಾನು ಕೂಡ ಪರಮೇಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವಾಗ ನಾನ್ಸೆನ್ಸ್ ಪದ ಬಳಸಬಾರದಿತ್ತು ಎಂದು ವಿಷಾದಿಸಿದರು.
'ಸಾಹೇಬ್ರೇ... ನಮ್ಮ ಸಂಬಂಧ ಪವಿತ್ರವಾದದ್ದು..'
ಪತ್ರಿಕಾಗೋಷ್ಠಿಗೆ ಕರೆದಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಪತ್ರಕರ್ತರೆದುರೇ ಕಾಂಗ್ರೆಸ್ನ ಹಿರಿಯ ನಾಯಕ ಜಾಫರ್ ಷರೀಫ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಮಾತುಕತೆಯ ಸಂಪೂರ್ಣ ವಿವರ ಲಭ್ಯವಾಗದಿದ್ದರೂ ದೇವೇಗೌಡರು ಹೇಳಿಕೆ ಇಂತಿದೆ.
'ಸಾಹೇಬ್ರೆ... ನನ್ನ- ನಿಮ್ಮ ಸಂಬಂಧ ಪವಿತ್ರವಾದದು. ನೀವು ಮೆಕ್ಕಾ- ಮದೀನದಂತಹ ಮಹಾನ್ ಪುಣ್ಯ ಕ್ಷೇತ್ರದಲ್ಲಿ ನನಗೆ ಮತ್ತು ಜೆಡಿಎಸ್ಗೆ ಶುಭವಾಗಲಿ ಎಂದು ಹಾರೈಸಿದ್ದೀರಿ. ಇದಕ್ಕೆ ನಾನು ಚಿರಋಣಿ. ನಿಮ್ಮ ನಿರ್ಮಲ ಸ್ನೇಹವನ್ನು ನಾನೆಂದಿಗೂ ಮರೆಯಲಾರೆ. ಈ ಕೆಟ್ಟ ವ್ಯವಸ್ಥೆಯ ರಾಜಕೀಯ ಎಲ್ಲವನ್ನೂ ತಪ್ಪಾಗಿ ಕಾಣುತ್ತದೆ ಹಾಗೂ ಅರ್ಥೈಸುತ್ತದೆ. ನನಗಂತೂ ಹೇಸಿಗೆಯಾಗಿದೆ. ತಾವು ತುಂಬಾ ಕೆಮ್ಮುತ್ತಿದ್ದೀರಿ. ಕೊಂಚ ರೆಸ್ಟ್ ಮಾಡಿ. ನಾನು ಬೆಂಗಳೂರಿಗೆ ಬಂದು ಮಾತನಾಡುತ್ತೇನೆ. ನಿಮ್ಮ ಆರೋಗ್ಯ ಮುಖ್ಯ. ರಾಜಕೀಯ ಆಮೇಲೆ. ನಿಮ್ಮ ಹುಡುಗ ಜಮೀರ್ ಅಹಮದ್ ಮತ್ತಿತರರಿಗೆ ಹೇಳಿ'.
ಜಗನ್ ಪ್ರಚಾರ
ಆಂಧ್ರ ಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಅವರು ಬೀದರ್, ರಾಯಚೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಮತ್ತೋರ್ವ ಆಂಧ್ರ ನಾಯಕ ಜೂನಿಯರ್ ಎನ್ಟಿಆರ್ ಜೆಡಿಎಸ್ ಪ್ರಚಾರ ಮಾಡಲು ಬರುವುದಾಗಿ ಹೇಳಿದ್ದರು. ಆದರೆ ಅಲ್ಲಿ ಸ್ಥಳೀಯ ರಾಜಕಾರಣದಲ್ಲಿ ಕೊಂಚ ವ್ಯತ್ಯಾಸ ಉಂಟಾಗಿದ್ದರಿಂದ ಬರುತ್ತಿಲ್ಲ. ತಾವು ಪ್ರಚಾರಕ್ಕಾಗಿ ಕೇರಳಕ್ಕೆ ಹೋಗುತ್ತಿರುವುದಾಗಿ ಗೌಡರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

