ಅರಸೀಕೆರೆಯಲ್ಲಿ ಶೇ. 68 ಮತ
ಅರಸೀಕೆರೆ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಗುರುವಾರ ನಡೆದ ಮತದಾನದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ 275 ಮತಗಟ್ಟೆಗಳ ಪೈಕಿ 2 ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಸ್ವಲ್ಪ ಕಾಲ ಮತದಾನ ಸ್ಥಗಿತಗೊಂಡು ಪರ್ಯಾಯ ಮತಯಂತ್ರ ಆಳವಡಿಸಿದ ನಂತರ ಮತದಾನ ಮುಂದುವರೆಯಿತು.
ಕೆಲವು ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕುಮುಖಿ ನಡೆದಿರುವುದು ಹೊರತು ಪಡಿಸಿ ಉಳಿದಂತೆ ಎಲ್ಲೆಡೆ ಶಾಂತಿಯುತವಾಗಿ ಶೇ.68 ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.
ಬಿಗಿ ಭದ್ರತೆ: ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಒಟ್ಟು 275 ಮತಗಟ್ಟೆ ಗಳಲ್ಲಿ 50 ಸೂಕ್ಷ್ಮ ಮತ್ತು 37 ಅತಿ ಸೂಕ್ಷ್ಮ ಹಾಗೂ 14 ವಾರ್ನಬಲಲ್ಮತಗಟ್ಟೆಗಳು ಎಂದು ಗುರುತಿಸಿದ್ದು, ಮುಂಜಾಗೃತ ಕ್ರಮವಾಗಿ ಅಗತ್ಯ ಪೊಲೀಸ್ ರಕ್ಷಣಾ ವ್ಯವಸ್ಥೆಯನ್ನು ಹಾಗೂ ಅವಶ್ಯಕ ಮತಗಟ್ಟೆಗಳಿಗೆ ಸಿಸಿ ಕ್ಯಾಮೆರಾಗಳ ಆಳವಡಿಕೆಯನ್ನು ಭದ್ರತಾ ದೃಷ್ಟಿಯಿಂದ ಮಾಡಲಾಗಿತ್ತು.
ಗುರುವಾರ ಮುಂಜಾನೆ 7 ಗಂಟೆಗೆ ಪ್ರಾರಂಭಗೊಂಡ ಮತದಾನದ ಪ್ರಕ್ರಿಯೆಯೂ ಆರಂಭವಾಗುತ್ತಿದಂತೆ ಕ್ಷೇತ್ರದ ಬೆಂಡೇಕೆರೆ ಗ್ರಾಮದ ಮತಗಟ್ಟೆ ಸಂಖ್ಯೆ 95 ರಲ್ಲಿ ಆರಂಭದಲ್ಲಿಯೇ ಮತಯಂತ್ರ ಕೈಕೊಟ್ಟ ಕಾರಣ ಮತಗಟ್ಟೆ ಅಧಿಕಾರಿಗಳು ತಕ್ಷಣ ಪರ್ಯಾಯ ಮತಯಂತ್ರವನ್ನು ಬಳಸುವ ಮೂಲಕ ಮತದಾರರಿಗೆ ತಮ್ಮ ಮತದಾನ ಚಲಾಯಿಸಲು ಅನುವು ಮಾಡಿಕೊಟ್ಟ ಕಾರಣ ಯಾವುದೇ ತೊಂದರೆ ಉಂಟಾಗಲ್ಲಿಲ್ಲ, ಸಂಜೆ 4 ಗಂಟೆ ವೇಳೆಯಲ್ಲಿ ಬಾಣಾವರ ಗ್ರಾಮದ ಮತಗಟ್ಟೆ ಸಂಖ್ಯೆ 72ರಲ್ಲಿನ ಮತಯಂತ್ರ ಕೆಟ್ಟು ಹೋದ ಪರಿಣಾಮ ಒಂದು ಗಂಟೆಗಳ ಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.
ಮತಚಲಾಯಿಸಿದ ಶಾಸಕ: ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 145 ರ ಮತಗಟ್ಟೆಗೆ ತಮ್ಮ ಪತ್ನಿ ಪುತ್ರಿಯರ ಸಮೇತ ಬಂದು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು. ಮಧ್ಯಾಹ್ನದ 3 ಗಂಟೆಯ ವೇಳೆಗೆ ವೇಳೆಗೆ ಶೇ. 51ರಷ್ಟು ಮತದಾನ ನಡೆದಿದೆ. ಸಂಜೆ ನಂತರ ಎಲ್ಲೆಡೆ ಮೋಡ ಕವಿದ ವಾತವರಣ ಇದ್ದು, ಕೆಲವು ಭಾಗದ ಗ್ರಾಮಗಳಲ್ಲಿ ಮಳೆಯೂ ಸುರಿದು ವಾತವರಣ ತಂಪಾದ ಕಾರಣ ಮನೆಯಿಂದ ಜನರು ಹೊರ ಬಂದು ಸಂಜೆ 6 ಗಂಟೆ ವೇಳೆಗೆ ಸುಮಾರು ಶೇ. 68ರಷ್ಟು ಮತದಾನ ನಡೆದಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

