ರಾಜ್ ಜನ್ಮದಿನಕ್ಕೆ ಬೃಹತ್ ಕೇಕ್
ಹಾಸನ: ನಗರದ ದೇವಿಗೆರೆ ವೃತ್ತದ ಬಳಿ ಪದ್ಮಭೂಷಣ ಡಾ. ರಾಜಕುಮಾರ್ ಅವರ 86ನೇ ವರ್ಷದ ಜಯಂತ್ಯುತ್ಸವ ಆಚರಣೆಯನ್ನು ಗುರುವಾರ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಚರಿಸಲಾಯಿತು.
ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ರಾಜ್ಯ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.
ಈ ವೇಳೆ ರಾಜ್ ಅಭಿಮಾನಿ ಸಂಘದ ಗೌರವಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ರಾಜ್ ಒಬ್ಬ ಆದರ್ಶ ವ್ಯಕ್ತಿ. ಕನ್ನಡ ನಾಡು ನುಡಿಗಾಗಿ ಶ್ರಮಿಸಿದವರುಎಂದರು.
1983ರಲ್ಲಿ ರಾಜಕುಮಾರ್ ಅಭಿಮಾನಿ ಸಂಘ ಸ್ಥಾಪನೆಗೊಂಡಿತು. ಜಿಲ್ಲೆಯಲ್ಲಿ ರಾಜ್ ಸಂಘವನ್ನು ಮೊದಲ ಬಾರಿಗೆ ಹಾರ ನಾಗರಾಜ್ ಸ್ಥಾಪಿಸಿದರು ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್.ವಿ. ಶ್ರೀನಿವಾಸ್ ಮೂರ್ತಿ, ನಗರಸಭೆ ಸದಸ್ಯ ರಾಜೇಶ್ ಬಾಬಿ, ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ, ವಕೀಲರಾದ ಶ್ಯಾಂಸುಂದರ್, ನಗರಸಭೆ ಮಾಜಿ ಸದಸ್ಯ ಜಿ.ಆರ್. ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪಾನಿರ್ದೇಶಕ ಎಚ್.ಸಿ. ಚಿದಾನಂದ್, ಸಮಾಜಸೇವಕ ಅಟ್ಟವರ ರಾಮ್ ದಾಸ್, ಮಂಜು, ನಂದಕುಮಾರ್, ಹಿರಿಯರು ನಾಗಪ್ಪ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

