ಹಾಸನ

ಚಿಗುರುವುದೇ ಉದ್ಯಾವನದ ಕನಸು

Published On :

ಅರಸೀಕೆರೆ: ಸಾರ್ವಜನಿಕರಿಗಾಗಿ ಸುಂದರ ಉದ್ಯಾನವನ ನಿರ್ಮಿಸುವ ಪುರಸಭೆಯ ಯೋಜನೆ ರೂಪುಗೊಂಡು ಮೂರ್ನಾಲ್ಕು ವರ್ಷಗಳೇ ಕಳೆದರೂ ಇನ್ನೂ ಕಾರ್ಯರೂಪಕ್ಕೆ ಬಾರದಿರುವುದು ಇಲ್ಲಿನ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.  
ಪಟ್ಟಣದ 15 ನೇ ವಾರ್ಡ್ನ ಸುಭಾಷ್ ನಗರದ ಶ್ರೀಕೆಂಗಲ್ ಸಿದ್ದೇಶ್ವರ ದೇವಾಲಯ ಸಮೀಪ ವ್ಯವಸ್ಥಿತವಾದ ಸುಂದರ ಉದ್ಯಾನವನ ನಿಮಿಂಸಲು ಪುರಸಭಾ ಆಡಳಿತ ಸುಮಾರು ರು. 7 ಲಕ್ಷ ಅಂದಾಜು ವೆಚ್ಛದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಉದ್ಯಾನ ವನದ ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ಮೂರು- ನಾಲ್ಕು ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿತ್ತು.
ಅರ್ಧಕ್ಕೇ ನಿಂತ ಕಾಮಗಾರಿ: ಪ್ರಾರಂಭದಲ್ಲಿ ಅಲ್ಲಿನ ಕೆಲವು ಮರ, ಗಿಡಗಂಟೆಗಳನ್ನು ಹೊರತೆಗೆದು ಜಾಗವನ್ನು ಸಮತಟ್ಟು ಮಾಡಿದ ಗುತ್ತಿಗೆದಾರರು ಅನೇಕ ತಿಂಗಳುಗಳ ಕಾಲ ಕಾಮಾಗಾರಿ ಸ್ಥಗಿತಗೊಳಿಸಿದ್ದರು. ದೇವಾಲಯ ಸುತ್ತಲೂ ತಂತಿ ಬೇಲಿ ನಿರ್ಮಿಸುವ ಉದ್ದೇಶದಿಂದ ತಳಪಾಯಕ್ಕೆ ಗುಂಡಿ ತೆಗೆದು ಅನೇಕ ದಿನಗಳ ಕಾಲ ಹಾಗೇ ಬಿಟ್ಟಿದ್ದ ಕಾರಣ ಸಾರ್ವಜನಿಕರ ವಿರೋಧ ವ್ಯಕ್ತವಾಗಿ ಪುನಃ ಕಾಮಗಾರಿ ಕೈಗೊಂಡು ತಳಪಾಯದ ಕೆಲಸವನ್ನು ಸಂಪೂರ್ಣಗೊಳಿದ್ದರು. ಅಲ್ಲದೆ ಸುತ್ತಲ್ಲೂ ವಾಯು ವಿಹಾರದ ಜಾಗಗಳಲ್ಲಿ ಟೈಲ್ಸ್ಗಳನ್ನು ಜೋಡಿಸಿ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಕೈ ತೊಳೆದುಕೊಂಡಿದ್ದಾರೆ.
ಈ ಉದ್ಯಾನವನದ ವಾಯು ವಿಹಾರ ರಸ್ತೆಯ ನಿರ್ಮಾಣಕ್ಕೆಂದು ಈಗಾಗಲೇ ರು. 2 ಲಕ್ಷ ಸೇರಿದಂತೆ ಸುಮಾರು ಈವರೆಗಿನ ಕಾಮಗಾರಿಗಾಗಿ ರು. 3.5 ಲಕ್ಷ ಹಣವನ್ನು ಸಂಬಂಧಿಸಿದ ಗುತ್ತಿಗೆದಾರರಿಗೆ ಸಂದಾಯ ಮಾಡಲಾಗಿದೆ ಎನ್ನಲಾಗಿದ್ದು, ಈ ಕಾಮಗಾರಿ ಸಂಪೂರ್ಣವಾಗದ ಕಾರಣ ಇಲ್ಲಿನ ನಾಗರಿಕರಿಗೆ ಉದ್ಯಾನವನ ಎಂಬುದು ಇನ್ನೂ ಮರೀಚಿಕೆಯಾಗಿದೆ.

ಇವರೇನಂತಾರೆ?
ಉದ್ಯಾನವನಕ್ಕಾಗಿ ಹೊಸ ಕ್ರಿಯಾಯೋಜನೆ ರೂಪಿಸಬೇಕು. ಈ ಮೂಲಕ ಉದ್ಯಾನವನ ನಿರ್ಮಾಣ ಮಾಡುವುದರೊಂದಿಗೆ ಹಾಗೂ ಅಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನಿರ್ಮಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ.  
-ಎ.ಎಂ. ಶ್ರೀನಿವಾಸ್
ಪುರಸಭೆ ಸದಸ್ಯ

ಉದ್ಯಾನವನಕ್ಕಾಗಿ ಹೋರಾಟ ನಡೆಸಿದ್ದೇವೆ. ಅರ್ಧಕ್ಕೆ ನಿಂತಿರುವ ಉದ್ಯಾನವನದ ಕಾಮಗಾರಿ ಪೂರ್ಣಗೊಳಿಸಲು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮುಂದುವರಿಯುತ್ತದೆ.
-ಜಯಪದ್ಮ
ನಾಮನಿರ್ದೇಶಿತ ಸದಸ್ಯೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.