ಹವಾಮಾನ ಆಧರಿತ ಕೃಷಿ ಕೈಗೊಳ್ಳಿ
ಕನ್ನಡಪ್ರಭ ವಾರ್ತೆ ಹಾಸನ ಏ. 25
ಲಭ್ಯವಿರುವ ತಂತ್ರಜ್ಞಾನವನ್ನೇ ಬಳಸಿಕೊಂಡು ಹವಾಮಾನಾಧಾರಿತ ಕೃಷಿ ಕೈಗೊಂಡಲ್ಲಿ ರೈತರಿಗೆ ಉತ್ತಮ ಪ್ರತಿಫಲ ದೊರೆಯಬಲ್ಲದು ಎಂದು ಹವಾಮಾನ ತಜ್ಞ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಡಾ. ಪ್ರಕಾಶ್ ಕರೆ ನೀಡಿದ್ದಾರೆ.
ನಗರದ ಜಂಟಿ ಕೃಷಿ ನಿದೇಶಕರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಭೂಚೇತನ ಯೋಜನಾ ಕಾರ್ಯಾಗಾರ ಮತ್ತು ಹವಾಮಾನ ವೈಪರೀತ್ಯ ಕುರಿತ ತರಬೇತಿ ಶಿಬಿರದಲ್ಲಿ ಪರಿಸರ ಅಧ್ಯಯನ ಕುರಿತು ಉಪನ್ಯಾಸ ನೀಡಿದ ಅವರು, ಕರ್ನಾಟಕ ದೇಶದಲ್ಲೇ ಅತ್ಯುತ್ತಮವಾದ ಹವಾಮಾನ ಮಾಹಿತಿ ವ್ಯವಸ್ಥೆಯನ್ನು ಹೊಂದಿದೆ. ಆದರೆ ಇನ್ನಷ್ಟು ಸುದಾರಣೆ ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಮಳೆ ಮತ್ತು ಸಮರ್ಪಕವಾದ ಹವಾಮಾನ ವರದಿಯನ್ನು ಇನ್ನಷ್ಟು ಪರಿಣಾಮಕಾರಿಯಗಿ ಒದಗಿಸುವ ಸಾಧ್ಯತೆಗಳ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಗಮನ ಹರಿಸಬೇಕಾಗಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ 2850 ಮಳೆ ಮಾಪನ ಕೇಂದ್ರಗಳಿದ್ದು ಈ ವರ್ಷ ಹೆಚ್ಚುವರಿಯಾಗಿ 3000 ಮಳೆ ಮಾಪನ ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿ ಹಂತಗಳಲ್ಲೂ ಮಳೆ ಅಳತೆಯ ಸಾಧನಗಳನ್ನು ಇರಿಸಲಾಗಿದೆ. ಇಷ್ಟೊಂದು ವ್ಯವಸ್ಥಿತವಾಗಿ ಮಳೆಮಾಪನ ಹೊಂದಿರುವ ರಾಜ್ಯ ಮತ್ತೊಂದು ಈ ದೇಶದಲ್ಲಿಲ್ಲ. ಆದರೂ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ನಾವಿನ್ನೂ ಹವಾಮಾನ ಅಧ್ಯಯನ ಮತ್ತು ಮುನ್ಸೂಚನೆ ವಿಷಯದಲ್ಲಿ ಸಾಧಿಸಬೇಕಾದ್ದು ಸಾಕಷ್ಟಿದೆ ಎಂದು ಅವರು ತಿಳಿಸಿದರು. ಮಳೆ ಹಾಗೂ ನೀರಿನ ಸಂರಕ್ಷಣೆಗೆ ನಿಖರ ಮಾನದಂಡ, ಮೇಲ್ವಿಚಾರಣೆ, ಅಂದಾಜು, ಅಭಿವೃದ್ಧಿ, ನಿರ್ವಹಣೆ, ಇವುಗಳನ್ನು ಸರಿಯಾಗಿ ನಿಭಾಯಿಸಬೇಕು. ಹಾಲಿ ಇರುವ ಹಲವು ಯೋಜನೆಗಳಲ್ಲಿ ದೊರೆಯುವ ಮಾಹಿತಿಗಳನ್ನು ಒಟ್ಟುಮಾಡಿ ಸರಳ ರೀತಿಯಲ್ಲಿ ಸಮರ್ಪಕ ಮಾಹಿತಿ ದೊರೆಯುವಂತಾಗಬೇಕು ಎಂದರು.
ನೀರಿನ ನಿರ್ವಹಣೆ ಬಗ್ಗೆ ಹೆಚ್ಚಿನ ಮುತುವರ್ಜಿ ಈಗಿನ ಅತಿ ಮುಖ್ಯ ಆದ್ಯತೆಯಾಗಬೇಕು. ಮಳೆ ನೀರು ಕೊಯ್ಲಿಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಡಾ. ಪ್ರಕಾಶ್ ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಡಾ. ಶಿವರಾಜ್ ಅಧ್ಯಕ್ಷತೆ ವಹಿಸಿದರು. ದೊಡ್ಡಬಳ್ಳ್ಳಾಪುರ ಕೃಷಿ ವಿಜ್ಞಾನ ಕೇಂದ್ರದ ಸಹಪ್ರಾಧ್ಯಾಪಕ ಡಾ. ನವೀನ್, ಕೃಷಿ ಸಹ ವಿಸ್ತರಣಾ ನಿರ್ದೇಶಕ ಡಾ. ಶಿವಶಂಕರ್, ಕಂದಲಿ ಕೃಷಿ ವಿಜ್ಞಾನ ಕೆಂದ್ರದ ಮುಖ್ಯಸ್ಥ ಡಾ. ಬಸವರಾಜ್, ಬೇಸಾಯ ತಜ್ಞ ಡಾ. ಭೈರಪ್ಪನವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

