ಹಾಸನ

ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ

Published On :

ಹಾಸನ: ಯುವಜನತೆ ಸ್ವಯಂ ಪ್ರೇರಿತರಾಗಿ  ರಕ್ತದಾನ ಮಾಡಬೇಕು, ತಾವು ನೀಡುವ ಒಂದು  ಹನಿ ರಕ್ತ ಒಂದು ಜೀವವನ್ನು ಉಳಿಸಬಲ್ಲದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಏಡ್ಸ್ ಜಾಗೃತಿ ಮತ್ತು  ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ಜೀವವನ್ನು ಉಳಿಸುವ ಪ್ರಯತ್ನ ಮಾಡಬಹುದು. ಆದರೆ ಆ ಜೀವಕ್ಕೆ  ಬೇಕಾದ  ಜೀವ ದ್ರವ್ಯ ಇಂತಹ ಸಹಾಯದಲ್ಲಿ ಇರುತ್ತದೆ ಎಂದು ರಕ್ತದಾನದ ಮಹತ್ವ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಯುವಜನತೆಯ ಪಾತ್ರದ ಬಗ್ಗೆ ತಿಳಿಸಿದರು.
ಜಾಗೃತ ಜೀವನ ನಡೆಸಬೇಕು: ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನಟರಾಜ್ ಎಚ್‌ಐವಿ ವೈರಸ್ ಹಾಗೂ ಏಡ್ಸ್ ಕುರಿತು ಮಾತನಾಡಿ, ಮನುಷ್ಯನ ಜೀವ ಅತ್ಯಮೂಲ್ಯವಾದುದು. ಇದನ್ನು ದೀರ್ಘವಾಗಿ  ಬಾಳಲು ಬಿಡಬೇಕೇ ವಿನಃ ಇದನ್ನು ಅಂತ್ಯಗೊಳಿಸಬಾರದು. ಹಾಗಾಗಿ ಯುವಕರು ಜಾಗೃತ ಜೀವನ ನಡೆಸಬೇಕೆಂದು ಕರೆ ನೀಡಿದರು.
ಡಿಎಪಿಸಿಯು ರವಿಕುಮಾರ್ ಮಾತನಾಡಿ, ರಕ್ತದ ಕೊರತೆಯಿಂದ ಯಾರೂ ಸಾಯಬಾರದು. ಹಾಗೆಯೇ ರಕ್ತದಾನ ಮಾಡದೆಯೇ ಯಾರು ಸಾಯಬಾರದು ಎಂದು ಯುವಜನರನ್ನು ಪ್ರೋತ್ಸಾಹಿಸಿದರು. ಬಿಸಿಆರ್‌ಟಿ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾತನಾಡಿ, ಸಮಾಜ ಸೇವೆಯಲ್ಲಿ  ಹಲವಾರು ಸೇವೆಗಳು ಶ್ರೇಷ್ಠ ಎನಿಸಿಕೊಂಡಿವೆ. ಅದರಲ್ಲಿ ರಕ್ತದಾನವೂ ಒಂದು ಎಂದು ತಿಳಿಸಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರೊ.ಡಿ.ಜಿ. ಕೃಷ್ಣೇಗೌಡ ಮಾತನಾಡಿ, ರಕ್ತದಾನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಸತ್ಫಲ: ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಸಿ.ಆರ್. ನಿಂಗರಾಜ್ ಮಾತನಾಡಿ, ದಾನಗಳಲ್ಲಿ ಶ್ರೇಷ್ಠವಾದುದು ರಕ್ತದಾನ. ಮನುಷ್ಯ ಏನನ್ನಾದರೂ ಕಳೆದುಕೊಳ್ಳಬಹುದು. ಆದರೆ ಆರೋಗ್ಯಕರ ಜೀವನವನ್ನು ಕಳೆದುಕೊಳ್ಳಬಾರದು.
 ಉತ್ತಮ ಆರೋಗ್ಯಕ್ಕೆ ಶುಚಿತ್ವವುಳ್ಳ ರಕ್ತವೇ ಆಧಾರ. ಹಾಗಾಗಿ ಇಂತಹ ರಕ್ತದಾನದ ಕಾರ್ಯಗಳು ಸತ್ಫಲವನ್ನು ನೀಡುತ್ತವೆ ಎಂದರು. ಪ್ರಾಂಶುಪಾಲ ಡಾ.ಐ.ಎಂ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪುರುಷೋತ್ತಮ್, ಅಹಮ್ಮದ್ ಇದ್ದರು. ರಾಮಕುಮಾರ್ ಪ್ರಾರ್ಥಿಸಿದರು. ರಿಹಾನ್ ಪಾಷಾ ಸ್ವಾಗತಿಸಿದರು.  ರವಿನಂದನ್ ವಂದಿಸಿದರು. ಅವಿನಾಶ್, ನಳಿನ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.