ಸಕಲೇಶಪುರದಲ್ಲಿ ಹಾನಿ
ಸಕಲೇಶಪುರ: ತಾಲೂಕಿನ ವಿವಿಧೆಡೆ ಸುರಿದ ಭಾರೀ ಗುಡುಗು ಸಿಡಿಲು ಮಳೆಗೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಶುಕ್ರವಾರ ನಡೆದಿದೆ. ಗ್ರಾಮದ ಹೆನ್ನಲಿ ಗ್ರಾಮದ ಚೆಲುವಯ್ಯ ಎಂಬುವವರ ಮನೆಯ ಮೇಲೆ ಮರಬಿದ್ದ ಪರಿಣಾಮ ಹಂಚು ಹಾಗೂ ಶೀಟಗಳು ಒಡೆದು ಗೋಡೆ ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಾವು ನೋವು ಸಂಭವಿಸಿಲ್ಲ. ಪಟ್ಟಣದ ನಾನಾ ಬಡಾವಣೆಯಲ್ಲಿ ಬಾರಿ ಬಿರುಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿದ್ದು, ಮರ- ಗಿಡಗಳು ನೆಲಕ್ಕೆ ಉರಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೆಮಂತ್ ಎಂಬುವವರ ಕಾರಿಗೆ ಮರಬಿದ್ದು ಕಾರು ಜಖಂಗೊಂಡಿದೆ.
ಅರಳಿ ಮರ ಬಿದ್ದು ಮಹಿಳೆಗೆ ಗಾಯ
ಹಾಸನ: ಮಳೆಯ ಆರ್ಭಟದಿಂದ ರಸ್ತೆ ಬದಿಯಲ್ಲಿದ್ದ ದೊಡ್ಡ ಅರಳಿ ಮರವೊಂದು ಅರ್ಧಕ್ಕೆ ಸೀಳಿಕೊಂಡು ಮನೆ ಮೇಲೆ ಬಿದ್ದ ಪರಿಣಾಮ ಓರ್ವ ಮಹಿಳೆ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿನ ವಸ್ತುಗಳು ಜಖಂಗೊಂಡು ಲಕ್ಷಾಂತರ ರು. ನಷ್ಟವಾಗಿದೆ. ಮಧ್ಯಾಹ್ನದಿಂದ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಾರಿ ಮಳೆ ಹಾಗೂ ಸಿಡಿಲು ಗುಡಿಗಿಗೆ ನಗರದ ಹೊರ ವಲಯ ಹನುಮಂತ ಪುರ ಗ್ರಾಮದ ರಸ್ತೆ ಬದಿಯಲ್ಲಿದ್ದ ಹಳೆಯ ಅರಳಿ ಮರ ಮಧ್ಯ ಸೀಳಿಕೊಂಡು ಮನೆಯ ಮೇಲೆ ಬಿತ್ತು. ಇದರಿಂದಾಗಿ, ಸುಶೀಲಮ್ಮ (58) ಎಂಬುವರಿಗೆ ತೀವ್ರ ಗಾಯಗಳಾಗಿವೆ. ಮನೆ ಒಳಗೆ ಒಟ್ಟು 8 ಜನರು ಇದ್ದರು. ಕೆಲವರು ಮನೆಯ ಹಿಂದೆ ಇದ್ದು, ಸುಶೀಲಮ್ಮ ಮನೆ ಮುಂದಿನ ರೂಂನಲ್ಲಿ ನಿಂತಿದಾಗ ಈ ಘಟನೆ ನಡೆದಿದೆ. ಹೆಂಚಿನ ಮನೆ ಮೇಲೆ ಮರ ಬಿದ್ದಾಗ ಆಕೆ ಕೆಳಗೆ ಕುಸಿದರು. ತಲೆಯ ಮೇಲೆ ಮರ ಬಿದ್ದುದರಿಂದ ರಕ್ತಸ್ರಾವವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

