ಬಿಜೆಪಿ, ಬಜರಂಗದಳದ ನಡವಳಿಕೆ ಖಂಡನೀಯ
ಹಾಸನ: ಶೃಂಗೇರಿಯ ತನಿಕೋಡು ಚೆಕ್ಪೋಸ್ಟ್ ಬಳಿ ನಡೆದ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಕೈಗೊಂಡ ಕ್ರಮವನ್ನು ವಿರೋಧಿಸಿರುವ ಬಿಜೆಪಿ ಮತ್ತು ಬಜರಂಗದಳ ನಡವಳಿಯನ್ನು ಸಿಪಿಐ ಕಾರ್ಯದರ್ಶಿ ಎಂ.ಸಿ.ಡೋಂಗ್ರೆ ಖಂಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಕಬೀರ್ಗೆ ರೌಡಿ ಪಟ್ಟ ಕಟ್ಟಿ ಪ್ರತಿಭಟನೆ ನಡೆಸಿರುವ ಬಿಜೆಪಿ ಹಾಗೂ ಬಜರಂಗದಳ ಸಂಘಟನೆಯ ನಡವಳಿಕೆ ಖಂಡನೀಯವಾಗಿದೆ. ಎನ್ಕೌಂಟರ್ಗೆ ಒಳಗಾದ ವ್ಯಕ್ತಿ ಬಗ್ಗೆ ಸರ್ಕಾರದ ಕೈಗೊಂಡಿರುವಂತಹ ನಿರ್ಧಾರ ಸರಿಯಾಗಿದೆ ಎಂದು ಹೇಳಿದರು.
ಪರಿಹಾರ ಏರಿಸಿ: ಸತ್ತ ವ್ಯಕ್ತಿಗೆ ರು. 10 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಈ ಬಗ್ಗೆ ಬಿಜೆಪಿ ಅವರು ಪ್ರತಿಭಟನೆ ನಡೆಸಿ ವಿರೋಧವನ್ನು ವ್ಯಕ್ತಪಡಿಸಿ ಜಾತಿ, ಧರ್ಮದ ಹೆಸರಿನಲ್ಲಿ ಪರಿಹಾರ ಅಳೆಯುತ್ತಿರುವುದು ಸರಿಯಲ್ಲ. ಈಗ ಸರ್ಕಾರ ನೀಡಿರುವಂತಹ ರು. 10 ಲಕ್ಷ ಪರಿಹಾರವನ್ನು ರು. 30 ಲಕ್ಷಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು. ಕಬೀರ್ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಹಾಗೂ ಬಜರಂಗದಳ ಕೂಡಲೇ ಕ್ಷಮೆ ಯಾಚಿಸಬೇಕು ಎಂದರು.
ನೀರಿಗಾಗಿ ಅಂಧ ವ್ಯಕ್ತಿಯ ಮನವಿ
ಹಾಸನ: ನಗರದ ಸಮೀಪ ಇರುವ ದೇವೇಗೌಡ ನಗರದಲ್ಲಿ ಸಮರ್ಪಕವಾಗಿ ನೀರು ಬಾರದೇ ನನ್ನ ಬಟ್ಟೆ ತೊಳೆದುಕೊಳ್ಳಲು ಸಾಧ್ಯವಾಗಿಲ್ಲ. ಕೊಳಕಾಗಿದೆ ನೋಡಿ ಸ್ವಾಮಿ ಎಂದು ಜಿಲ್ಲಾಧಿಕಾರಿ ಎದುರು ತನ್ನ ಬಟ್ಟೆ ತೋರಿಸಿದ ಅಂಧ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ದೇವೇಗೌಡ ನಗರದ ವಾಸಿ ಅಂಧ ವ್ಯಕ್ತಿಯಾದ ಬಿ.ಡಿ. ರಂಗನಾಥ್ ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮಾತನಾಡಿ, ಕಳೆದ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗದೇ ನಿಮ್ಮ ಬಳಿ ಬಂದಿದ್ದೇನೆ ಎಂದು ಅಳಲು ತೋಡಿಕೊಂಡರು.
ನಲ್ಲಿ ದುರಸ್ತಿಗೆ ಆಗ್ರಹ
ಅರಸೀಕೆರೆ: ಪಟ್ಟಣದ ಜೇನುಕಲ್ ನಿಗರ ಬಡಾವಣೆಯ ಜನರಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಹಾಕಲಾಗಿರುವ ಕೆಲವು ನಲ್ಲಿಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ಇವುಗಳನ್ನು ದುರಸ್ತಿಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಪುರಸಭಾ ಆಡಳಿತವನ್ನು ಒತ್ತಾಯಿಸಿದ್ದಾರೆ. ಕಳೆದ 3-4 ವರ್ಷಗಳಿಂದಲೂ ನೀರು ಪೂರೈಸುವ ಕೊಳವೆ ಹಾಗೂ ನಲ್ಲಿಗಳು ಹಾಳಾಗಿವೆ. ಇಡೀ ಬಡಾವಣೆಯಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಸುಗಮ ನೀರು ಪೂರೈಸುವ ವ್ಯವಸ್ಥೆಯು ನಾಶವಾಗಿದೆ. ಆದರೆ ಪುರಸಭಾ ಆಡಳಿತ ಮಾತ್ರ ಇವುಗಳ ದುರಸ್ತಿಗೆ ಮುಂದಾಗಿಲ್ಲ. ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಟಿಇಟಿ ತರಬೇತಿ
ಹಾಸನ: ನಗರದ - ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಬಿಜಿಎಸ್ ಸ್ಟಡಿ ಸೆಂಟರ್ ವತಿಯಿಂದ ಟಿಇಟಿ ಮತ್ತು ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೇ 3ರಂದು ಮಧ್ಯಾಹ್ನ 3-30ಕ್ಕೆ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ. ಆಸಕ್ತರು ರವೀಂದ್ರ ನಗರದ ಎಂ.ಜಿ. ರಸ್ತೆಯಲ್ಲಿರುವ ಬಿಜಿಎಸ್ ಸ್ಟಡಿ ಸೆಂಟರ್ನಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 8050839482 ಅಥವಾ 9738334784 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

