ಪಾದಚಾರಿ ಮಾರ್ಗ ದುರಸ್ತಿಗೊಳಿಸಿ
ಹಾಸನ ನಗರದಲ್ಲಿ ಬಹಳ ವರ್ಷಗಳಿಂದ ಪ್ರಸಿದ್ಧಿ ಪಡೆದಿರುವ ಹರ್ಷಮಹಲ್ ಹೋಟೆಲ್-ವೈಷ್ಣವಿ ಲಾಡ್ಜ್ ಎದುರು ಫುಟ್‌ಪಾತ್ ಕಲ್ಲು ಕಿತ್ತು ಹೋಗಿ ಗುಂಡಿ ಬಿದ್ದು ಮಣ್ಣು ಚೆಲ್ಲಿ ಅಸ್ತವ್ಯಸ್ತಗೊಂಡಿದೆ.ಇಲ್ಲಿ ನಿತ್ಯ ಸಾವಿರಾರು ಜನರು ತಿರುಗಾಡುತ್ತಾರೆ. ಹೋಟೆಲ್ ಗ್ರಾಹಕರೇ ಸಾಕಷ್ಟು ಜನರು ಇರುತ್ತಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ತಕ್ಷಣ ದುರಸ್ತಿ ಮಾಡಬೇಕು. ಇಲ್ಲವೇ ಹೋಟೆಲ್ ಮಾಲೀಕರಾದರೂ ಮುತುವರ್ಜಿ ವಹಿಸಿ ಸುಸ್ಥಿತಿಗೆ ತರಬೇಕು. ನಗರದ ಸ್ಥಿತಿ ಉತ್ತಮಗೊಳ್ಳಲು ಪ್ರತಿಯೊಬ್ಬ ವ್ಯಾಪಾರಿ, ಉದ್ಯಮಿ ಹಾಗೂ ಪ್ರಜೆ ಕೂಡ ತನ್ನದೇ ಆದ ಕೊಡುಗೆ ನೀಡುವುದು ಸೂಕ್ತ. ಈ ಬಗ್ಗೆ ನಗರಸಭೆಯವರಾಗಲೀ, ಹೋಟೆಲ್‌ನವರಾಗಲೀ ಗಮನಹರಿಸಬೇಕು.
ಟಿ ರಂಗಸ್ವಾಮಿ, ಪ್ರಭು, ಯದು,ದಯಾನಂದ್, ತ್ಯಾಗರಾಜ್, ಹಾಸನ
ಅರಸೀಕೆರೆ ತಾಲೂಕಿನ ಅತಿ ಹಿಂದುಳಿದ ಹಾಗೂ ಬರಪೀಡಿತ ಕಣಕಟ್ಟೆ ಹೋಬಳಿಯ ವ್ಯಾಪ್ತಿಗೆ ಬರುವ ನರಸೀಪುರ ಗ್ರಾಮ ತಾಲೂಕು ಪಂಚಾಯ್ತಿ ಕ್ಷೇತ್ರವಾಗಿದ್ದು, ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನವಾಗಿದೆ. ಇಲ್ಲಿ 500 ರಿಂದ 600 ಕುಟುಂಬಗಳಿದ್ದು, 2500 ಜನರು ವಾಸಿಸುತ್ತಿದ್ದಾರೆ. ಗ್ರಾಮ ತಾಲೂಕು ಕೇಂದ್ರದಿಂದ 30 ಕಿಮೀ ದೂರದಲ್ಲಿದೆ. ಎಷ್ಟು ದೂರವಿದೆಯೋ ಅಷ್ಟೇ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಹಾಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಗ್ರಾಮದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಹೆಚ್ಚಿದ್ದು, ಇಲ್ಲಿ ಒಂದು ಆಸ್ಪತ್ರೆಯೂ ಇರುವುದಿಲ್ಲ. ದೂರದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಶಾಲಾ- ಕಾಲೇಜು ಮತ್ತು ಕಚೇರಿ ಸಮಯಕ್ಕೆ ಬಸ್‌ಗಳಿಲ್ಲದೆ ಪರದಾಡುವಂತಾಗಿದೆ.ಪ್ರಯಾಣಿಕರಿಗೆ ಯಾವುದೇ ರೀತಿಯ ತಂಗುದಾಣವಿಲ್ಲದೆ ಬಯಲು ಜಾಗದಲ್ಲಿ ಕಾಯಬೇಕಾಗಿದೆ. ಇಲ್ಲಿ ಅಂಗನವಾಡಿ ಕಟ್ಟಡವಿಲ್ಲದೆ ಸರ್ಕಾರಿ ಶಾಲೆಯ ಚಿಕ್ಕ ಕೊಠಡಿಯಲ್ಲೇ ನಡೆಸಲಾಗುತ್ತಿದೆ. ಇಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬರುವ ಅಭ್ಯರ್ಥಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವರೋ ಕಾದು ನೋಡಬೇಕು.
ಟಿ ಷಡಾಕ್ಷರಿ, ನರಸಿಂಹಸ್ವಾಮಿ, ಪ್ರಸನ್ನಕುಮಾರ್, ಜಗದೀಶ್, ನರಸೀಪುರ ಗ್ರಾಮಸ್ಥರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

