ಅಭಿವೃದ್ಧಿ ಅಂದ್ರೆ ರೇವಣ್ಣ: ಪುರಸಭೆ ಅಧ್ಯಕ್ಷ ಬಿ.ಗಿರೀಶ್
ಬೇಲೂರು: ಬೇಲೂರು ಪುರಸಭಾ ವ್ಯಾಪ್ತಿಗೆ ಜೆಡಿಎಸ್ ಕೊಡುಗೆ ಅಪಾರವಾಗಿದ್ದು, ಜಿಲ್ಲೆಯಲ್ಲಿ ಜನಪರ ಅಭಿವೃದ್ಧಿ ಎಂದರೆ ಎಚ್.ಡಿ. ರೇವಣ್ಣ ಎಂದು ಬೇಲೂರು ಪುರಸಭೆ ಅಧ್ಯಕ್ಷ ಬಿ.ಗಿರೀಶ್ ವರ್ಣಿಸಿದ್ದಾರೆ. ಪಟ್ಟಣದ ಹೊಸನಗರದಲ್ಲಿ ಎಚ್.ಡಿ.ದೇವೇಗೌಡರ ಪರ ಇತ್ತೀಚೆಗೆ ಮತಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇಲೂರು ಪುರಸಭೆ ಜಿಲ್ಲೆಯಲ್ಲಿ ಉತ್ತಮ ಪುರಸಭೆ ಎಂದು ಹೆಸರು ಪಡೆದಿದೆ, ಕಾರಣ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ರೇವಣ್ಣನವರು ಕಾಲ ಕಾಲಕ್ಕೆ ಪಟ್ಟಣಕ್ಕೆ ಅಗತ್ಯವಿದ್ದು ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಪಟ್ಟಣಕ್ಕೆ ಮುಖ್ಯವಾಗಿ ಸೇತುವೆ, ಉನ್ನತ ವೃತ್ತಿ ನಿರತ ಕಾಲೇಜು ಇನ್ನು ಹಲವು ಹತ್ತು ಮೂಲ ಸೌಲಭ್ಯ ನೀಡಿದ್ದಾರೆ ಎಂದರು. ಪುರಸಭೆ ಸದಸ್ಯೆ ಭಾರತಿ ಅರಣ್ ಕುಮಾರ್ ಮಾತನಾಡಿ, ಪಟ್ಟಣದ ಒಂದನೇ ವಾರ್ಡ್ ಹೊಸನಗರ ಜೆಡಿಎಸ್ನ ಕೊಡುಗೆ ಕಾರಣವಾಗಿದೆ, ಈ ದಿಸೆಯಲ್ಲಿ ಈ ನಗರಕ್ಕೆ ಎಚ್.ಕೆ. ಕುಮಾರಸ್ವಾಮಿ ನಗರ ಎಂದು ಕರೆಯುತ್ತಾರೆ. ಹೊಸನಗರಕ್ಕೆ ಆನೇಕ ಮೂಲಭೂತ ಸೌಲಭ್ಯ ಕೂಡ ಕಲ್ಪಿಸಿದ್ದಾರೆ ಎಂದರು. ಹಾಸನ ಜಿಲ್ಲಾ ಲೋಕಸಭಾ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಭಾರಿ ಮತದ ಅಂತರದಿಂದ ಜಯಗಳಿಸುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಮುಖ ಭಂಗವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರವಿ ಅಣ್ಣೇಗೌಡ, ಉಮಾ, ರಾಜಪ್ಪಣ್ಣ, ಅರಣ್ ಕುಮಾರ್ ಇನ್ನು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

