ಕೆಂಪೇಗೌಡರ ಪರಿಶ್ರಮ ಅವಿಸ್ಮರಣೀಯ: ರೇವಣ್ಣ
ಹೊಳೆನರಸೀಪುರ: ಬೆಂಗಳೂರು ಎಂಬ ಸುಂದರ ನಗರವನ್ನು ದೂರದೃಷ್ಟಿತ್ವದಿಂದ ನಿರ್ಮಿಸಿದ ಅದರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪರಿಶ್ರಮ ನಿಜಕ್ಕೂ ಅವಿಸ್ಮರಣೀಯವಾದ ಕಾರಣದಿಂದಾಗಿಯೇ, ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಾನ್ಯತೆಯನ್ನು ಹೊಂದಲು ಸಾದ್ಯವಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಇಲ್ಲಿ ಅಭಿಪ್ರಾಯಪಟ್ಟರು.
ಇಲ್ಲಿನ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕದಲ್ಲಿ ಭಾನುವಾರ ನಡೆದ ನಾಡಪ್ರಭು ಕೆಂಪೇಗೌಡರ 504ನೇ ಜಯಂತಿ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ತ್ಯಾಗ, ಶ್ರಮ ಮತ್ತು ಬಲಿದಾನಗಳನ್ನು ಇಂದಿನ ಜನನಾಯಕರು ಅನುಸರಿಸಬೇಕಾದ ಅವಶ್ಯಕತೆ ಇದೆ ಎಂದರು.
ಭರವಸೆ: ಹೊಳೆನರಸೀಪುರ ಸಾರಿಗೆ ಘಟಕವು ಜಿಲ್ಲೆಯಲ್ಲಿಯೇ ಉತ್ತಮ ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದು, ನೂತನ ಮಾರ್ಗಗಳ ಚಾಲನೆಯಲ್ಲಿಯೂ ಇದು ಉತ್ತಮ ಸಾಧನೆ ತೋರಿದೆ ಎಂದರಲ್ಲದೇ, ಘಟಕದ ನೌಕರರಿಗಾಗಿ ಲಭ್ಯವಿರುವ ನಿವೇಶನದಲ್ಲಿ ವಸತಿ ಸಂಕೀರ್ಣ ನಿರ್ಮಿಸಿಕೊಡುವ ಭರವಸೆ ನೀಡಿದರು.
ಅಸಾಧಾರಣ ಕೊಡುಗೆ: ಉಪನ್ಯಾಸಕ ಡಿ.ಕೆ. ಕುಮಾರಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರವೇ ಮೀಸಲಾದ ಮಹನೀಯರಾಗಿರದೇ, ಬೆಂಗಳೂರನ್ನು ಎಲ್ಲ ವರ್ಗ, ಸಮುದಾಯಗಳ ಜನರು ಸೌಹಾರ್ಧತೆಯಲ್ಲಿ ಬಾಳಬೇಕೆನ್ನುವ ಆಶಯಗಳನ್ನು ಹೊಂದಿದ್ದ ದೂರದೃಷ್ಟಿತ್ವದ ನಾಯಕ ಎಂದರು.
ಉಪನ್ಯಾಸಕ ಧವರ್ ರಾಜ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜೀವನದ ಇತಿಹಾಸ, ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು, ಅವರ ದೂರದೃಷ್ಟಿತ್ವ, ಬೆಂಗಳೂರನ್ನು ಕಟ್ಟುವಲ್ಲಿನ ಕೆಂಪೇಗೌಡರ ಪರಿಶ್ರಮಗಳನ್ನು ವಿವರವಾಗಿ ತಿಳಿಸಿದರು.
ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕ ಕಮಲ್ ಕುಮಾರ್ ಮಾತನಾಡಿ, ಸಿಬ್ಬಂದಿ ನಿಸ್ವಾರ್ಥ ಸೇವೆಯ ಮೂಲಕ ಸಂಸ್ಥೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು, ಘಟಕದ ಸಿಬ್ಬಂಧಿಗಳಿಗೆ ಅತಿ ಅವಶ್ಯಕವಾಗಿರುವ ಸಿಬ್ಬಂಧಿಗಳ ವಸತಿ ಸಂಕೀರ್ಣ ನಿರ್ಮಿಸಿಕೊಡುವ ಭರವಸೆ ಶಾಸಕರು ನೀಡಿದ್ದು, ಅವರಿಗೆ ಅಭಿನಂಧಿಸುವುದಾಗಿ ತಿಳಿಸಿದರು.
ಟ್ರಾಫಿಕ್ ಇನ್ಸ್ಪೆಕ್ಟರ್ ಲಕ್ಷ್ಮಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎ. ರಘು, ಘಟಕದ ಕಿರಣ್ ಕುಮಾರ್, ಜ್ಞಾನೇಶ್, ರಂಗನಾಥ್, ಪ್ರಕಾಶ್ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

