ಜೆಡಿಎಸ್ ಟೀಕಿಸುವ ನೈತಿಕತೆ ಇಲ್ಲ
ಬೇಲೂರು: ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡರು ವಿನಾಕಾರಣ ನಮ್ಮ ಕುಟುಂಬದ ಗುರಿ ಇಟ್ಟುಕೊಂಡು ಸಲ್ಲದ ಮಾತುಗಳನ್ನು ಆಡುವುದನ್ನು ಬಿಡಬೇಕು. ಜೆಡಿಎಸ್ ಟೀಕಿಸುವ ಯಾವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ಭವಾನಿ ರೇವಣ್ಣ ಕಿಡಿಕಾರಿದ್ದಾರೆ.
ಬೇಲೂರು ತಾಲೂಕಿನ ನಾನಾ ಕಡೆಗಳಲ್ಲಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರ ಸೋಮವಾರ ಮತಯಾಚಿಸಿದರು. ಈ ಸಂದರ್ಭದಲ್ಲಿ ಜವರೇಗೌಡರು ಮಾಡಿರುವ ಟೀಕೆಗಳ ವಿರುದ್ಧ ಅವರು ಕಿಡಿಕಾರಿದರು.
ಮನವಿ: ಬೇಲೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೂಳೇನಹಳ್ಳಿ,ಅಡವಿ ಬಂಟೇನಹಳ್ಳಿ,ಬೆಟ್ಟದ ಆಲೂರು,ಅಂಗಡಿಹಳ್ಳಿ, ಹಗರೆ, ಸಂಕೇನಹಳ್ಳಿ,ಇಬ್ಬೀಡು, ಚಿನ್ನೇನಹಳ್ಳಿ,ಅಗಸರಹಳ್ಳಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮಿಂಚಿನ ಪ್ರಚಾರ ನಡೆಸಿದ ಭವಾನಿ ರೇವಣ್ಣ, ರಾಜಕೀಯ ಜೀವನ ಆರಂಭಿಸಿದ ದಿನದಿಂದಲೂ ರೈತರು, ಬಡವರ ಪರ ಹೋರಾಟ ಮಾಡುತ್ತಿರುವ ದೇವೇಗೌಡರನ್ನು ಈ ಬಾರಿಯೂ ಬೆಂಬಲಿಸಿ ಅತ್ಯಧಿಕ ಮತದಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ನಂತರ, ಜವರೇಗೌಡರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ ಅವರು, ಜೆಡಿಎಸ್ನಲ್ಲಿ ಸಕಲ ಸೌಲಭ್ಯ ಪಡೆದು, ಸದ್ಯ ಕಾಂಗ್ರೆಸ್ ಸೇರಿದ್ದಾರೆ. ಆದರೆ, ರೇವಣ್ಣನವರ ಬಗ್ಗೆ ಮಾತನಾಡುವ ಅವರು ಮಾತಿನ ಮೇಲೆ ಹಿಡಿತ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ನ ಕೆಲ ಮುಖಂಡರಿಗೆ ದೇವೇಗೌಡರನ್ನು ಟೀಕೆ ಮಾಡುವುದನ್ನು ಬಿಟ್ಟರೆ ಅವರಿಗೆ ಬೇರೆ ಕೆಲಸವಿಲ್ಲ. ಕಾಂಗ್ರೆಸ್ ಮುಖಂಡರು ಒಂದು ಸಾರಿ ಅತ್ಮಾವಲೋಕನ ಮಾಡಿಕೊಳ್ಳಲಿ. ಜಿಲ್ಲೆಗೆ ಕಾಂಗ್ರೆಸ್ನ ಕೊಡುಗೆ ಏನು ಎಂದು ಛೇಡಿಸಿದರು.
ಹಳೇಬೀಡು ಮತ್ತು ಮಾದೀಹಳ್ಳಿ ಹೋಬಳಿ ಏತನೀರಾವರಿ ಯೋಜನೆ ಮಂದಗತಿಯಲ್ಲಿ ಕಾಮಾಗಾರಿ ನಡೆಯಲು ನೇರವಾಗಿ ಸ್ಥಳೀಯ ಶಾಸಕ ವೈ.ಎನ್.ರುದ್ರೇಶ್ ಗೌಡ ಕಾರಣ ಎಂದು ಅವರು ದೂರಿದರು.
ಕ್ಷೇತ್ರದಲ್ಲಿ ಜೆಡಿಎಸ್ಗೆ ಭಾರಿ ಪ್ರಮಾಣದ ಬೆಂಬಲವಿದ್ದು, ದೇವೇಗೌಡರ ಜಯ ಶತಸಿದ್ಧ. ಇಡೀ ರಾಜ್ಯದಲ್ಲಿ ದೇವೇಗೌಡರು ಪ್ರವಾಸದಲ್ಲಿ ಇದ್ದಾರೆ. ನಾನು ಮತ್ತು ರೇವಣ್ಣ ಜಿಲ್ಲೆಯಲ್ಲಿ ಚುನಾವಣಾ ಪ್ರವಾಸ ಆರಂಭ ಮಾಡಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

