41.56 ಕೋಟಿ ರಾಜಸ್ವ ಸಂಗ್ರಹ
ಹಾಸನ: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯು 2013-14ನೇ ಸಾಲಿನಲ್ಲಿ ಮಾ. 31ರ ಅಂತ್ಯಕ್ಕೆ ರಾಜಸ್ವ ಗುರಿ ರು. 41.15 ಕೋಟಿ ನಿಗದಿಪಡಿಸಿದ್ದು, ರು. 41.56 ಕೋಟಿ ಸಂಗ್ರಹಿಸಿ ಶೇಕಡ 101ರಷ್ಟು ರಾಜಸ್ವ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಹಾಸನದ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಡಿ. ಅಲ್ಮೇಡ ತಿಳಿಸಿದ್ದಾರೆ.
2013-14ನೇ ಸಾಲಿನಲ್ಲಿ ವಾಹನ ತಪಾಸಣೆ ವೇಳೆ 1451 ಪ್ರಕರಣ ದಾಖಲಿಸಲಾಗಿದ್ದು ಈ ಸಂದರ್ಭದಲ್ಲಿ ರು. 1,36,11,722 ರು ತೆರಿಗೆ ಮತ್ತು ರು. 90,98,750 ದಂಡ ಸೇರಿದಂತೆ ಒಟ್ಟು ರು. 2,27,10,522 ವಸೂಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯುವತಿ ನಾಪತ್ತೆ
ಹೊಳೆನರಸೀಪುರ: ತಾಲೂಕಿನ ತಾತನಹಳ್ಳಿ ಗ್ರಾಮದ ದಿ. ಸಿದ್ದರಾಮೇಗೌಡರ ಪತ್ನಿ ಮಂಜಮ್ಮ ಅವರ ಪುತ್ರಿ ಆಶಾ (21) ಮನೆಯಿಂದ ಹೊರಹೋದವರು ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ದುಂಡುಮುಖ, ದೃಢಕಾಯ ಶರೀರ, ಗೋದಿ ಬಣ್ಣ ಹೊಂದಿದ್ದು ಕನ್ನಡ ಮಾತನಾಡುತ್ತಾರೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಆಶಾ ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದರು. ಗದ್ದದ ಮೇಲೆ ಹಳೆ ಗಾಯದ ಗುರುತು, ಬಲ ಕೆನ್ನೆಯ ಮೇಲ್ಭಾಗ ಹಳೆ ಗಾಯದ ಗುರುತು ಇದೆ. ಈ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಳೆನರಸೀಪುರ ಠಾಣೆ ದೂರವಾಣಿ 08175-273308 ಅಥವಾ ಹಾಸನ ಆರಕ್ಷಕ ಅಧೀಕ್ಷಕರ ಕಚೇರಿ ದೂರವಾಣಿ 08172-268410 ಅಥವಾ 08172-268845 ಸಂಪರ್ಕಿಸಬೇಕೆಂದು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

