ಗೌಡರಿಗೆ ಅಭಿವೃದ್ಧಿ ಕೆಲಸ ಶ್ರೀ ರಕ್ಷೆ: ಭವಾನಿ ರೇವಣ್ಣ
ಸಕಲೇಶಪುರ: ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ದೇವೇಗೌಡರಿಗೆ ಶ್ರೀರಕ್ಷೆ. ರೈತರ ಪರ ಹೋರಾಟ ಮಾಜಿ ಪ್ರಧಾನಿ ದೇವೇಗೌಡರಿಂದ ಮಾತ್ರ ಸಾಧ್ಯವೆಂದು ಭವಾನಿ ರೇವಣ್ಣ ಹೇಳಿದ್ದಾರೆ.
ಪಟ್ಟಣದ ಲಯನ್ಸ್ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ವೀರಶೈವ ಸಮಾವೇಶದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭವಾನಿ ರೇವಣ್ಣ, ಜೆಡಿಎಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಜಿಲ್ಲೆಯಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲ. ಗೌಡರು ಅಧಿಕಾರದಲ್ಲಿ ಇದ್ದಾಗ ಜಿಲ್ಲೆಗೆ ನೀಡಿರುವ ಕೊಡುಗಗಳೇ ಅವರ ಗೆಲವಿಗೆ ಶ್ರೀರಕ್ಷೆ. ಬಡವರು, ದಲಿತರು, ಅಲ್ಪ ಸಂಖ್ಯಾತರ ಪ್ರೀತಿ ಗೌಡರಿಗೆ ಇದೆ ಎಂದರು. ಮಲೆನಾಡು ಭಾಗಕ್ಕೂ ಜೆಡಿಎಸ್ ಕೊಡುಗೆ ಅಪಾರವಾಗಿದೆ. ಈ ಭಾಗದ ಜನ ಪಕ್ಷದ ಮೇಲಿಟ್ಟಿರುವ ವಿಶ್ವಾಸ, ನಂಬಿಕೆ ಹಾಗೆಯೇ ಉಳಿದಿದೆ ಎಂದರು. ದೇವೆಗೌಡರಿಂದ ಉಪಯೋಗ ಪಡೆದ ನಕಲಿ ಮುಖಂಡರುಗಳು ಇದೀಗ ದೇವೆಗೌಡರ ಕುಟುಂಬವನ್ನು ನಿರಂತರವಾಗಿ ಕೆಣಕುತ್ತಿದ್ದು ಇಂತಹ ಟೀಕೆಗಳಿಗೆ ನಾವು ಹೆದರುವುದಿಲ್ಲ, ಈ ಬಾರಿ ಜನತೆಯ ಉತ್ತರ ಕೊಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ನ ಸಾಂಪ್ರಾದಾಯಿಕ ಮತಗಳ ಜೊತೆಗೆ ಎಲ್ಲಾ ವರ್ಗಗಳ ಮತಗಳನ್ನು ಪಡೆಯಲು ಕಾರ್ಯಕರ್ತರು ಪ್ರಯತ್ನಿಸಬೇಕು. ಬಿಜೆಪಿ ಹಾಗೂ ಕಾಂಗ್ರೆಸ್ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ್ದು ಗೌಡರು ಹಾಗೂ ರೇವಣ್ಣ ಅಭಿವೃದದ್ಧಿ ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಕೈಗೊಂಡ ಪರಿಣಾಮ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 6 ಜನ ಶಾಸಕರು ಜೆಡಿಎಸ್ನಿಂದ ಆಯ್ಕೆಯಾಗಿದ್ದಾರೆ ಎಂದರು. ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕುಮಾರಸ್ವಾಮಿ, ಜೆಡಿಸ್ ಅಧ್ಯಕ್ಷ ಕೆ. ಎಲ್. ಸೋಮಶೇಖರ್, ಬಾಳು ಶಿವಕುಮಾರ್, ಚಂಚಲ ಕುಮಾರಸ್ವಾಮಿಇತರರು ಇದ್ದರು.
ಗೌಡರ ಪರ ಮತಯಾಚನೆ
ರಾಮನಾಥಪುರ: ಅರಕಲಗೂಡು ತಾಲೂಕಿನ ಪ್ರಜ್ಞಾವಂತ ಮತದಾರರು ರೈತರ ಪರ ಕಾಳಜಿಯನ್ನು ಹೊಂದಿರುವ ಹಾಗೂ ಯೋಗ್ಯ ಜನಪ್ರತಿನಿಧಿಯನ್ನು ಆರಿಸಬೇಕಾಗಿದ್ದು, ಹಾಸನ ಲೋಕಸಭೆಯ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡರನ್ನು ಬೆಂಬಲಿಸುವಂತೆ ಪೊಟ್ಯಾಟೋ ಕ್ಲಬ್ನ ಗೌರವಾಧ್ಯಕ್ಷ ಮತ್ತು ಯುವ ನೇತಾರ ಎಚ್. ಯೋಗಾ ರಮೇಶ್ ಕೊಣನೂರು ಹೋಬಳಿಯ ಮತದಾರರಲ್ಲಿ ಜೆಡಿಎಸ್ ಪರ ಭಾನುವಾರ ಮತಯಾಚಿಸಿದರು. ನಂತರ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಕೃಪಾಕಟಾಕ್ಷದಿಂದ ಗೆದ್ದು ಬಂದ ಎ.ಮಂಜು ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ಭರದಲ್ಲಿ ತನ್ನ ಭಾವಚಿತ್ರದೊಂದಿಗೆ ಪಕ್ಷದ ಬೇರೆ ನಾಯಕರ ಭಾವಚಿತ್ರವಿರುವ ಬ್ಯಾನರ್ ಹಾಕಿಸಿದ್ದು, ಅದರಲ್ಲಿ ಸಿದ್ದರಾಮಯ್ಯನವರ ಭಾವಚಿತ್ರ ಇಲ್ಲದೇ ಇರುವುದು ಕುರುಬ ಸಮಾಜಕ್ಕೆ ಅಸಮಾಧಾನ ಉಂಟಾಗಿದೆ. ಬ್ಯಾನರ್ ಹರಿದು ಹಾಕಿ ಸಮಾಜದ ಕೆಂಗಣ್ಣಿಗೆ ಗುರಿಯಾದ ವಿಷಯ ಎಲ್ಲರಿಗೂ ತಿಳಿದಿದೆ ಎಂದರು.
ಕೊಣನೂರು ಹೋಬಳಿಯ ಉಳ್ಳೇನಹಳ್ಳಿ, ಸರಗೂರು, ಬಾನುಗುಂದಿ, ಕಡವಿನಹೊಸಹಳ್ಳಿ, ಶೀಗೋಡು, ಸಿದ್ದಾಪುರ, ವೆಂಕಟೇಶಪುರ, ಕಾಡನೂರು, ಸಿ. ಅಬ್ಬೂರು, ಬನ್ನೂರು, ಮರಿಯಾನಗರ, ಹೊಡೆನೂರು, ಕಾರ್ಗಲ್ಲು, ತರಗಳಲೆ, ಹಿಂದಲಹಳ್ಳಿ, ಹೊನಗಾನಹಳ್ಳಿ, ಹಂಡ್ರಂಗಿಗ್ರಾಮಗಳಲ್ಲಿ ಮತಯಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

