ಹೆಣ್ಣು ಜವಾಬ್ದಾರಿ ಅರಿತು ಬಾಳಬೇಕು
ಹೊಳೆನರಸೀಪುರ: ಮಹಿಳೆಯರ ರಕ್ಷಣೆಗಾಗಿ ಕಾನೂನಿನಡಿಯಲ್ಲಿ ಎಷ್ಟೇ ಸಹಕಾರವನ್ನು ನೀಡಿದರೂ ಕೂಡ ಎಲ್ಲವೂ ಕಾನೂನಿನಿಂದಲೇ ಸಾಧ್ಯವಿಲ್ಲ. ಬದಲಿಗೆ ಪ್ರತಿ ಹೆಣ್ಣು ತನ್ನ ಜವಾಬ್ದಾರಿ ಅರಿತು ಬಾಳುವ ಅವಶ್ಯಕತೆ ಕೂಡ ಅತಿ ಮುಖ್ಯವಾದ ಅಂಶವಾಗಿದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಪ್ರೊ. ನಯನತಾರಾಮಣಿ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಾನಪದ ಕಲಾ ಪರಿಷತ್ತು, ಸರ್ಕಾರಿ ಕಾನೂನು ಕಾಲೇಜು ಮತ್ತು ಒಕ್ಕಲಿಗ ಹಿತರಕ್ಷಣಾ ಸೇನೆಯ ಸಹಯೋಗದಲ್ಲಿ ಇತ್ತೀಚೆಗೆ ಇಲ್ಲಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ನಡೆದ ಜಾನಪದ ಗೀತ ಗಾಯನ ಸ್ಪರ್ಧೆ ಹಾಗೂ ಜಾನಪದ ಕಲಾ ಪರಿಷತ್ತಿನ ಮಹಿಳಾ ಘಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾಗೃತಿ ಹಾಗೂ ಕಳಕಳಿ ಹೆಣ್ಣಿನ ಪ್ರತಿ ಹಂತದಲ್ಲೂ ಇರಬೇಕಾದದ್ದು ಅವಶ್ಯಕ ಎಂದ ಅವರು, ಹೆಣ್ಣು ಕನಸುಗಾರ್ತಿಯಾಗಿಯಷ್ಟೇ ಇರದೇ, ಕ್ರಿಯಾಶೀಲೆಯೂ ಆಗಿರುವ ಜೊತೆಗೆ, ಬದುಕು ಮತ್ತು ಬದುಕನ್ನು ಪ್ರೀತಿಸುವ ಗುಣವನ್ನು ಮಹಿಳೆ ಹಾಗೂ ಪುರುಷ ಬೆಳೆಸಿಕೊಂಡಲ್ಲಿ ಬದುಕಿನ ಯಾವ ಹಂತದಲ್ಲಿಯೂ ಸಮಸ್ಯೆಯಾಗಲಾರದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಲತಾಬಾಯಿ ವಹಿಸಿದ್ದರು, ಜಾನಪದ ಕಲಾ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಗುಣಶೇಖರ್, ಸಂಚಾಲಕಿ ಕಾವ್ಯಶ್ರೀಕೃಷ್ಣ, ಕಾರ್ಯದರ್ಶಿ ವಿಜಯಕುಮಾರಿ, ಕಾಲೇಜಿನ ಸಾಂಸ್ಕತಿಕ ಕಾರ್ಯದರ್ಶಿ ರೇಣುಕಾಸಾಸನಮರಿ ಹಾಗೂ ಪ್ರಧಾನ ಭಾಷಣ ಮಾಡಿದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ರಾಧಾ ವೆಂಕಟೇಶ್ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

