ಹಾಸನ

ಪ್ರತಿಭಟನೆ, ಬಹಿಷ್ಕಾರ... ಬಳಿಕ ಮತದಾನ

Published On :

ಸಕಲೇಶಪುರ: ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಜನಪ್ರತಿನಿದಿಗಳ ವಿಫಲರಾಗಿದ್ದಾರೆಂದು ಆರೋಪಿಸಿ ಪಟ್ಟಣ ಸಮೀಪದ ಗಣೇಶ್ ನಗರ ನಿವಾಸಿಗಳು ಮತದಾನ ಬಹಿಷ್ಕರಿಸಲು ಮುಂದಾದ ಘಟನೆ ನಡೆಯಿತು.
ಗ್ರಾಮದಲ್ಲಿ ಸುಮಾರು 190 ಮನೆಗಳಿದ್ದು 560ಕ್ಕೂ ಹೆಚ್ಚಿನ ಮತಗಳಿವೆ. ಆದರೆ, ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ಬೀದಿ ದೀಪದಂತಹ  ಮೂಲಭೂತ ಸೌಕರ್ಯಗಳಿಲ್ಲ. ಆದರಲ್ಲೂ ಕುಡಿಯುವ  ನೀರಿಗಾಗಿ ಇಲ್ಲಿನ ನಿವಾಸಿಗಳು ಗ್ರಾಮದಲ್ಲಿರುವ ಏಕೈಕ ಕೊಳವೆ ಬಾವಿ ಆಶ್ರಯಿಸಿದ್ದು, ಈ ಕೊಳವೆ ಬಾವಿಯಲ್ಲೂ ನಿಧಾನಗತಿಯಲ್ಲಿ ನೀರು ಬರುತ್ತಿರುವ ಕಾರಣ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂದ ಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರು ಯಾವುದೆ ಪ್ರಯೋಜನವಾಗಿಲ್ಲ.
ಸಮಸ್ಯೆಗಳ ಆಗರ: ಇತ್ತೀಚೆಗೆ ತಾಪಂ ವತಿಯಿಂದ ಐಎಂಐಎಸ್ ಯೋಜನೆಯಡಿ ಗ್ರಾಮದಲ್ಲಿ ಮೂರು ಒವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿದ್ದರು. ಇದಕ್ಕೆ ಪೈಪ್‌ಗಳ ಸಂಪರ್ಕವಿಲ್ಲ. ಕಳೆದೊಂದು ದಶಕದ ಹಿಂದೆ ಗ್ರಾಮದ ಹೊರವಲಯದಲ್ಲಿದ್ದ ನೀರಿಲ್ಲದ ಬಾವಿ ನಿರ್ಮಿಸಿದ್ದು ಈ ಬಾವಿಗೆ ಮೋಟರ್ ಆಳವಡಿಸುವುದಾಗಿ ಹೇಳಲಾಗುತ್ತಿದೆ. ಇದಲ್ಲದೆ ಗ್ರಾಮದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಭಾಗ್ಯ ಇಲ್ಲದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಚುನಾವಣಾಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೂ ನಮ್ಮ ಸಮಸ್ಯೆ ಇತ್ಯರ್ಥಕ್ಕೆ ಯಾರೂ ಮುಂದಾಗದ ಕಾರಣ ಮತದಾನ ಬಹಿಷ್ಕಾರ ತೀರ್ಮಾನಕ್ಕೆ ಇಲ್ಲಿನ ನಿವಾಸಿಗಳು ಬಂದಿದ್ದರು.
ಮನವೊಲಿಕೆ: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಪಾರ್ವತಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ಭರವಸೆ ನೀಡಿ ಗ್ರಾಮಸ್ಥರು ಮತದಾನಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಅಪಮಾನಗಳಿಂದ ಅಂಬೇಡ್ಕರ್ ಮಹಾತ್ಮರಾದರು: ನಂಜುಂಡ ಸ್ವಾಮಿ
ಚನ್ನರಾಯಪಟ್ಟಣ: ಅನೇಕ ಅಪಮಾನಗಳೇ ಅಂಬೇಡ್ಕರ್ ಅವರನ್ನು ಮಹಾತ್ಮರನ್ನಾಗಿ ಮಾಡಿತು. ಸಮಾಜ ಸುಧಾರಕರಾಗಿ ತತ್ವಜ್ಞಾನಿಯಾಗಿ ಅಪಾರ ವಿದ್ವತ್ತನ್ನು ಹಗಲು-ರಾತ್ರಿಯನ್ನದೆ ಅಧ್ಯಯನ ಮಾಡಿದವರು ಎಂದು ಪ್ರಾಧ್ಯಾಪಕ ಗಂಗಾಧರಯ್ಯ ತಿಳಿಸಿದರು.
ಅವರು ತಾಲೂಕಿನ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 123ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಬಿ. ನಂಜುಂಡಸ್ವಾಮಿ ಮಾತನಾಡಿ, ಆರು ದೇಶಗಳ ಸಂವಿಧಾನವನ್ನಷ್ಟೇ ಅಧ್ಯಯನ ಮಾಡಲಿಲ್ಲ. ಸಂವಿಧಾನ ಬರೆಯಲು ತ್ರೇತಾಯುಗ, ದ್ವಾಪರಯುಗ, ಕಲಿಯುಗ ಅನೇಕ ಇತಿಹಾಸವನ್ನು ಅರಿತು ಭವ್ಯವಾದ ಸಂವಿಧಾನದ ರಚನಾ ಶಿಲ್ಪಿಯಾದರು ಎಂದು ಬಣ್ಣಿಸಿದರು.
ಹನುಮಂತಯ್ಯ, ಶಿವಕುಮಾರ್, ವೆಂಕಟೇಶ್ ಗೌಡ, ರೂಪ. ಕೆ.ವಿ. ದೈಹಿಕ ನಿರ್ದೇಶಕ ಪ್ರಕಾಶ್ ಕುಮಾರ್, ಅಧೀಕ್ಷಕ ಲಕ್ಕೇಗೌಡ, ಅತಿಥಿ ಉಪನ್ಯಾಸಕರು ಇದ್ದರು. ವರುಣ್ ಪ್ರಾರ್ಥಿಸಿದರು. ಲೋಕೇಶ್ ಸ್ವಾಗತಿಸಿದರು. ಪುಟ್ಟರಾಜು ವಂದಿಸಿದರು. ಉಮೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.