ಹಾಸನ

ಚುನಾವಣೆ ಎದುರಿಸಲು ಸನ್ನದ್ಧ

Published On :

ಅರಸೀಕೆರೆ: ಲೋಕಸಭಾ ಚುನಾವಣೆಗೆ ಅಗತ್ಯ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ನಟರಾಜ್ ಮಾಹಿತಿ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಅಂಕಿ ಅಂಶಗಳು ಮತಗಟ್ಟೆ ವಿವರ, ಮತಗಟ್ಟೆ ಸಿಬ್ಬಂದಿ, ತರಬೇತಿ, ಚುನಾವಣಾ ಕಾರ್ಯಕ್ಕೆ ಬಳಸಲಾಗುವ ವಾಹನಗಳ ಸೇವೆ, ವೋಟರ್ ಚೀಟಿ ಹಂಚಿಕೆ ಕುರಿತಂತೆ ವಿವರ ನೀಡಿದರು.
ತರಬೇತಿ: ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 203432 ಮತದಾರರಿದ್ದು, ಈ ಪೈಕಿ 101721 ಪುರುಷ ಮತದಾರರಿದ್ದರೆ, 101687 ಮಹಿಳೆಯರು ಹಾಗೂ ಇತರೆ 24 ಮತದಾರರು ಸೇರ್ಪಡೆಗೊಂಡಿದ್ದಾರೆ. 275 ಮತಗಟ್ಟೆಗಳನ್ನು ತೆರೆಯಲಾಗಿದ್ದು ಸೂಕ್ಷ್ಮ 50, ಅತಿ ಸೂಕ್ಷ್ಮ 37, ಹಾಗೂ ವಾರ್ನಬಲ್ 14 ಕೇಂದ್ರಗಳನ್ನು ತೆರೆಯಲಾಗಿದೆ. 305 ಮಂದಿ ಪಿ.ಆರ್.ಓ., 305 ಮಂದಿ ಎ.ಪಿ.ಆರ್.ಓ. ಹಾಗೂ 610 ಮಂದಿ ಪೋಲಿಂಗ್ ಅಧಿಕಾರಿಗಳನ್ನು ನಿಯುಕ್ತಿ ಮಾಡಿರುವುದಾಗಿ ಹೇಳಿದ ಅವರು, ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ವಿವಿಧ ಹಂತಗಳ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಚುನಾವಣಾ ಕೆಲಸಕ್ಕಾಗಿ 13 ಜೀಪುಗಳು, 38 ಬಸ್ಸುಗಳು, ಹಾಗೂ 3 ಮ್ಯಾಕ್ಸಿ ಕ್ಯಾಬ್ ವಾಹನ ಬಳಕೆ ಮಾಡಲಾಗುತ್ತಿದೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಅರ್ಹ ಮತದಾರರಿಗೆ ಭಾವಚಿತ್ರವುಳ್ಳ ವೋಟರ್ ಸ್ಲಿಪ್‌ಗಳನ್ನು ಮತಗಟ್ಟೆ ಹಂತದ ಅಧಿಕಾರಿಗಳ ಮುಖಾಂತರ ಹಂಚಿಕೆ ಮಾಡುತ್ತಿರುವುದಾಗಿ ತಿಳಿಸಿದರು. ಸಭೆಯಲ್ಲಿ ಚುನಾವಣಾಧಿಕಾರಿ ಶಕೀಲ್ ಅಹಮದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.