ನೇತ್ರ ತಪಾಸಣೆ
ಬೇಲೂರು: ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ತಾಲ್ಲೂಕು ರೈತ ಸಂಘ ಹಾಗೂ ಹಳೇಬೀಡು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ಆಶ್ರಯದಲ್ಲಿ ಏ.4ರಂದು ಬೆಳಗ್ಗೆ 9ರಿಂದ ಮದ್ಯಾಹ್ನ 1ರವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಲಾಗಿದೆ ಎಂದು ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭೋಗಮಲ್ಲೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಳೇಬೀಡು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನುರಿತ ನೇತ್ರ ತಜ್ಞರಿಂದ ಪರಿಕ್ಷೆ ಹಾಗೂ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.
'ಅಂಚೆ' ಅಧಿವೇಶನ
ಬೇಲೂರು: ಗ್ರಾಮೀಣ ಅಂಚೆ ನೌಕರರ ವಲಯ ಮಟ್ಟದ 8ನೇ ದ್ವೈವಾರ್ಷಿಕ ಅಧಿವೇಶನವು ಏ. 5 ಮತ್ತು 6ರಂದು ಕೋಲಾರ ವಿಭಾಗದ ಚಿಂತಾಮಣಿ ಶ್ರೀ ಕ್ಷೇತ್ರ ಕೈವಾರದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ಗ್ರಾಮೀಣ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಕೆ.ಜೆ. ಶಿವಾಜಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅಧಿವೇಶನದಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹದೇವಯ್ಯ ಭಾಗವಹಿಸಲಿದ್ದು, ಅಂಚೆ ನೌಕರರ ಕಾಯಂ ಹಾಗೂ ಇನ್ನಿತರೆ ಮಹತ್ವದ ವಿಷಯಗಳನ್ನು ಚರ್ಚಿಸಲಿದ್ದಾರೆ. ಗ್ರಾಮೀಣ ಅಂಚೆ ನೌಕರರು ತಪ್ಪದೆ ಸಭೆಗೆ ಹಾಜರಾಗಬೇಕೆಂದು ಮನವಿ ಮಾಡಿದ್ದಾರೆ.
ಕವಿಗೋಷ್ಠಿ
ಹಾಸನ: ಹಾಸನದ ಶಾಂತಿನಗರದಲ್ಲಿ ಇರುವ ತೇಜೂರು ರಸ್ತೆಯಲ್ಲಿನ ಎಂ.ಜಿ.ಆರ್. ಕಿಡ್ಸ್ನಲ್ಲಿ ಶ್ರೀಮತಿ ವೇದಶ್ರೀ ರಾಜ್ರವರ ಪ್ರಾಯೋಜಕತ್ವದಲ್ಲಿ 205 ನೇ ಮಾಸಿಕ ಮನೆ ಮನೆ ಕವಿಗೋಷ್ಠಿಯನ್ನು ಏ. 6ರಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ. ಮೊದಲಿಗೆ ಸರ್ಕಾರಿ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ನಾರಾಯಣಪ್ರಸಾದ್ ಅವರಿಂದ ಸಾಹಿತ್ಯ ಪ್ರಸಾರದಲ್ಲಿ ಆಧುನಿಕ ತಂತ್ರಜ್ಞಾನವಾದ ಬ್ಲಾಗಿಂಗ್ ಪಾತ್ರ ಎಂಬ ವಿಷಯದಡಿ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನಡೆಯಲಿದೆ. ನಂತರ, ಜಿಲ್ಲೆಯ ಹಿರಿ-ಕಿರಿಯ ಕವಿ- ಕವಯತ್ರಿಯರಿಂದ ಕವಿತೆವಾಚನ ನಡೆಯಲಿದೆ ಎಂದು ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9483470794-ಸಂಚಾಲಕರು ಹಾಗೂ 8050301298-ಪ್ರಾಯೋಜಕರು ಸಂಖ್ಯೆಗೆ ಸಂಪರ್ಕಿಸಬಹುದು.
ಸಿಇಟಿ ತರಬೇತಿ
ಹಾಸನ: ಪೋಷಕರ ನಿರೀಕ್ಷೆ ಬಹಳ ಇದ್ದು, ಮಕ್ಕಳು ಸ್ಪಂದಿಸಿ ತಮ್ಮ ಗುರಿ ತಲುಪಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಜನಾಧನ್ ತಿಳಿಸಿದ್ದಾರೆ.
ನಗರದ ಸಂಸ್ಕೃತ ಭವನದಲ್ಲಿ ಜ್ಞಾನಗಂಗಾ ಅಕಾಡೆಮಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಿಇಟಿ 2014 ಕೋಚಿಂಗ್ 20 ದಿವಸಗಳ ತರಬೇತಿಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದಂತೆ ಸಿಇಟಿ ಒಂದು ಮಹತ್ತರವಾದ ಹಂತ ಎಂದರು. ವಿದ್ಯಾರ್ಥಿಗಳು ಆಸಕ್ತಿವಹಿಸಿ ಜ್ಞಾನ ಪಡೆದು ಹೆಚ್ಚಿನ ಅಂಕಗಳಿಸಬೇಕೆಂದು ಸಲಹೆ ನೀಡಿದರು.
ಪೋಷಕರು ತಮ್ಮ ಮಕ್ಕಳ ಬಗ್ಗೆ ಅನೇಕ ಅಸೆ ಇಟ್ಟುಕೊಂಡು ಮಕ್ಕಳನ್ನು ಒದಿಸಲು ಮುಂದಾಗುತ್ತಾರೆ. ಇಂಜಿನಿಯರ್, ಮೆಡಿಕಲ್, ಐಎಎಸ್ಸೇರಿದಂತೆ ಇತರೆ ಬಗ್ಗೆ ಅವರದ್ದೇ ಆದ ಅಭಿರುಚಿ ಹೊಂದಿದ್ದು, ಹೆಚ್ಚಿನ ತರಬೇತಿ ಮೂಲಕ ಹೆಚ್ಚಿನ ಅಂಕ ಪಡೆಯಲು ಅನುಕೂಲವಾಗಲಿದೆ ಎಂದು ಕಿವಿಮಾತು ಹೇಳಿದರು.
ಏಕಾಗ್ರತೆ ಮೂಲಕ ಹೆಚ್ಚಿನ ಜ್ಞಾನ ಸಂಪಾದಿಸಿ ಮುಂದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕಾಗಿದೆ ಎಂದರು. ಪತ್ರಕರ್ತ ಶಿವಾನಂದ ತಗಡೂರ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯೇ ಅವರಿಗೆ ದಾರಿದೀಪ ಎಂದರು.
ಇದೇ ವೇಳೆ ಅಧ್ಯಾಪಕ ಅನಂತರಾವ್, ಭೂಮಿಕ ಏಜೆನ್ಸಿಯ ನವೀನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

