ಹೆಸರಿಗಷ್ಟೇ ಸಂತೆ!
ಹಾಸನ: ಚಂದ್ರಮಾನ ಯುಗಾದಿ ಹೊಸ ವರ್ಷದ ತೊಡಕಿನ ಹಿನ್ನೆಲೆಯಲ್ಲಿ ಮಂಗಳವಾರ ನಡೆಯುವ ಸಂತೆಗೆ ತರಕಾರಿ ಮಾರುವ ಹಾಗೂ ಕೊಳ್ಳುವವರ ಇಬ್ಬರ ಕೊರತೆ ಕಂಡು ಬಂದಿತು.
ನಗರದ ಎಂ.ಜಿ. ರಸ್ತೆ, ಸರ್ಕಾರಿ ಕಲಾ ಕಾಲೇಜಿನ ಮುಂಭಾಗದ ರಸ್ತೆ ಬದಿಯಲ್ಲಿ ಪ್ರತಿ ಮಂಗಳವಾರ ಭರ್ಜರಿ ಸಂತೆ ನಡೆಯುತ್ತದೆ. ತರಕಾರಿ ವ್ಯಾಪಾರ ಮಾಡುವವರು ಹೆಚ್ಚಾಗಿ ಇದ್ದು, ಈ ವೇಳೆ ರಸ್ತೆಯಲ್ಲಿ ವಾಹನ ಸಂಚರಿಸುವುದೇ ಕಷ್ಟವಾಗಿರುತ್ತಿತ್ತು. ಆದರೆ, ಈ ಬಾರಿಯ ಮಂಗಳವಾರ ಅಂತಹ ವಾತಾವರಣ ನಿರ್ಮಾಣವಾಗದೇ, ಕಡಿಮೆ ಸಂಖ್ಯೆಯಲ್ಲಿ ತರಕಾರಿ ಮಾರುವವರು ಇದ್ದರು. ಅಲ್ಲದೇ, ಕೊಳ್ಳುವವರ ಸಂಖ್ಯೆಯೂ ಬೆರಳೆಣಿಕೆಯಷ್ಟಿತ್ತು. ತರಕಾರಿ ಬೆಲೆಗಳು ಮಾತ್ರ ಎಂದಿನಂತೆ ಇದ್ದು, ಯಾವುದೇ ಬದಲಾವಣೆ ಕಂಡುಬರಲಿಲ್ಲ.
ವರುಣನ ಆಗಮನ
ಅರಕಲಗೂಡು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ತಾಲೂಕಿನ ಜನತೆಗೆ ಮಂಗಳವಾರ ರಾತ್ರಿ ಸುರಿದ ಮಳೆ ತುಸು ಸಂತಸಕ್ಕೆ ಕಾರಣವಾಯಿತು. ಕಾಲಮಾನಕ್ಕೆ ತಕ್ಕಂತೆ ಮಳೆ ಸುರಿದು ಬಿಸಿಲಿನ ಜಳ ತಗ್ಗಿಸಿದ ಮಳೆ ಹಿತವೆನಿಸಿತು. ರಾತ್ರಿ ಸುಮಾರು 12 ಗಂಟೆ ವೇಳೆಗೆ ಆರಂಭಗೊಂಡ ಮಳೆ ಸುಮಾರು 2 ಗಂಟೆವರೆಗೆ ಎಡೆಬಿಡದೆ ಸುರಿಯಿತು. ಮಳೆ ವಿವರ ಇಂತಿದೆ. ಅರಕಲಗೂಡು- 8.3 ಮಿ.ಮೀ., ಪಟ್ಟಣ-14.0 ಮಿ.ಮೀ,ದೊಡ್ಡಮಗ್ಗೆ - 2.2 ಮಿ.ಮೀ, ಬಸವಾಪಟ್ಟಣ-14.3 ಮಿ.ಮೀ,ರಾಮನಾಥಪುರ-3.4 ಮಿ.ಮೀ, ಕೊಣನೂರು-4.6 ಮಿ.ಮೀ, ದೊಡ್ಡಬೆಮ್ಮತ್ತಿ- 8.2 ಮಿ.ಮೀ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

