ಮಹಿಳೆಯರು ಮಾನಸಿಕವಾಗಿ ಪ್ರಬಲ
ಹಾಸನ: ಮಹಿಳೆ ಪುರುಷರಿಗಿಂತಲೂ ಮಾನಸಿಕವಾಗಿ ಪ್ರಬಲಳಾಗಿರುವುದರಿಂದ ಜೀವನದಲ್ಲಿ ವಿವಿಧ ಪಾತ್ರಗಳನ್ನು ಅಂದರೆ ಕೌಟುಂಬಿಕವಾಗಿ ವಿವಿಧ ಕಾರ್ಯಗಳ ಜೊತೆಗೆ ಉದ್ಯೋಗ ಕಾರ್ಯಗಳನ್ನು ಸಮತೋಲನಗೊಳಿಸಿ, ನಿರ್ವಹಿಸಿ, ಸಾಧಕಿ ಎನಿಸಿಕೊಳ್ಳುತ್ತಿದ್ದಾಳೆ ಎಂದು ಡಿಎಚ್ಓ ಪಿ.ಎಲ್ ಡಾ. ಶ್ಯಾಮಲಾದೇವಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ ಕಾಲೇಜು, ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಅನನ್ಯ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಕಲ ಚೇತನ ವಿದ್ಯಾರ್ಥಿಗಳಿಗೆ ಕಲಿಕಾ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಿವಿಮಾತು: ಆತ್ಮಸ್ಥೈರ್ಯದೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯತೆ ಇದೆ. ರಕ್ತಹೀನತೆ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಬಳ ಲುತ್ತಿದ್ದು, ಸಕ್ರಿಯವಾಗಿ ಪಾಠ ಪ್ರವಚನಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಚರ್ಚೆ ಅಗತ್ಯ: ಅನನ್ಯ ಟ್ರಸ್ಟ್ನ ಕೆ.ಟಿ. ಜಯಶ್ರೀ ಮಾತನಾಡಿ, ಮಹಿಳಾ ಸಮಸ್ಯೆಗಳು ತಲತಲಾಂತರಿರದಿಂದ ನಿರಂತರವಾಗಿ ಬಂದಿದೆ. ಅವುಗಳನ್ನು ಓಂದೇ ದಿನದಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಕೇವಲ ಮಹಿಳೆಯರೇ ಸಮಸ್ಯೆಗಳನ್ನು ಕುರಿತು ಚರ್ಚೆ ಮಾಡಿದರೆ ಸಾಧ್ಯವಿಲ್ಲ. ಮಹಿಳೆ - ಪುರುಷರು ಇಬ್ಬರೂ ಸಮಸ್ಯೆ ಕುರಿತು ಚರ್ಚಿಸಿದರೆ ಮಹಿಳೆಯರ ಸಮಸ್ಯೆಗಳಿಗೆ ಅಂತ್ಯ ಹಾಡಬಹುದು ಎಂದರು.
ಪುರುಷರ ಕರ್ತವ್ಯ: ಪ್ರೊ.ಡಿ.ಜಿ. ಕೃಷ್ಣೇಗೌಡ ಮಾತನಾಡಿ, ಮಹಿಳೆಯರ ಅಂತಾರಾಷ್ಟ್ರೀಯ ದಿನಾಚರಣೆಯನ್ನು ಪುರುಷರು ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಇದು ಪುರುಷರ ಕರ್ತವ್ಯ ಕೂಡ ಎಂದು ಹೇಳಿದರು.
ಕರೆ: ವಿಕಲಚೇತನ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದ ಸಮಾಜ ಸೇವಕಿ ವಿಜಯ ಕುಮಾರಿ ಮುರಾರಪ್ಪ ಮಾತನಾಡಿ, ಸಮಸ್ಯೆ ಎಂಬುದು ಜೀವನದಲ್ಲಿ ಸಾಮಾನ್ಯ. ಎದೆಗುಂದದೇ, ಸಮಸ್ಯೆಗೆ ಬೆನ್ನು ತೋರಿಸದೆ ಮುಂದೆ ನಡೆದರೆ ಸಮಸ್ಯೆ ಎನಿಸುವುದಿಲ್ಲ. ನನ್ನ ಕಾರ್ಯ ನಿರ್ವಹಣೆಗೆ ಅಂಗವಿಕಲತೆ ಎಂದೂ ಧಕ್ಕೆಯಾಗಿಲ್ಲ. ನಾನು ಎಲ್ಲರಂತೆ ಕಾರ್ಯ ನಿರ್ವಹಿಸಲು ಶಕ್ತಳಾಗಿದ್ದೇನೆ. ಆದ್ದರಿಂದ ವಿಕಲಚೇತನರು ಧೈರ್ಯದಿಂದ ಮುನ್ನುಗ್ಗಿ ಜೀವನವನ್ನು ಸಾರ್ಥಕತೆಗೊಳಿಸಬೇಕು ಎಂದು ಕರೆ ನೀಡಿದರು.
ಸಮಾಜಶಾಸ್ತ್ರ ವಿಭಾಗದ ಡಾ.ವಿ. ಸುನಿತಾ ಮಾತನಾಡಿ, ಅಂಗವಿಕಲತೆಗೆ ಯಾವುದೇ ಮಕ್ಕಳನ್ನು ಗುರುತಿಸಿ, ವಿವರ ನೀಡಿದರೆ ಅವರಿಗೆ ಸಹಾಯ ಮಾಡುವ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಅವಲೋಕನಕ್ಕೆ ಸಹಕಾರಿ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ. ಮೋಹನ್ ಮಾತನಾಡಿ, ಎಲ್ಲಾ ಅಂಗಾಂಗಳನ್ನು ಹೊಂದಿರುವ ಸಾಮಾನ್ಯ ಮನುಷ್ಯರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಪರಿತಪಿಸುತ್ತಿರುವ ದಿನಗಳಲ್ಲಿ ವಿಕಲಚೇತನರು ಮಾಡುತ್ತಿರುವ ಸಾಧನೆ ತಮ್ಮನ್ನು ಅವಲೋಕನ ಮಾಡಿಕೊಳ್ಳುವಲ್ಲಿ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಡಾ. ಶ್ಯಾಮಲಾದೇವಿ, ವಿಜಯಕುಮಾರಿ ಮುರಾರಪ್ಪ ಅವರನ್ನು ಸನ್ಮಾನಿಸಲಾಯಿತು. ಡಾ.ಎಂ.ಕೆ. ದೇವಪ್ಪ, ವನಿತಾ, ಮನ್ಸೂರ್ ಪಾಷಾ ಹಾಗೂ ಇತರೆ ಅಧ್ಯಾಪಕರು ಇದ್ದರು. ದೊರೆಸ್ವಾಮಿ ಮತ್ತು ತಂಡದವರು ಪ್ರಾರ್ಥಿಸಿದರು. ವೇಣುಗೋಪಾಲ್ ಸ್ವಾಗತಿಸಿದರು. ಎಚ್.ಡಿ. ಜಯಂತ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

