ಸೆರೆ ಸಿಕ್ಕ ಒಂಟಿ ಸಲಗ
ಸಕಲೇಶಪುರ: ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಶ್ರಮವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಗುರುವಾರ ಮತ್ತೊಂದು ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಮಾಗಲು ಕಾಲೋನಿ ಸಮೀಪ ಮಧ್ಯಾಹ್ನ ಒಂದು ಗಂಟೆಯ ವೇಳೆ ಕಂಡು ಬಂದ ಕಾಡಾನೆ ಗುಂಪನ್ನು ಹಿಂಬಾಲಿಸಿದ ಅರಣ್ಯಾಧಿಕಾರಿಗಳ ತಂಡ ಗುಂಪಿನಲ್ಲಿದ್ದ ಸುಮಾರು 28 ವರ್ಷದ ಗಂಡಾನೆಯನ್ನು ಗುಂಪಿನಿಂದ ಬೇರ್ಪಡಿಸಿ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ.
ಆದರೆ ಯಾವುದೇ ಪರಿಣಾಮ ಬೀರದ ಪರಿಣಾಮ ಸುಮಾರು ಅರ್ಧ ಗಂಟೆ ಕಳೆದ ನಂತರ ಮತ್ತೊಮ್ಮೆ ಅರವಳಿಕೆ ಚುಚ್ಚುಮದ್ದು ಹಾರಿಸಲಾಯಿತು. ಈ ವೇಳೆ ಸುಮಾರು ಇನ್ನೂರು ಮೀಟರ್ ದೂರ ಓಡಿದ ಕಾಡಾನೆ ಸಮೀಪದ ಕಾಫಿ ತೋಟದಲ್ಲಿ ನೆಲಕ್ಕುರುಳಿತ್ತು.
ಈ ವೇಳೆ ಸಾಕಾನೆ ಸಹಾಯದಿಂದ ನೀರು ಸುರಿದು ಹಗ್ಗದಿಂದ ಬಂದಿಸಿ ಮಾಗಲು ಗ್ರಾಮದಲ್ಲಿ ಕಟ್ಟಿ ಹಾಕಲಾಯಿತು. ಸೆರೆಹಿಡಿದಿರುವ ಕಾಡಾನೆಯನ್ನು ಕೊಡಗಿನ ತಿತಿಮತಿ ಸಮೀಪದ ಮತ್ತಿಗೋಡು ಆನೆ ಶಿಬಿರಕ್ಕೆ ಶುಕ್ರವಾರ ಸಾಗಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
ಕಾಡಾನೆ ಕಾರ್ಯಾಚರಣೆಯನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ವೀಕ್ಷಿಸಿದರು. ಇದುವರೆಗೆ ಒಟ್ಟು 12 ಕಾಡಾನೆಗಳನ್ನು ಸೆರೆಹಿಡಿದಂತಾಗಿದೆ.
ಪಿಎಂಇಜಿಪಿ ಸದ್ಬಳಕೆಗೆ ಕರೆ
ಹಾಸನ: ನಿರುದ್ಯೋಗಿ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿಕೊಡುವಂತ ದಿಕ್ಕಿನಲ್ಲಿ ಪಿಎಂಇಜಿಪಿ ಯೋಜನೆಯು ಮಹತ್ವವುಳ್ಳದಾಗಿದೆ ಇದನ್ನು ಯುವಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಕೈಗಾರಿಕ ಕೆಂದ್ರದ ಸಹಾಯಕ ನಿರ್ದೆಶಕ ಮೋಹನ್ ತಿಳಿಸಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಪಿಮ್ಇಜಿಪಿ ಹಾಗೂ ಆರ್ಇಡಿಪಿ ಯೋಜನೆಯ ಫಲಾನುಭವಿಗಳಿಗೆ 11 ದಿನಗಳಕಾಲ ಇತ್ತೀಚೆಗೆ ಹಮ್ಮಿಮಿಕೊಂಡಿದ್ದ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸಾಲಿನಲ್ಲಿ 65 ಗುರಿ ಇತ್ತು, ಪ್ರಸ್ತುತ 130 ಜನರಿಗೆ ಬ್ಯಾಂಕ್ಗಳಿಂದ ಸಾಲ ದೊರಕಿದೆ ಎಂದು ವಿವರಿಸಿದರು.
ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶನ ಶ್ರೀನಿವಾಸ ಮೂರ್ತಿ ಮಾತನಾಡಿ, ನಾವುಗಳು ಸ್ವಾವಲಂಬನೆ ಬದುಕಿನತ್ತ ಸಾಗಬೆಕಾದರೆ ಪ್ರತಿಯೊಬ್ಬರ ಪರಿಶ್ರಮ ಅಗತ್ಯವಿದೆ. ಯೋಜನೆಯಿಂದ ಪಡೆದ ಸಾಲವನ್ನು ಉದ್ದೇಶಿತ ಉದ್ಯಮಗಳಿಗೆ ಬಳಸಿಕ್ಕೂಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಫಲಾನುಭವಿಗಳಿಗೆ ಸಲಹೆ ನೀಡಿದರು.
ಬ್ಯಾಂಕ್ಗಳಿಂದ ಪಡೆದಸಾಲವನ್ನು ಸರಿಯಾಗಿ ಹಿಂತಿರುಗಿಸಿದಾಗ ಮಾತ್ರ ಯೋಜನೆಯಿಂದ ಇತರರಿಗೂ ಅನುಕೂಲವಾಗಲಿ ಎಂದರು. ಈ ಸಂದರ್ಭದಲ್ಲಿ 53 ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿಲಾಯಿತು. ಕಾರ್ಯಕ್ರಮದಲ್ಲಿ ಆರ್.ಜಿ. ಗಿರೀಶ್, ಸಂಸ್ಥೆಯ ಎಚ್.ಆರ್. ರವಿ ಮುಂತಾದವರು ಉಪಸ್ಥಿತಿ ವಹಿಸಿದ್ದರು. ರಂಜಿತ ಪ್ರಾರ್ಥಿಸಿ ರವಿಕುಮಾರ್ ಸ್ವಾಗತಿಸಿ ಗಿರಿಜ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

