ಹಾಸನ

ನಾಲೆ ನೀರು ರಸ್ತೆಗೆ: ತುರ್ತು ಕ್ರಮಕ್ಕೆ ಆಗ್ರಹ

Published On :

ರಾಮನಾಥಪುರ: ಅರಕಲಗೂಡು  ತಾಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ಹಾದು ಹೋಗಿ ರುವ ಹಾರಂಗಿ ಸೀಳು ನಾಲೆಯ ನೀರು ರಸ್ತೆ ಮೇಲೆ ನುಗ್ಗುತ್ತಿದೆ.  ಈ ಸೀಳು ನಾಲೆ ನಿರ್ವಹಣೆ ಇಲ್ಲದೇ ಹಾಳಾದ ಪರಿಣಾಮ ಈಗ ಹಾರಂಗಿ ಎಡದಂಡೆ ನಾಲೆಗೆ ಬಿಡುಗಡೆ ಮಾಡಿದ ನೀರು ನೇರವಾಗಿ ರಸ್ತೆ ಮೇಲೆಯೇ ಹರಿಯುತ್ತಿದೆ.    ಕಳೆದ ಎರಡು ದಿನಗಳಿಂದ ಓಂದೇ ಸಮನೆ ಹರಿಯುತ್ತಿರುವ ಸೀಳು ನಾಲೆ ನೀರು ಕೆಲವು ವಾಸದ ಮನೆಗಳ ಮುಂದೆ ನುಗ್ಗುತ್ತಿದ್ದು ಕೆಳ ಭಾಗದ ಮನೆಯ ಗೋಡೆಗಳು ಶಿಥಿಲಾವಸ್ಥೆಗೆ ತಲುಪಿವೆ. ಎರಡು ವರ್ಷಗಳ ಹಿಂದೆ
ನಾಲೆ ದುರಸ್ತಿ ಮಾಡಿಸುವ ನೆಪದಲ್ಲಿ ಅರೆಬರೆಯಾಗಿ ಕೆಲಸ ನಿರ್ವಹಿಸದ ಪರಿಣಾಮ ಈಗ ನೀರು ಮುಂದೆ ಹರಿಯದೇ ರಸ್ತೆ ಪಾಲಾಗುತ್ತಿದೆ. ಮನೆಯಿಂದ ಹೊರ ಬರಲು ನಿವಾಸಿಗಳು ಕಿರಿಕಿರಿಯಾಗಿದೆ. ರಸ್ತೆ ದುರಸ್ತಿ ಪಡಿಸುವಂತೆ ಜನಪ್ರತಿನಿಧಿಗಳ
ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.