ಹಾಸನ

ಸಿದ್ಧವಾಗುತ್ತಿರುವ ಮತಯಂತ್ರಗಳು

Published On :

ಹಾಸನ: ಲೋಕಸಭಾ ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತ ಯಂತ್ರಗಳನ್ನು ಅಂತಿಮವಾಗಿ ಮತದಾನಕ್ಕೆ ಸಜ್ಜುಗೊಳಿಸುವ (ಕ್ಯಾಂಡೆಟ್ಸ್) ಪ್ರಕ್ರಿಯೆ ಎಲ್ಲಾ ಕ್ಷೇತ್ರಗಳಲ್ಲಿ ನಡೆದಿದೆ.  
ಹಾಸನ ಮತ್ತು ಚನ್ನರಾಯಪಟ್ಟಣ ಕ್ಷೇತ್ರಗಳಲ್ಲಿ ಸೋಮವಾರ ಮತ ಯಂತ್ರಗಳಿಗೆ ಅಭ್ಯರ್ಥಿಗಳ ಚಿಹ್ನೆಗಳನ್ನೊಳಗೊಂಡ ಮತಪತ್ರಗಳನ್ನು ಅಳವಡಿಸಿ, ಅಂತಿಮ ಹಂತದ ಮತದಾನಕ್ಕೆ ಮತಯಂತ್ರಗಳನ್ನು ಅಣಿಗೊಳಿಸಿ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗಳನ್ನು ರ್ಯಾಂಡಿಮೈಸೇಷನ್ ಮಾಡಲಾಯಿತು.
ಅಧಿಕಾರಿಗಳ ಹಾಜರು: ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ಶರತ್ ಸಹಾಯಕ ಪೊಲೀಸ್ ಅಧಿಕಾರಿ ರಶ್ಮಿ, ತಹಸೀಲ್ದಾರ್ ಮಂಜುನಾಥ್, ಚುನಾವಣಾಧಿಕಾರಿ ಬಾಬುರಾವ್ ಈ ಕಾರ್ಯ ಪರಿಶೀಲಿಸಿದರು. ಚನ್ನರಾಯಪಟ್ಟಣದಲ್ಲಿ 297 ಬ್ಯಾಲೆಟ್ ಯೂನಿಟ್, 297 ಕಂಟ್ರೋಲ್ ಯೂನಿಟ್‌ಗಳನ್ನು ಮತದಾನಕ್ಕೆ ಸಿದ್ಧಪಡಿಸಲಾಯಿತು. ಇವಿಎಂ ನೋಡಲ್ ಅಧಿಕಾರಿ ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಪಲ್ಲವಿ ಕೆ.ಆರ್., ಸಹಾಯಕ ಚುನಾವಣಾಧಿಕಾರಿ ಡಾ.ಜಿ. ಸುರೇಶ್, ತಹಸೀಲ್ದಾರ್, ಕೃಷ್ಣ ಮೇಲ್ವಿಚಾರಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.