ಬೈರಾಂಬುದಿ ಹೊಂಗ್ಯಮ್ಮ ದೇವಿ ಜಾತ್ರೆಗೆ ಇಂದು ಚಾಲನೆ
ಅರಸೀಕೆರೆ: ತಾಲೂಕಿನ ಭೈರಾಂಬುದಿ ಗ್ರಾಮದಲ್ಲಿ ಹೊಂಗ್ಯಮ್ಮ ದೇವಿ ಜಾತ್ರಾ ಮಹೋತ್ಸವ ಏ. 6ರಿಂದ 11ರವರೆಗೆ ನಡೆಯಲಿದೆ ಎಂದು ದೇವಾಲಯದ ಸಂಕೋಡನಹಳ್ಳಿ ಸಿದ್ದಯ್ಯ (ಸ್ವಾಮಿ) ತಿಳಿಸಿದ್ದಾರೆ. ಏ. 6ರಂದು ಸಂಕೋಡನಹಳ್ಳಿ ಗ್ರಾಮದಲ್ಲಿ ಸಂಪ್ರದಾಯದಂತೆ ಮದುವಣಿಗೆ ಶಾಸ್ತ್ರ ಭಾನುವಾರ ರಾತ್ರಿ ನಡೆಯಲಿದೆ. ಏ. 7ರಂದು ಸಂಜೆ ಭೈರಾಂಬುದಿ ಗ್ರಾಮಕ್ಕೆ ತೆರಳಲಿದ್ದು ಮಂಗಳವಾರ ಗ್ರಾಮಸ್ಥರಿಂದ ಬಾಯಿ ಬೀಗ, ಬೇವಿನ ಸೀರೆ, ಇನ್ನಿತರೆ ಕಾರ್ಯಕ್ರಮಗಳಿವೆ. ಏ. 9 ಬುಧವಾರ ಅಮ್ಮನವರನ್ನು ಬಿಡದಿ ಮನೆಗೆ ಕಳುಹಿಸುವುದು. ಏ. 10ರಂದು ಪುಣ್ಯಾರ್ಚನೆ, ಶಾಂತಿಹೋಮ, ಬ್ರಹ್ಮರಥೋತ್ಸವ, ಸಂಜೆ ಮಲ್ಲಿಗೆಮ್ಮನವರ ಕೆಂಡ ಸೇವೆ, ಚಲುವರಾಯ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿವೆ. ಏ. 11ರಂದು ಬೆಳಗ್ಗೆ 6ಕ್ಕೆ ಹೊಂಗ್ಯಮ್ಮ ದೇವಿಯವರ ಮಹಾರಥೋತ್ಸವ ಜರುಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

