ಸ್ತ್ರೀ ಸಬಲೆ ಎಂಬುದನ್ನು ನಿರೂಪಿಸುತ್ತಿದ್ದಾಳೆ: ಶೈಲಜಾ
ಹಾಸನ: ಮಹಿಳೆ ಅಬಲೆ ಎಂಬ ಕಾಲವೊಂದಿತ್ತು. ಆದರೆ ಈ ಶತಮಾನದಲ್ಲಿ ಸ್ತ್ರೀ ಸಬಲೆ ಎಂಬುದನ್ನು ನಿರೂಪಿಸುತ್ತಿದ್ದಾಳೆ ಎಂದು ಮಕ್ಕಳ ತಜ್ಞೆ ಡಾ. ಶೈಲಜಾ ಅಭಿಪ್ರಾಯಪಟ್ಟರು.
ನಗರದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಮಹಿಳಾ ಹಿತರಕ್ಷಣಾ ವಿಭಾಗದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸ್ತ್ರೀ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಆದರೆ ನಾನಾ ವಯೋವಾನದ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರ ಸ್ವಯಂರಕ್ಷಣೆಯ ತಂತ್ರಗಳನ್ನು ಕರಗತ ಮಾಡಿಕೊಂಡು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಸಮರ್ಥರಾಗಬೇಕು ಎಂದರು.
ಕರಾಟೆ ತರಬೇತುದಾರ ದೀಪಕ್ ಮಾತನಾಡಿ, ಮಹಿಳೆಯರಿಗೆ ಕರಾಟೆ ತರಬೇತಿಯ ಉಪಯುಕ್ತತೆ ಬಗ್ಗೆ ಮಾತನಾಡಿದರು.
ಈ ತರಬೇತಿಯು 3 ತಿಂಗಳುಗಳ ಕಾಲ ನಡೆಯಲ್ಲಿದ್ದು, ವಾರಕ್ಕೆರಡು ದಿನ ತರಬೇತಿ ನೀಡಲಾಗುತ್ತದೆ. 50 ವಿದ್ಯಾರ್ಥಿನಿಯರು ಈ ತರಬೇತಿಗಾಗಿ ನೋಂದಣಿ ಮಾಡಿಸಿದ್ದಾರೆ.
ಆಡಳಿತ ವಿಭಾಗದ ಡೀನ್ ಡಾ.ಟಿ.ಬಿ. ತ್ರಿಪಾಠಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಪ್ರಕಾಶ್ ಎಲ್. ಹೆಗಡೆ ಹಾಗೂ ಮಹಿಳಾ ಹಿತರಕ್ಷಣಾ ವಿಭಾಗದ ಮುಖ್ಯ ಸಂಯೋಜಕರಾದ ಡಾ. ಉಮಾ ಬಿ ಗೋಪಾಲ್ ಇದ್ದರು. ಡಾ. ವಿಜಯಲಕ್ಷ್ಮಿ ಎಂ. ಸ್ವಾಗತಿಸಿದರು. ಮೈತ್ರಿ ಪ್ರಾರ್ಥಿಸಿದರು. ಡಾ. ದೀಪಾ ವಂದಿಸಿದರು.
ಮತ ಜಾಗೃತಿಗಾಗಿ ಬೀದಿ ನಾಟಕ
ಹೊಳೆನರಸೀಪುರ: ಪಟ್ಟಣದ ಗಾಂಧಿ ವೃತ್ತದಲ್ಲಿ ಮತದಾನ ಜಾಗೃತಿ ಉಂಟು ಮಾಡುವ ಬೀದಿ ನಾಟಕದ ಕಲಾ ಜಾಥಾ ಉದ್ಘಾಟನೆಯನ್ನು ತಹಸೀಲ್ದಾರ್ ಎಸ್. ರಾಘವೇಂದ್ರ ಕಂಜರ ಬಾರಿಸುವ ಮೂಲಕ ಉದ್ಘಾಟಿಸಿದರು. ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಆರ್. ನರಸಿಂಹಯ್ಯ ರವರು ವಾಹನಗಳಿಗೆ ಅಂಟಿಸುವ ಸ್ಟಿಕ್ಕರ್ ಬಿಡುಗಡೆ ಮಾಡಿದರು. ಮಾನವ ಕಲಾ ತಂಡದ ನೇತೃತ್ವದಲ್ಲಿ ಕೆಳಕಂಡ ಸ್ಥಳಗಳಲ್ಲಿ ಯಶಸ್ವಿಯಾಗಿ ಬೀದಿನಾಟಕ ಮತ್ತು ಹಾಡುಗಳ ಮೂಲಕ ಜಾಗೃತಿ ಉಂಟುಮಾಡಲಾಗಿದೆ ಎಂದು ಹೊಳೆನರಸೀಪುರ ತಾಲೂಕು ನೋಡೆಲ್ ಅಧಿಕಾರಿ ತಿಳಿಸಿದರು.
ಕರಪತ್ರ ವಿತರಣೆ: ಗಾಂಧಿವೃತ್ತದಲ್ಲಿ ಅಪಾರ ಜನಸಂದಣಿ ನಡುವೆ ಪ್ರದರ್ಶನಗೊಂಡ ಬೀದಿ ನಾಟಕ, ನಂತರ, ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ, ನಂತರ ಕೆ.ಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತದನಂತರ ಎ.ಡಿ. ಕಾಲೋನಿಯ ಪ್ರಮುಖ ರಸ್ತೆಯುದ್ದಕ್ಕೂ ಸಾಗಿತು. ಆನಂತರ, ಅಂಬೇಡ್ಕರ್ ನಗರದ ಕೇಂದ್ರ ಸ್ಥಳದಲ್ಲಿ ಕಿರುನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಜಾಥಾ ಕಲಾವಿದರು ಕರಪತ್ರ ವಿತರಿಸಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಹೊಳೆನರಸೀಪುರ ತಾಲೂಕು ಸ್ವೀಪ್ ಸಮಿತಿ ಸದಸ್ಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಬಾಬು ಮತ್ತು ತಾಲೂಕು ಪಂಚಾಯ್ತಿ ಸಹಾಯಕ ವೆಂಕಟೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

