'ಕರಾಟೆಯಿಂದ ಮಾನಸಿಕ ಶಕ್ತಿ ವೃದ್ಧಿ'
ಹೊಳೆನರಸೀಪುರ: ಕರಾಟೆ ಕಲೆಯು ಬರಿಗೈನಲ್ಲಿ ಹೋರಾಡಿ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯಾಗಿದ್ದು, ಇದರಿಂದ ಆರೋಗ್ಯ, ಆತ್ಮವಿಶ್ವಾಸ ಮತ್ತು ದೃಢತೆಯಂತಹ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದು ಕರಾಟೆ-ಡೋ ಗೋಜುಕನ್ ಅಸೋಸಿಯೇಷನ್-ಇಂಡಿಯಾದ ಅಧ್ಯಕ್ಷ ಹಾಗೂ ಕರಾಟೆ ಏಷ್ಯನ್ ಪ್ರಿಯೂ ಆದ ಕೇರಳದ ಶಿಹಾನ್ ವಿಶ್ವನಾಥ್ ತಿಳಿಸಿದರು.
ಪಟ್ಟಣದಲ್ಲಿನ ಶಂಕರಮಠದಲ್ಲಿ ನಡೆದ ಕರಾಟೆ-ಡೋ ಗೋಜುಕನ್ ಅಸೋಸಿಯೇಷನ್ನಿನ ಹಾಸನ ವಲಯದ ತರಬೇತಿ ಶಾಲೆಯ 2ನೇ ವರ್ಷದ ವಾರ್ಷಿಕ ತರಬೇತಿ ಶಿಬಿರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾಟೆ ಎಂಬುದು ಕೂಡ ಹೋರಾಟದ ರಕ್ಷಣಾ ಕಲೆಯಾಗಿದೆ ಎಂದರು. ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆತ್ಮರಕ್ಷಣಾ ಕಲೆಯಾದ ಕರಾಟೆಯನ್ನು ಒಂದು ಪಠ್ಯ ವಿಷಯವನ್ನಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದ್ದು, ಇಂದು ಮಹಿಳೆಯರಿಗೆ ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಒಂದು ಉತ್ತಮ ಸಾಧನವಾಗಿದೆ ಎಂದ ಅವರು, ವೇಗ-ಶಕ್ತಿ ಮತ್ತು ಕೌಶಲ್ಯ ಒಳಗೊಂಡಿರುವ ಕರಾಟೆಯು ವಯಸ್ಸಿನ ಬೇಧವಿಲ್ಲದೇ ಎಲ್ಲರೂ ಕಲಿಯಬಲ್ಲ ಮತ್ತು ಕಲಿತಲ್ಲಿ ಬದುಕಿಗೆ ಸಹಕಾರಿಯಾಗಬಲ್ಲ ಕಲೆಯಾಗಿದೆ ಎಂದರು. ವಕೀಲ ತಾಂಡವೇಶ್ವರ ಮಾತನಾಡಿ, ದುರ್ಬಲರು ಕೂಡ ಸಬಲರನ್ನು ಎದುರಿಸುವ ಶಕ್ತಿಯನ್ನು ಕರಾಟೆ ಕಲೆ ನೀಡಿದ್ದು, ಕರಾಟೆ ತರಬೇತಿಯಿಂದ ಆರೋಗ್ಯ ವೃದ್ಧಿ, ಏಕಾಗ್ರತೆ ಮತ್ತು ಶಕ್ತಿಯುತ ದೇಹ ಹೊಂದುವುದು ಎಂದು ಅಭಿಪ್ರಾಯಪಟ್ಟರು.
ಪ್ರಾಧ್ಯಾಪಕ ಚಂದ್ರಕುಮಾರ್ ಮಾತನಾಡಿ, ಆತ್ಮರಕ್ಷಣೆಗೆ ಉತ್ತಮ ಸಾಧನವಾದ ಕರಾಟೆಯನ್ನು ಕಲಿಯುವಲ್ಲಿ ಇಂದಿನ ಯುವ ಸಮುದಾಯ ನಿರೀಕ್ಷಿತ ಒಲವು ತೋರುತ್ತಿಲ್ಲ ಎಂದು ವಿಷಾದಿಸಿದರು. ಗೋಜುಕನ್ ಕರಾಟೆ ಶಾಲೆ ತರಬೇತುದಾರ ಸೆಂಪಾಯಿನ್ ಸ್ವಾಮಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕರಾಟೆಯ ವಿವಿಧ ಹಂತಗಳ ಪ್ರದರ್ಶನ ನೀಡಿದರು.
ಶಾಲೆಯ ಗೌರವ ಅಧ್ಯಕ್ಷ ಬಾ.ರಾ.ಸುಬ್ಬರಾಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎನ್.ನಾಗರಾಜ್, ಕರಾಟೆ ಸಾಧಕರಾದ ಮೃದುಲಾ ಮಧುವಿಶ್ವನಾಥ್, ಸುನಿಲ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

