ಜೇನುಕಲ್ ಅದ್ಧೂರಿ ರಥೋತ್ಸವ
ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಯಾದಪುರದ ಜೇನುಕಲ್ ಸಿದ್ದೇಶ್ವರಸ್ವಾಮಿ ಮಹಾ ರಥೋತ್ಸವವು ಬುಧವಾರ ಮುಂಜಾನೆ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ವಿಜಂೃಭಣೆಯಿಂದ ನೆರವೇರಿತು.
ರಾಜ್ಯದಲ್ಲಿಯೇ ಅತ್ಯಂತ ಪ್ರಸಿದ್ಧಿಯಾದ ತಾಲೂಕಿನ ಸುಕ್ಷೇತ್ರ ಯಾದಪುರ ಗ್ರಾಮದ ಶ್ರೀಜೇನುಕಲ್ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜ್ಯದಲ್ಲಿನ ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಹರಿಹರ, ಧಾರವಾಡ, ಹುಬ್ಬಳ್ಳಿ ಮಹಾನಗರಗಳ ಕಡೆಗಳಿಂದ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಬಂದು ಮಹಾರಥೋತ್ಸವದಲ್ಲಿ ತಮ್ಮ ಸೇವೆ ಸಲ್ಲಿಸಿ ಹರಕೆ ಕಾಣಿಕೆಗಳನ್ನು ದೇವರಿಗೆ ಸಮರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ.
ಪ್ರತಿ ವರ್ಷದಂತೆ ಚೈತ್ರ ಶುದ್ಧಹುಣ್ಣಿಮೆಯ ಏ. 15ರ ಮಂಗಳವಾರ ಬೆಳಿಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ವಿವಿಧ ಉತ್ಸವಗಳು: ಸಂಜೆ ಜೇನುಕಲ್ ಬೆಟ್ಟದ ಮೇಲಿನ ಮೂಲ ದೇವರ ಸನ್ನಿಧಿಯಲ್ಲಿ ಅಂಕುರಾರ್ಪಣೆ ಹಾಗೂ ನೂರೊಂದೆಡೆ ಸೇವೆ ಕಾರ್ಯಗಳನ್ನು ಧಾರ್ಮಿಕ ವಿಧಿ- ವಿಧಾನಗಳಂತೆ ನೆರವೇರಿಸಲಾಯಿತು. ನಂತರ ಗ್ರಾಮದಲ್ಲಿ ಶ್ರೀಬಸವೇಶ್ವರಸ್ವಾಮಿ ಉತ್ಸವ, ಉಪ್ಪರಿಗೆ ಗದ್ದುಗೆ ಮಂಟಪ್ಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವವೃಕ್ಷೋತ್ಸವ ಸೇರಿದಂತೆ ಅನೇಕ ಉತ್ಸವಾದಿ ಕಾರ್ಯಕ್ರಮಗಳನ್ನು ಅತ್ಯಂತ ವೈಭವದಿಂದ ಸಹಸ್ರಾರು ಭಕ್ತರು ನೆರವೇರಿಸಿದರು.
ರಥೋತ್ಸವ: ಏ. 16ರಂದು ಬುಧವಾರ ಮುಂಜಾನೆ ಶ್ರೀಗಳ ದೇವಾಲಯದಲ್ಲಿ ಸುಮಂಗಲಿಯರಿಂದ ಬಾಯಿಬೀಗ ಧಾರಣೆಯ ಹರಕೆಯೊಂದಿಗೆ ಹಲವು ಸೇವೆಗಳ ಬಳಿಕ ರಥೋತ್ಸವಕ್ಕೆಚಾಲನೆ ನೀಡಲಾಯಿತು.
ಶ್ರೀಜೇನುಕಲ್ ಸಿದ್ದೇಶ್ವರ ಕ್ಷೇತ್ರಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಿ.ವಿ.ಬಸವರಾಜು ಗೌರವಾಧ್ಯಕ್ಷ ಜಿ.ಎಸ್. ಗುರುಸಿದ್ದಪ್ಪ, ಕಾರ್ಯದರ್ಶಿ ವೀರಭದ್ರಪ್ಪ, ಖಜಾಂಚಿ ಎಸ್.ಎನ್. ರಾಮಣ್ಣ, ನಿರ್ದೇಶಕ ಜಿ. ನಾಗರಾಜ್, ವೈ.ಎನ್. ಸಿದ್ದಪ್ಪ, ವಹಿವಾಟುದಾರರಾದ ಚಂದ್ರಪ್ಪ ಹಾಗೂ ಗ್ರಾಮದ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾವಿರಾರು ಭಕ್ತಾಧಿಗಳಿಗೆ ಜಾತ್ರಾ ಮಹೋತ್ಸವದಲ್ಲಿ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

