ಹಾಸನ

ಯುವಕರಿಂದ ಮತಜಾಗೃತಿ ಬೈಕ್‌ರ್ಯಾಲಿ

Published On :
ಹಾಸನ: ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣ ಮಂಗಳವಾರ ವಿಭಿನ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಯುವ ಮತದಾರರ ಜಾಗೃತಿ ಜಾಥಾ ವಿದ್ಯಾರ್ಥಿಗಳ ಆನಂದಕ್ಕೆ ವೇದಿಕೆ ಒದಗಿಸಿತು.
ಸ್ವೀಪ್ ಸಮಿತಿ ವತಿಯಿಂದ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಬಿಆರ್‌ಪಿಗಳ ಬೈಕ್ ಜಾಥಾ ಏರ್ಪಡಿಸಲಾಗಿತ್ತು. ಜಾಥಾಗೆ ಹೆಚ್ಚಿನ ಮೆರುಗು ನೀಡಲು ವಾದ್ಯ ಸಂಗೀತದ ವ್ಯವಸ್ಥೆ ಮಾಡಲಾಗಿತ್ತು. ಇದೇ ಅವಕಾಶವನು ಬಳಸಿಕೊಂಡು ವಿದ್ಯಾರ್ಥಿಗಳು ತಮಟೆ, ಡೋಲು ಸದ್ದಿಗೆ ಹೆಜ್ಜೆ ಹಾಕಿದರು. ಸುತ್ತಲೂ ನೆರೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಅಲ್ಲದೇ ಮತದಾನದ ಪ್ರತಿಜ್ಞೆ ಮಾಡಿದರು.
ತಮಟೆ ಬಡಿದ ಅಧಿಕಾರಿಗಳು: ನಗರಸಭೆ ಆಯುಕ್ತ ಕೃಷ್ಣಮೂರ್ತಿ ಹಾಗೂ ಆರೋಗ್ಯ ಪರಿವೀಕ್ಷಕರಾದ ಸ್ಟೀಫನ್ ಪ್ರಕಾಶ್ ವಾದ್ಯ ನುಡಿಸುತ್ತಿದ್ದ ತಂಡದೊಂದಿಗೆ ಸೇರಿ ಬಹಳ ಹೊತ್ತುಗಳ ಕಾಲ ಲಯಬದ್ಧವಾಗಿ ತಮಟೆಗಳನು ಬಡಿದದ್ದು ವಿಶೇಷವಾಗಿತ್ತು. 
ಜಾಥಾ ಉದ್ಘಾಟನೆ: ನಗರದ ವಿಜ್ಞಾನ ಕಾಲೇಜಿನಿಂದ ಹೊರಟ ಯುವ ಸಮೂಹದ ಬೈಕ್ ರ್ಯಾಲಿಗೆ ತಹಸೀಲ್ದಾರ್ ಮಂಜುನಾಥ್ ಮತ್ತು ನಗರಸಭಾ ಆಯುಕ್ತ ಕೃಷ್ಣಮೂರ್ತಿ ಚಾಲನೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ವಿನೋದ್ ಚಂದ್ರ, ತಾಲ್ಲೂಕು ಸಮಿತಿ ನೋಡಲ್ ಅಧಿಕಾರಿ ಶಿವಣ್ಣ, ಎನ್.ಎಸ್.ಎಸ್. ಅಧಿಕಾರಿ ಕೃಷ್ಣಪ್ಪ, ಕ್ಷೇತ್ರ ಪ್ರಚಾರ ಇಲಾಖೆಯ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು, ಕಲಾ ಕಾಲೇಜು, ವೈದ್ಯಕೀಯ ಕಾಲೇಜು, ಎನ್ ಡಿ ಆರ್‌ಕೆ ಕಾಲೇಜು, ತಾಲ್ಲೂಕಿನ ಎಲ್ಲಾ ಬಿಆರ್‌ಪಿಗಳು ಸೇರಿದಂತೆ ನಾನಾ ಕಾಲೇಜುಗಳ  ವಿದ್ಯಾರ್ಥಿಗಳು ಬೈಕ್ ಜಾಥಾದಲ್ಲಿ ಪಾಲ್ಗೊಂಡು ಹಾಸನ ನಗರದ ಹೇಮಾವತಿ ನಗರ, ಶಾಂತಿನಗರ, ಅಡ್ಲಿಮನೆ ರಸ್ತೆ, ಆರ್.ಸಿ. ರಸ್ತೆ, ದೊಡ್ಡಿ ರಸ್ತೆ, ಕೆ.ಆರ್. ಪುರಂ, ಬಿ.ಎಂ. ರಸ್ತೆ, ಮತ್ತಿತರೆಡೆ ಸಂಚರಿಸಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.
ಬೀದಿ ನಾಟಕ ಉದ್ಘಾಟನೆ: ಭಾರತ ಚುನಾವಣಾ ಆಯೋಗವು ಕನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯಾದ್ಯಂತ ಮತದಾರರ ಜಾಗೃತಿಗೆ ಬೀದಿ ನಾಟಕ ಕಾರ್ಯಕ್ರಮ ಏರ್ಪಡಿಸಲಾಯಿತು. ಹಾಸನದಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕರಿಯಪ್ಪ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.