ಹಾಸನ

ಬಿಗಿ ಭದ್ರತೆಯಲ್ಲಿ ಮತಯಂತ್ರ ರವಾನೆ

Published On :

ಕನ್ನಡಪ್ರಭ ವಾರ್ತೆ, ಸಕಲೇಶಪುರ, ಏ. 16
ಮತಪಟ್ಟಿಗೆಗಳನ್ನು ತಾಲೂಕು ಕೇಂದ್ರದಿಂದ ನಿಗದಿತ ಮತಕೇಂದ್ರಗಳಿಗೆ ಬುಧವಾರ ಬಿಗಿಭದ್ರತೆ ನಡುವೆ ಕಳುಹಿಸಿಕೊಡಲಾಯಿತು.
ಮುಂಜಾನೆಯಿಂದಲೇ ಪಟ್ಟಣದ ಸಂತ ಜೋಸೆಫ್ ಶಾಲೆ ಅವರಣದಲ್ಲಿ ಚುನಾವಣಾಧಿಕಾರಿಗಳು ಕರ್ತವ್ಯದಲ್ಲಿ ನಿರತರಾಗಿದ್ದು ಶಾಲೆ ಅವರಣದಲ್ಲಿ ಹಾಕಲಾಗಿದ್ದ ವಿಶಾಲವಾದ ಶಾಮಿಯಾನದಲ್ಲಿ ತಮ್ಮ ಸರದಿಗಾಗಿ ಕಾದು ಕುಳಿತಿದ್ದರು.
ಸಕಲೇಶಪುರ-ಆಲೂರು-ಕಟ್ಟಾಯ ಹೋಬಳಿ ಸೇರಿದಂತೆ 281 ಮತಕೇಂದ್ರಗಳಿಗೆ 38 ಬಸ್‌ಗಳು 15 ಜೀಪು ಹಾಗೂ 10 ಮಿನಿಬಸ್‌ಗಳ ಮೂಲಕ ಮತಪೆಟ್ಟಿಗೆಗಳನ್ನು ಬುದವಾರ ಮಧ್ಯಾಹ್ನದ ವೇಳೆಗೆ ಕಳುಹಿಸಿಕೊಡುವ ವ್ಯವಸ್ಥೆ ಸಂಪೂರ್ಣವಾಯಿತು. ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ಪ್ರಕ್ರಿಯೆಯ ಮೇಲ್ವಿಚಾರಣೆ ಉಪವಿಭಾಗಧಿಕಾರಿ ಮಧುಕೇಶ್ವರ ವಹಿಸಿದ್ದರು. ಮತಘಟ್ಟೆಗಳಿಗೆ ತೆರಳುವ ಸಿಬ್ಬಂದಿಗೆ ಮಧ್ಯಾಹ್ನ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಬಡಿಸಲಾಯಿತು.
ಮತ ಕೇಂದ್ರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ತಾಲೂಕು ಕೇಂದ್ರದಿಂದಲೇ ಮಾಡಲಾಗಿತ್ತು. ಆನೆಹಾವಳಿ ಪೀಡಿತ ಪ್ರದೇಶಗಳಿಗೆ ಹಾಗೂ ಬಸ್ ಸಂಚಾರ ಸಾದ್ಯವಿಲ್ಲದ ಸ್ಥಳಗಳಿಗೆ ಜೀಪ್ ಮೂಲಕ ಮತಪೆಟ್ಟಿಗೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತೆ ಕ್ರಮವಾಗಿ ಪ್ರಥಮ ಚಿಕಿತ್ಸಾ ಕಿಟ್ ರವಾನೆ
ಅರಸೀಕೆರೆ: ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸಾ ಕಿಟ್ ನೀಡುವುದರ ಮೂಲಕ ಚುನಾವಣಾ ಆಯೋಗ ಹೊಸ ಯೋಜನೆ ಜಾರಿಗೊಳಿಸಿದೆ.
ಈ ಕಿಟ್ಟಿನಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾಗಬಹುದಾದ ಒಟ್ಟು ಹದಿನಾಲ್ಕು ರೀತಿಯ ಪದಾರ್ಥಗಳಿವೆ. ಅವುಗಳು, ಪ್ಲಾಸ್ಟರ್, ಬ್ಯಾಂಡೇಜ್, ಹತ್ತಿ, ಪೋವಿಡೋನ್-ಐಯೋಡಿನ್ ಮುಲಾಮು, ಟಿಂಚರ್, ಗ್ಲೂಕೋಸ್ ಪೌಡರ್, ಓ.ಆರ್.ಎಸ್. ಪೌಡರ್, ಚಾಕೊಲೇಟ್, ಮಾತ್ರೆಗಳಾದ ಆಸ್ಪಿರಿನ್, ಆಮ್ಲೋಡಿಪೈನ್ (ಬಿಪಿ), ಡೊಂಪ್ರಿಡೊನ್ (ವಾಂತಿನಿಲ್ಲಲು), ಸಿಪ್ರೊಫ್ಲಾಕ್ಸಿನನ್ಟಿನಿಡಝೊಲ್ (ಅತಿಸಾರಕ್ಕೆ), ಒಮಿಪ್ರಝೋಲ್ (ಗ್ಯಾಸ್ಟ್ರಿಕ್), ಪ್ಯಾರಾಸಿಟಮಲ್ (ಜ್ವರಕ್ಕೆ), ಸೋರ್ಬಿಟ್ರಾಟ್ (ಎದೆನೋವಿಗೆ) ಇವುಗಳನ್ನು ಹೊಂದಿರುವ ಕಿಟ್ ಅನ್ನು ಪ್ರತಿ ಬೂತ್‌ಗೆ ಒದಗಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.