ಗೌಡರ ಜನಪರ ಯೋಜನೆ ಎಲ್ಲಿವೆ?
ಸಕಲೇಶಪುರ: ದೇಶದ ಪರಮ ಅಧಿಕಾರಿ ಅನುಭವಿಸಿ ಬಂದಿರುವ ಎಚ್.ಡಿ ದೇವೇಗೌಡ ತಮ್ಮ ಅಧಿಕಾರದ ಅವಧಿಯಲ್ಲಿ ಜಾರಿಗೊಳಿಸಿರುವ
ಒಂದು ಯೋಜನೆ ಹೆಸರು ಹೇಳಲಿ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಸವಾಲು ಹಾಕಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಡವರ ಬಗ್ಗೆ ಕನಿಕರ ಇಲ್ಲದವರು, ಒಡೆದು ಆಳವುದನ್ನು ರೂಢಿಮಾಡಿಕೊಂಡವರು. ಜಾತಿ-ಜಾತಿ ಮಧ್ಯೆ ವೈಷಮ್ಯ ಮೂಡಿಸಿ ತಮ್ಮ ರಾಜಕೀಯ ಬದುಕಿಗೆ ಏಣಿಯಾಗಿಸಿಕೊಂಡವರನ್ನು ಜಿಲ್ಲೆಯ ಪಜ್ಞಾವಂತ ಮತದಾರರು ಈ ಬಾರಿ ಸೋಲಿಸುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಜಿಲ್ಲೆಯ ದಿಕ್ಕು ಬದಲಿಸುವ ಈ ಮಹಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಇದುವರೆಗೆ ಜಿಲ್ಲೆಯಲ್ಲಿದ್ದ ರಾಜಕೀಯ ದಾಸ್ಯವನ್ನು ಬಡಿದೊಡಿಸ ಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎ.ಮಂಜು ಮಾತನಾಡಿ, ಈ ಬಾರಿ ದೇವೇಗೌಡರಿಗೆ ಹಾಗೂ ಜೆಡಿಎಸ್ಗೆ ಕೊನೆ ಚುನಾವಣೆಯಾಗಲಿದ್ದು ಮುಂದಿನ ದಿನಗಳಲ್ಲಿ ಜೆಡಿಎಸ್ ಇತಿಹಾಸ ಸೇರಲಿದೆ. ಆದ್ದರಿಂದ ಮತದಾನದ ದಿನ ಮತದಾರರು ಹೆಚ್ಚು ಯೋಚಿಸಿ ಮತಚಲಾಯಿಸಿ ಬೇಕು ಎಂದರು. ಜಿಲ್ಲೆಯಾದ್ಯಂತ ದೇವೇಗೌಡರ ವಿರೋಧಿ ಅಲೆ ಎದ್ದಿದ್ದು, ಕಾರ್ಯಕರ್ತರು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ವಿರೋಧಿ ಅಲೆಯನ್ನು ಕಾಂಗ್ರೆಸ್ ಪರವಾಗಿ ಬಳಸಿಕೊಳ್ಳ ಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ, ಮಾಜಿ ಶಾಸಕರಾದ ಎಸ್.ಎಂ ಆನಂದ್, ಸಿ.ಎಸ್ ಪುಟ್ಟೇಗೌಡ, ರಾಜೇಗೌಡ, ಎಚ್.ಎಂ ವಿಶ್ವನಾಥ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್, ಮುಖಂಡರಾದ ಎಚ್.ಪಿ ಕಾಂತರಾಜ್, ತುಳಸಿಪ್ರಸಾದ್, ಸಣ್ಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

