ಒಕ್ಕೂಟದ ನಿರ್ಧಾರಕ್ಕೆ ರೈತರ ಆಕ್ರೋಶ
ಬೇಲೂರು: ಹಾಲು ಒಕ್ಕೂಟವು ಏಕಾಏಕಿ ಹಾಲಿನ ಬೆಲೆ ಇಳಿಕೆ ಮಾಡಿದ್ದು, ಈ ಮೂಲಕ ಯುಗಾದಿ ನಂತರ ಕಹಿ ನೀಡಿದೆ ಎಂದು ಒಕ್ಕೂಟದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೀನ ದಿನಗಳಲ್ಲಿ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದ ರೈತರಿಗೆ ವರದಾನವಾಗಿ ಬಂದ ಹೈನುಗಾರಿಕೆ ಉಪ ಕಸುಬು ರೈತನ ಕುಟುಂಬಕ್ಕೆ ಪೂರಕವಾಗಿತ್ತು. ಲೀಟರ್ಗೆ ರು. 25 ನೀಡಿ ಖರೀದಿ ಮಾಡುತ್ತಿದ್ದ ಹಾಲು ಒಕ್ಕೂಟ, ತನ್ನ ಖರೀದಿ ಬೆಲೆಯಲ್ಲಿ, ಏಕಾಏಕಿ ರು. 3 ಇಳಿಕೆ ಮಾಡಿದೆ. ಇದರಿಂದ ರೈತರಿಗೆ ಭಾರಿ ಪೆಟ್ಟು ಬಿದ್ದಿದೆ ಎಂದು ದೂರಿದರು.
ರೈತರಿಗೆ ಸಂಕಷ್ಟ: ಕರ್ನಾಟಕ ರೈತ ಸಂಘದ ಸದಸ್ಯ ಕಲ್ಲಹಳ್ಳಿ ಅಣ್ಣೇಗೌಡ ಮಾತನಾಡಿ, ಇಂದು ಒಂದು ಲೀಟರ್ ನೀರಿನ ಬಾಟಲಿಗೆ ರು. 30 ನೀಡಬೇಕು. ಆದರೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ರೈತರ ಮೇಲೆ ಜಾಣ ಮೌನ ವಹಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ರೈತರಿಗೆ ರು. 4 ಹಣವನ್ನು ಪ್ರೋತ್ಸಾಹ ಧನವಾಗಿ ನೀಡುತ್ತೇವೆ ಎಂದು 6 ತಿಂಗಳುಗಳಾಗಿವೆ. ಆದರೂ, ಈವರೆಗೆ ಯಾವ ಹಣವೂ ಬಂದಿಲ್ಲ. ಏತನ್ಮಧ್ಯೆ, ಪಶು ಆಹಾರದ ಬೆಲೆ ಗಗನಕ್ಕೇರಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.
ಹಾಲಿನ ಪ್ರಮಾಣ ಕಡಿಮೆ: ಅಲ್ಲದೇ, ಬೇಸಿಗೆಯಲ್ಲಿ ಜಾನುವಾರುಗಳ ಹಾಲಿನ ಪ್ರಮಾಣ ಕಡಿಮೆಯಾಗಿದ್ದು, ಹಾಲಿನ ಖರೀದಿ ದರ ಇಳಿಕೆಯಾಗಿರುವುದ ಹೈನುಗಾರಿಕೆ ನಷ್ಟ ಅನುಭವಿಸುತ್ತದೆ ಎಂದು ರೈತರು ಅಲವತ್ತುಕೊಂಡರು.
ಕಳೆದ ಮೂರು ದಿನಗಳಿಂದ ಹಾಲು ಉತ್ಪಾದಕರಿಗೆ ಯುಗಾದಿ ಕೊಡುಗೆಯಾಗಿ ಹಾಲಿನ ಬೆಲೆ ಇಳಿಕೆ ಮಾಡಿದ್ದು, ಹಾಲು ಖರೀದಿ ಮಾಡುವ ಗ್ರಾಹಕರನ್ನು ಚುನಾವಣೆ ಸಂದರ್ಭದಲ್ಲಿ ಓಲೈಕೆ ಮಾಡುವ ಹುನ್ನಾರ ಎಂದು ಆರೋಪಿಸಿದರು.
ಎಚ್ಚರಿಕೆ: ರೈತ ಮುಖಂಡ ಚನ್ನಬಸವಯ್ಯ ಮಾತನಾಡಿ, ಜನವರಿ ತಿಂಗಳಿಂದ ಜೂನ್ತನಕ ಬೇಸಿಗೆ ಇದ್ದ ಸಂದರ್ಭದಲ್ಲಿ ಹಸುಗಳಿಗೆ ಸರಿಯಾದ ಮೇವು ಇಲ್ಲದೆ ಹಾಲಿನ ಪ್ರಮಾಣ ಕುಂಠಿತವಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಹಾಲಿನ ದರವನ್ನು ಇಳಿಕೆ ಮಾಡಿ ಸರ್ಕಾರ, ರೈತ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಅಲ್ಲದೇ, ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಸರಿಯಾದ ಬೆಂಬಲ ಬೆಲೆ ನೀಡಬೇಕು ಮತ್ತು ರಸಗೊಬ್ಬರದ ದರವನ್ನು ಶೀಘ್ರ ಕಡಿಮೆ ಮಾಡಬೇಕು. ಇಲ್ಲವಾದರೆ ರೈತರು ಬೀದಿಗೆ ಇಳಿದು ಹೋರಾಟ ಮಾಡುವ ದಿನ ಹತ್ತಿರವಿದೆ ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

