'ಗೌಡರು ರಾಜ್ಯಸಭೆಗೆ ಹೋಗಬಹುದಿತ್ತು'
ಚನ್ನರಾಯಪಟ್ಟಣ: ಮಾಜಿ ಪ್ರಧಾನಿ ದೇವೇಗೌಡ ಅವರು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವ ಬದಲು ಅವರು ರಾಜ್ಯಸಭೆಗೆ ನೇರವಾಗಿ ಪ್ರವೇಶವನ್ನು ಬಯಸಬಹುದಿತ್ತು ಎಂದು ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಅವರು ಉತ್ತಮ ವಾಗ್ಮಿ ಹಾಗೂ ರಾಜಕೀಯ ಪಟು. ಅವರು ಕಳೆದ 50 ವರ್ಷಗಳ ರಾಜಕೀಯ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಂದಿರುವ ಅವರು, ರಾಜ್ಯಸಭೆಗೆ ಪ್ರವೇಶ ಮಾಡಬಹುದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ದೇವೇಗೌಡರಂತಹ ವಾಗ್ಮಿಗಳು ಸಂಸತ್ತಿಗೆ ಅವಶ್ಯವಿದೆ. ಆದರೆ, ಅವರಿಗಾಗಿ ರಾಜ್ಯಸಭೆಯಿದೆ. ಅವರು ಅದಕ್ಕೆ ಪ್ರವೇಶ ಪಡೆದಿದ್ದರೆ, ನಮ್ಮಂಥವರು ಲೋಕಸಭೆಗೆ ಪ್ರವೇಶ ಪಡೆಯಲು ಸುಲಭವಾಗುತ್ತಿತ್ತು. ಅವರಿಗೆ ವಯಸ್ಸಾಗಿದೆ. ಸಾರ್ವತ್ರಿಕ ಚುನಾವಣೆಯ ಕಸರತ್ತನ್ನು ತಮ್ಮಂಥವರಿಗೆ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಮೋದಿ ಜಾತಿವಾದಿಯಲ್ಲ: ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿದ ವಿಜಯ ಶಂಕರ್, ಮೋದಿ ಅವರು ಎಂದಿಗೂ ಜಾತಿ ಅಥವಾ ಧರ್ಮ ವಿರೋಧಿಯಲ್ಲ. ಅವರು ಎಲ್ಲಾ ಧರ್ಮವನ್ನು ಸಮನಾಗಿ ಕಾಣುವ ವ್ಯಕ್ತಿಯಾಗಿದ್ದು, ಅವರ ಬಗ್ಗೆ ನೀಡಿರುವ ಹೇಳಿಕೆ ತಪ್ಪಾಗಿದೆ ಎಂದರು.
ಮೋದಿ ಅವರು ರೈತ ಹಾಗೂ ಮುಸ್ಲಿ ವಿರೋಧಿ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವ ಎಚ್.ಡಿ. ರೇವಣ್ಣ ಅವರು ಒಮ್ಮೆ ಗುಜರಾತಿನಲ್ಲಿ ರೈತರಿಗೆ ನೀಡಿರುವ ಸೌಲಭ್ಯಗಳನ್ನು ಹೋಗಿ ತಿಳಿಯಲಿ. ರೈತರಿಗೆ ದಿನದ 24ಗಂಟೆ ವಿದ್ಯುತ್ ಹಾಗೂ ನೀರಾವರಿ ಸೌಲಭ್ಯ ನೀಡಿದ್ದಾರೆ. ರೇವಣ್ಣ ಅವರು ಈ ಬಗ್ಗೆ ಮನನ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ತಾಲೂಕು ಅಧ್ಯಕ್ಷ ರಂಗೇಗೌಡ, ಬಿಜೆಪಿ ತಾಲೂಕು ಮುಖಂಡರಾದ ಶೋಭಾ ಶುಭಕರ್, ನಂಜುಂಡ ಮೈಮ್, ಗಂಗಾಧರ್, ವಿಜಯಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

