ಸಂಗೀತ ದತ್ತಿ ಉಪನ್ಯಾಸ
ಹಾಸನ: ವಿಶ್ವದಲ್ಲಿಯೇ ಶಾಸ್ತ್ರೀಯ ಸಂಗೀತದಲ್ಲಿ ನೀಡಿರುವ ಕನ್ನಡದ ನಿಜವಾದ ಕೊಡುಗೆ ಎಲ್ಲೂ ಕಂಡು ಬರುವುದಿಲ್ಲ ಎಂದು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ತಿಳಿಸಿದ್ದಾರೆ. ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.
12ನೇ ಶತಮಾನದಲ್ಲಿಯೇ ಬಸವಣ್ಣ ತಮ್ಮ ವಚನದಲ್ಲಿ ಸಂಗೀತವನ್ನು ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ರಾಜ-ಮಹಾರಾಜರ ಕಾಲದಲ್ಲೂ ಸಂಗೀತ ಬೆಳೆದು ಬಂದು ಇಂದು ಅದು ಎಲ್ಲೆಡೆ ವಿಸ್ತರಿಸಿದೆ ಎಂದರು. ಹಂತ-ಹಂತವಾಗಿ ಶಾಸ್ತ್ರೀಯ ಸಂಗೀತ ಒಂದು ದಾಖಲೆಯನ್ನೇ ಮಾಡಿದೆ ಎಂದು ಹೇಳಿದರು. ಸಂಗೀತಕ್ಕೆ ಮನುಷ್ಯನ ಕಾಯಿಲೆ ದಮನಗೊಳಿಸಿ, ಆತನಲ್ಲಿ ಒಂದು ರೀತಿಯ ಶಕ್ತಿ ವೃದ್ಧಿಸುವ ಮಾಂತ್ರಿಕ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಆರ್.ಕೆ. ಪದ್ಮನಾಭ್ ತಮ್ಮ ನಾದಸ್ವರದ ಮೂಲಕ ಸಂಗೀತದ ರಸದೌತಣ ನೀಡಿದರು.ಪ್ರಾಂಶುಪಾಲೆ ಜೆ. ಶೈಲಜಾ ಕುಮಾರಿ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಖಜಾಂಚಿ ಆರ್. ಶೇಷಗಿರಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

