ಕರಿಯಮ್ಮ, ಮಲ್ಲಿಗಮ್ಮ ಜಾತ್ರೆ
ಅರಸೀಕೆರೆ: ಪಟ್ಟಣದ ಗ್ರಾಮ ದೇವತೆಗಳಾದ ಕರಿಯಮ್ಮ ಮತ್ತು ಮಲ್ಲಿಗಮ್ಮ ದೇವಿಯರ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಕರಿಯಮ್ಮದೇವಿಗೆ ಭಕ್ತರಿಂದ ಮಡಿಲು ತುಂಬುವ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಪಟ್ಟಣದ ಗ್ರಾಮದೇವತೆಗಳಾದ ಕರಿಯಮ್ಮ ಮತ್ತು ಮಲ್ಲಿಗಮ್ಮದೇವಿಯರ 45ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಶ್ರೀಕರಿಯಮ್ಮದೇವಿಯವರ ಉತ್ಸವಮೂರ್ತಿಯ ಮೆರವಣಿಗೆಯನ್ನು ಭಕ್ತಾದಿಗಳು ನೆರವೇರಿಸಿದರು. ಕೆಲವು ಮನೆಗಳಿಗೆ ತೆರಳಿದ ಗ್ರಾಮದೇವತೆಗೆ ಮಹಿಳೆಯರು ಮಡಿಲು ತುಂಬುವ ಶಾಸ್ತ್ರ ನೆರವೇರಿಸಿ ಮಂಗಳಾರತಿ ಬೆಳಗಿದರು. ಜಾತ್ರಾ ಮಹೋತ್ಸವ ಏ. 21ರಿಂದ 25ರವರೆಗೂ ನಡೆಯಲಿದ್ದು, ಏ. 24ರಂದು ಗುರುವಾರ ಮಧ್ಯಾಹ್ನ 1ಕ್ಕೆ ಮಹಾರಥೋತ್ಸವ ನಡೆಯಲಿದೆ.
ಬಿಜೆಪಿಗೆ ಕನಕ ಯುವ ಸೇನೆ ಬೆಂಬಲ
ಅರಕಲಗೂಡು: ಜಿಲ್ಲೆಯ ಹಿಂದುಳಿದ ವರ್ಗಗಳ ಮತದಾರರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ ಶಂಕರ್ ಅವರನ್ನು ಬೆಂಬಲಿಸಬೇಕು ಎಂದು ಕನಕ ಯುವ ಸೇನೆಯ ರಾಮನಾಥಪುರ ಹೋಬಿ ಅಧ್ಯಕ್ಷ ಹರಿ ನಾಗೇಂದ್ರ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 9 ಲಕ್ಷಕ್ಕೂ ಅಧಿಕ ಹಿಂದುಳಿದ ವರ್ಗದ ಮತದಾರರಿದ್ದು, ಕಳೆದ 60 ವರ್ಷಗಳಿಂದಲೂ ಜಿಲ್ಲೆಯಲ್ಲಿ ಪ್ರಭಲ ವರ್ಗದ ಜನರನ್ನೇ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಆಯ್ಕೆ ಮಾಡುತ್ತಾ ಬಂದಿದೆ. ಈ ಬಾರಿ ಭಾರತೀಯ ಜನತಾ ಪಕ್ಷ ಹಿಂದುಳಿದ ವರ್ಗದ ವಿಜಯ ಶಂಕರ್ ಅವರನ್ನು ಕಣಕ್ಕಿಳಿಸಿದ್ದು, ಸಮಾಜದ ಬಂಧುಗಳು ಮತ್ತು ಇತರೆ ಹಿಂದುಳಿದ ಎಲ್ಲಾ ವರ್ಗದವರೂ ವಿಜಯ ಶಂಕರ್ ಅವರನ್ನು ಆಯ್ಕೆ ಮಾಡಬೇಕು ಎಂದರು.
ದಿಕ್ಕುತಪ್ಪಿಸುತ್ತಿದ್ದಾರೆ: ಕೆಲವು ಕುರುಬ ಸಮಾಜದ ಮುಖಂಡರು ಸಮಾಜದ ಮುಗ್ಧ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಹಿಂದೆ ಪುಟ್ಟಸ್ವಾಮಿ ಅವರು ಕಾಂಗ್ರೆಸ್ನಿಂದ ಟಿಕೆಟ್ ಬಯಸಿ, ಟಿಕೆಟ್ ದೊರಕಲಿಲ್ಲ ಎಂಬ ಕಾರಣಕ್ಕಾಗಿ ಕೆಜೆಪಿಗೆ ಸೇರ್ಪಡೆಗೊಂಡರು. ಆಗಲೂ ಸಿದ್ದರಾಮಯ್ಯ ಅವರನ್ನು ತೊರೆದಿದ್ದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ, ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆ. ಇವರು ಕಾಂಗ್ರೆಸ್ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಗುಮಾನಿಗಳಿದ್ದು, ಇದರ ಬಗ್ಗೆ ಪುಟ್ಟಸ್ವಾಮಿ ಅವರು ಸ್ಪಷ್ಟೀಕರಣ ನೀಡಬೇಕು. ಪುಟ್ಟಸ್ವಾಮಿಯಂಥ ಮುಖಂಡರಿಂದ ಸಮಾಜಕ್ಕೆ ಯಾವ ಉಪಯೋಗವೂ ಆಗದು. ಈ ಹಿನ್ನೆಲೆಯಲ್ಲಿ, ಸಜ್ಜನರಾದ ವಿಜಯಶಂಕರ್ ಅವರನ್ನು ಬೆಂಬಲಿಸಿ ಎಂದು ಅವರು ಕೋರಿದರು. ಈ ಸಂದರ್ಭದಲ್ಲಿ, ಕನಕ ಯುವ ಸೇನೆ ಉಪಾಧ್ಯಕ್ಷ ಪ್ರದೀಪ್ ಉಪಸ್ಥಿತರಿದ್ದರು.
ವಿದ್ಯಾವರ್ಧಕ ಎಂಬಿಎ ವಿದ್ಯಾರ್ಥಿಗಳು ಸಿಂಗಾಪುರಕ್ಕೆ
ಮೈಸೂರು: ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಗಳು ಏ.7 ರಿಂದ 12 ರವರೆಗೆ ಹಮ್ಮಿಕೊಂಡಿರುವ 5 ದಿನಗಳ ಸಿಂಗಪೂರ್ ಪ್ರವಾಸಕ್ಕೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಗೌರವ ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮೀನಾರಾಯಣ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

