ಹಾಸನ

ಜಾವಗಲ್‌ನಲ್ಲಿ ಶೇ. 73 ಮತದಾನ

Published On :

ಜಾವಗಲ್: ಲೋಕಸಭಾ ಚುನಾವಣೆಯಲ್ಲಿ ಜಾವಗಲ್ ಹೋಬಳಿಯಾದ್ಯಂತ ಶೇ. 73ರಷ್ಟು ಮತದಾನವಾಗಿದೆ.
ಬೆಳಗ್ಗೆ ಮಂದಗತಿಯಲ್ಲಿ ಪ್ರಾರಂಭವಾಗಿ ಮಧ್ಯಾಹ್ನದ ವೇಳೆಗೆ ಬಿರುಸುಗೊಂಡಿತು. ಬುಧವಾರ ರಾತ್ರಿ ಬಿದ್ದ ಅಲ್ಪಸ್ವಲ್ಪ ಮಳೆಯಿಂದಾಗಿ ಕೃಷಿಕರು ಬೆಳಗ್ಗೆ ತಮ್ಮ ಜಮೀನುಗಳಿಗೆ ಹೋಗಿದ್ದರು. ಜಾವಗಲ್ ಹೋಬಳಿಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಹಾಸನ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ಬಿ. ರಾಜಶೇಖರ್, ಮಾಜಿ ಶಾಸಕ ಎಚ್.ಎಮ್. ವಿಶ್ವನಾಥ್, ಹಳೆಬೀಡು-ಜಾವಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ನಾಗರಾಜು ಜಾವಗಲ್‌ಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು. ನಂತರ ಕಂಗ್ರೆಸ್ ಅಭ್ಯರ್ಥಿ ಎ. ಮಂಜು ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಉತ್ತಮವಾದ ವಾತಾವರಣ ಕಂಡುಬಂದಿದ್ದು ಅತಿ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಒಗ್ಗಟ್ಟಿನಿಂದ ಶ್ರಮಿಸಿದ್ದಾರೆ ಎಂದರು.

ಬಾಲ ವಿಜ್ಞಾನಿ ಕಾರ್ಯಕ್ರಮ
ಹಾಸನ: ವಿದ್ಯಾರ್ಥಿಗಳು ಹಲವಾರು ವಿಜ್ಞಾನಿಗಳ ಜೀವನ ಮತ್ತು ಸಂಶೋಧನೆ ಬಗ್ಗೆ ಹೆಚ್ಚು ಅರಿಯಬೇಕು ಎಂದು ತಾಲ್ಲೂಕು ಕಾರ್ಯದರ್ಶಿ ಜಯಪ್ರಕಾಶ್ ತಿಳಿಸಿದರು. ಏಪ್ರಿಲ್ ತಿಂಗಳ ಬಾಲ ವಿಜ್ಞಾನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಡಂ ಕ್ಯೂರಿ ಕುರಿತು ವಿವರ ನೀಡಿದರು. ಬಡ ಕುಟುಂಬದಲ್ಲಿ ಜನಿಸಿದ ಕ್ಯೂರಿ, ತಮಗೆ ತೊಡಲು ಉತ್ತಮವಾದ ವಸ್ತ್ರ ಕೂಡ ಇಲ್ಲದೇ ಇದ್ದರೂ ಉಳಿದ ಮಹಿಳೆಯರಿಗಿಂತ ಮೊದಲೇ ಕಾಲೇಜಿಗೆ ಸೇರಿ ವಿದ್ಯಾವಂತೆಯಾಗುತ್ತಾರೆ. ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುತ್ತಾರೆ. ಅವರ ಕಡುಬಡತನ ಕಂಡು ಅವರಿಗೆ ಉನ್ನತ ಶಿಕ್ಷಣ ಕೊಡಿಸಲು ವಿಶ್ವವಿದ್ಯಾಲಯ ಮುಂದಾಗುತ್ತದೆ. ಇಂಥವರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಎಂದರು. ಗಣಿತಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜಂ, ವಿಜ್ಞಾನಿಗಳಾದ ಸರ್ ಐಸಾಕ್ನ್ಯೂಟನ್, ಜಗದೀಶ್ ಚಂದ್ರ ಬೋಸ್ ಅವರ ಸಾಧನೆ ಕುರಿತು ಮಾತನಾಡಿದರು.  ಜ್ಞಾನ ದೀಪ ಹಿಡಿದು ಬನ್ನಿ ಎಂಬ ವಿಜ್ಞಾನ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮ ಸಂಚಾಲಕಿ ಕವಿತ, ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.