ಹಾಸನ

ವಿವಾದ ಎಬ್ಬಿಸಿದ ಕಾಲರ್ ಐಡಿಯಾ

Published On :

ಸಕಲೇಶಪುರ: ಸರ್ಕಾರೇತರ ಸಂಸ್ಥೆಯ ಲಾಬಿಗೆ ಮಣಿದು ಸೆರೆ ಹಿಡಿದಿರುವ ಕಾಡಾನೆಯನ್ನು ಕಾಲರ್ ಐಡಿ ಆಳವಡಿಸಿ ಕಾಡಿಗೆ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದರೆಂದು ಆರೋಪಿಸಿ ಯಸಳೂರು ಹಾಗೂ ಶಿವನಹಳ್ಳಿಕೂಡಿಗೆ ಗ್ರಾಮಸ್ಥರು ಅರಣ್ಯಇಲಾಖೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆ ಭಾನುವಾರ ತಾಲೂಕಿನ ಶಿವನಹಳ್ಳಿಕೂಡಿಗೆಯಲ್ಲಿ ನಡೆಯಿತು.
ಶನಿವಾರ ಶಿವನಹಳ್ಳಿ ಕೂಡಿಗೆ ಸಮೀಪದ ಕಾಡಿನಲ್ಲಿ ಸುಮಾರು 15 ವರ್ಷದ ಹೆಣ್ಣಾನೆಯನ್ನು ಸೆರೆಹಿಡಿದು ಗ್ರಾಮದ ಮರವೊಂದಕ್ಕೆ ಕಟ್ಟಿಹಾಕಿದ್ದಲ್ಲದೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆ ಶಿಬಿರಕ್ಕೆ ಈ ಕಾಡಾನೆಯನ್ನು ರವಾನಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು.
ಆದರೆ, ಭಾನುವಾರ ಸರ್ಕಾರೇತರ ಸಂಸ್ಥೆಯೊಂದರ ಲಾಭಿಗೆ ಮಣಿದು ಸೆರೆಹಿಡಿದಿರುವ ಕಾಡಾನೆಗೆ ಕಾಲರ್ ಐಡಿ ಆಳವಡಿಸಿ ಮತ್ತೆ ಅದೇ ಕಾಡಿಗೆ ಬಿಡಲು ಉದ್ದೇಶಿಸಲಾಗಿದೆ. ಕಾಲರ್ ಐಡಿ ಹಾಕಲು ತಮಿಳುನಾಡಿನಿಂದ ಅಧಿಕಾರಿಗಳ ತಂಡ ಕಳೆದ ಎರಡು ದಿನಗಳ ಹಿಂದೆಯೇ ಗ್ರಾಮಕ್ಕೆ ಆಗಮಿಸಿತ್ತು ಎಂದು ಆರೋಪಿಸಿರುವ ಗ್ರಾಮಸ್ಥರು, ಈಗ ಹಿಡಿದಿರುವ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಟ್ಟರೆ ಅಪಾಯ ಹೆಚ್ಚಲಿದೆ. ಒಮ್ಮೆ ಗುಂಪಿನಿಂದ ಹೊರಹೋದ ಆನೆಯನ್ನು ಕಾಡಾನೆಗಳು ಗುಂಪಿಗೆ ಸೇರಿಸದ ಪರಿಣಾಮ ಒಂಟಿಯಾಗಿ ಅಲೆಯುವ ಈ ಕಾಡಾನೆ ಅಪಾರ ಮೊತ್ತದ ಬೆಳೆ ನಾಶಕ್ಕೆ ಕಾರಣವಾಗುವುದಲ್ಲದೆ ಜೀವಹಾನಿಗೂ ಕಾರಣವಾಗಲಿದೆ. ಆದ್ದರಿಂದ, ಸೆರೆ ಹಿಡಿದಿರುವ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಬಾರದು. ಈ ತಕ್ಷಣವೇ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ, ಸ್ಥಳದಲ್ಲಿದ್ದ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿ ಹಾಗೂ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ಅವರೊಂದಿಗೆ ಮಾತಿನ ಚಕಮುಕಿ ನಡೆಸಿ ಪ್ರತಿಭಟನೆಗೆ ಮುಂದಾದರು.
ಈ ಸಂದರ್ಭದಲ್ಲಿ  ಸ್ಥಳಕ್ಕಾಮಿಸಿದ ಅರಣ್ಯಸಂರಕ್ಷಣಾಧಿಕಾರಿ ಗಣೇಶ್ಭ್‌ಟಟ್ಟ್ರ್ಗಾಮಸ್ಥರೊಂದಿಗೆ ಮಾತನಾಡಿ, ಸೆರೆ ಹಿಡಿಯಲಾಗಿರುವ ಕಾಡಾನೆಯ ಕುಟುಂಬವನ್ನು ಪತ್ತೆಮಾಡಿ ಏಕಕಾಲಕ್ಕೆ ಕಾಡಾನೆ ಕಾರ್ಯಚರಣೆ ನಡೆಸ ಬೇಕಾಗಿರುವುದರಿಂದ ಕಾಲರ್ ಐಡಿ ಆಳವಡಿಸುವುದು ಅನಿವಾರ್ಯ. ಆದರೆ ಈಗ ಹಿಡಿದಿರುವ ಕಾಡಾನೆಯನ್ನು ಸಕ್ರೆಬೈಲ್ ಆನೆಶಿಭಿರಕ್ಕೆ ಸ್ಥಳಾಂತರಿಸುವುದು, ಮುಂದಿನ ದಿನಗಳಲ್ಲಿ ಸೆರೆಹಿಡಿಯಲಿರುವ ಕಾಡಾನೆಗೆ ಸ್ಥಳದಲ್ಲೆ ಕಾಲರ್ ಐಡಿ ಆಳವಡಿಸಿ ಬಿಡಲಾಗುವುದು ಎಂಬ ಹೇಳಿಕೆ ನೀಡುವ ಮೂಲಕ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.