ಹಾಸನ

ವರುಣನ ರುದ್ರನರ್ತನ

Published On :

ಹೊಳೆನರಸೀಪುರ: ಆಲಿಕಲ್ಲು ಸಹಿತ ಸುರಿದ ಮಳೆ ಹಾಗೂ ಬೀಸಿದ  ಬಿರುಗಾಳಿಗೆ  ತಾಲೂಕಿನಲ್ಲಿ ಲಕ್ಷಾಂತರ ಮೌಲ್ಯಕ್ಕೂ ಹೆಚ್ಚು ತೆಂಗಿನಮರ, ಅಡಿಕೆ ಮರಗಳು ಧರೆಗುರುಳಿವೆ.
ತಾಲೂಕಿನ ಗ್ರಾಮೀಣ ಪ್ರದೇಶಗಳೂ ಸೇರಿದಂತೆ  ಪಟ್ಟಣದಲ್ಲಿ  ಮಂಗಳವಾರ  ಆರಂಭವಾದ ಆಲಿಕಲ್ಲಿನ ಮಳೆಯ ಬಿರುಸಿನ ರಭಸಕ್ಕೆ ಪಟ್ಟಣದ ಬಸ್ ನಿಲ್ದಾಣದ ಸಮೀಪದ ವಿದ್ಯುತ್ ಪರಿವರ್ತಕ ಬಿದ್ದ ಪರಿಣಾಮ ಆ ಭಾಗದ ಏಳು ವಿದ್ಯುತ್ ಕಂಬಗಳು ಹಾಳಾಗಿವೆ.
ಅಲ್ಲದೇ, ಪಟ್ಟಣದ ರೇಲ್ವೆ ನಿಲ್ದಾಣದ ಕುರ್ಚಿಗಳು, ನಿಲ್ದಾಣಕ್ಕೆ ಅಳವಡಿಸಿದ್ದ ಕಿಟಕಿಯ ಗಾಜುಗಳು ಪುಡಿಪುಡಿಯಾದವು. ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕನ ಮೇಲೆ ಬಿದ್ದ ಆಲಿಕಲ್ಲಿನ ರಭಸಕ್ಕೆ ಆತನ ಕೈ ತೀವ್ರವಾಗಿ ಗಾಯಗೊಂಡು ರಕ್ತ ಸುರಿಯಲಾರಂಭಿಸಿತು. ಪಟ್ಟಣದ ನಾನಾ ಕಡೆಗಳಲ್ಲಿ ಮಾವಿನ ಮರ ಮತ್ತು ತೆಂಗಿನ ಮರಗಳೂ ಧರೆಗುರುಳಿದ  ಕಾರಣ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಮುಂದುವರಿದಿದೆ.
ತೋಟ, ಮನೆಗೆ ಹಾನಿ: ಈಡಿಗನಹೊಸೂರು ಗ್ರಾಮದ ಶ್ರೀನಿಗೌಡ ಅವರಿಗೆ ಸೇರಿದ ತೋಟ ಹಾಗೂ ಮಾರನಾಯಕನಹಳ್ಳಿ ರಾಜೇಗೌಡ ಅವರಿಗೆ ಸೇರಿದ ತೋಟಗಳಲ್ಲಿ ರಾತ್ರಿ ಬಿದ್ದ ಗಾಳಿ ಮಳೆಯಿಂದ ನೂರಕ್ಕೂ ಹೆಚ್ಚು ತೆಂಗಿನ ಮರ ಹಾಗೂ ಅಡಿಕೆ ಮರಗಳು ನೆಲಕ್ಕೆ ಉರುಳಿದೆ. ಈ ಗ್ರಾಮಗಳಲ್ಲಿನ ಮನೆಗಳ ಛಾವಣಿಗಳು ಬಿರುಗಾಳಿಗೆ ತರಗಲೆಗಳಂತೆ ಹಾರಾಡಿದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ  ಸಂಭವಿಸಿದಲ್ಲ.
ರೇವಣ್ಣ ಭೇಟಿ: ಸುದ್ದಿ ತಿಳಿದ ಕೂಡಲೇ ಶಾಸಕ ರೇವಣ್ಣ, ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ಘಟನೆ ನಡೆದಿರುವ ಗ್ರಾಮಗಳಿಗೆ ಭೇಟಿ ನೀಡಿ  ನಷ್ಟ ಸಂಭವಿಸಿರುವ ರೈತರಿಗೆ ತಾಲೂಕು ಆಡಳಿತದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.