ರಂಗನಾಥ ಸ್ವಾಮಿ ಕಲ್ಯಾಣೋತ್ಸವ 16 ರಂದು
ಹಾರನಹಳ್ಳಿ: ಶ್ರೀ ಚಿಕ್ಕಗಿರಿ ರಂಗನಾಥ ಸ್ವಾಮಿ ಸೇವಾನ್ಯಾಸದ ವತಿಯಿಂದ ಬಾಗೇಶಪುರ ಸಮೀಪ ವಿರುವ ತಿರುಪತಿಹಳ್ಳಿ ಬೆಟ್ಟದಲ್ಲಿ ಚಿಕ್ಕಗಿರಿ ರಂಗನಾಥ ಸ್ವಾಮಿ ಯವರಿಗೆ ಆ. 16 ರಂದು ಶ್ರಾವಣ ಮಾಸದ ಅಂಗವಾಗಿ ರುದ್ರಾಭಿಷೇಕ ಗಣಪತಿಹೋಮ, ಕಲ್ಲೇಶ್ವರಸ್ವಾಮಿಯವರಿಗೆ ಅಬಿಷೇಕ ಮಾಹಾಪೂಜೆ ನೆಡೆಯಲಿದೆ. ದೇವಾಲಯ ಸಮೀಪ ವಿರುವ ಸಮುದಾಯ ಭವನದಲ್ಲಿ ಶ್ರೀಯವರ ಸಾಮೂಹಿಕ ಕಲ್ಯಾಣೋತ್ಸವವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ನೆರೆವೇರಿಸಲಿದ್ದಾರೆ.
ಸಾಹಿತ್ಯ ಮಂಥನ ವಿಚಾರ ಸಂಕಿರಣ
ಹಾಸನ: ವಿಶ್ವಚೇತನ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ, ಡಕ್ಟೈಲ್ ಆರ್ಯನ್ ವರ್ಕ್ ಮತ್ತು ಪರಿಮಳಾ ಸ್ವೀಟ್ಸ್ ಬಾದಾಮಿ ಆಶ್ರಯದಲ್ಲಿ ಇತ್ತೀಚೆಗೆ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಬಾದಾಮಿಯಲ್ಲಿ, ಕನ್ನಡದ ಹೆಸರಾಂತ ಕವಿಯತ್ರಿ ಹಾಗೂ ಕಥೆಗಾರ್ಥಿ ಕಸ್ತೂರಿ ಬಾಯರೆ ಅವರ ಇದುವರೆಗಿನ ಸಾಹಿತ್ಯ ಕುರಿತು ಸಾಹಿತ್ಯ ಮಂಥನ ಎಂಬ ವಿಚಾರ ಸಂಕಿರಣವನ್ನು ಹಮಿಕೊಳ್ಳಲಾಗಿತ್ತು.
ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲಿ ಡಾ.ರಾಜಶೇಖರ ಮಠಪತಿ, ನಾಗರಾಜ ವಸ್ತಾರೆ, ಚಿತ್ರನಟಿ ಅರ್ಪಣಾ, ಡಾ. ಶೀಲಾಕಾಂತ ಪತ್ತಾರ ಹಾಗೂ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತರಿದ್ದರು.
ಶ್ರಾವಣ ಸಂಜೆ ಸಂಸ್ಕೃತಿ ವೈಭವ
ಚನ್ನರಾಯಪಟ್ಟಣ: ಪಟ್ಟಣದ ಶ್ರೀನಾಟ್ಯಭೈರವಿ ಟ್ರಸ್ಟ್ ಆಶ್ರಯದಲ್ಲಿ ಶ್ರಾವಣ ಸಂಜೆ ಸಂಸ್ಕೃತಿ ವೈಭವ 2014 ರ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ 2014-15ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.99 ಅಂಕ ಪಡೆದ ಜಿಲ್ಲೆಯ ಪ್ರತಿಭಾವಂತ ಐದು ವಿದ್ಯಾರ್ಥಿಗಳಿಗೆ ರಜತ ಪದಕ ಮತ್ತು ಜ್ಞಾನ ಮಂದಾರ ಪ್ರಶಸ್ತಿ ನೀಡಲಾಗುವುದು. ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು 2014 ರ ಆಗಸ್ಟ್ 15 ರೊಳಗೆ ತಮ್ಮ 2 ಭಾವಚಿತ್ರ ಹಾಗೂ ಸ್ವ ವಿಳಾಸದೊಂದಿಗೆ ಅಂಕ ಪಟ್ಟಿಯ ನಕಲನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ಕೋರ ಲಾಗಿದೆ. ಅಧ್ಯಕ್ಷರು, ಶ್ರೀನಾಟ್ಯಭೈರವಿ ಟ್ರಸ್ಟ್ (ರಿ), ಗಾಂಧಿ ಸರ್ಕಲ್, ಚನ್ನರಾಯಪಟ್ಟಣ. ಹೆಚ್ಚಿನ ಮಾಹಿತಿಗಾಗಿ ಮೊಣ9964566885 ಸಂಪರ್ಕಿಸಿ.
ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಸಲ್ಲಿಕೆ
ಹೊಳೆನರಸೀಪುರ: ಪಟ್ಟಣದಲ್ಲಿ ನಡೆದ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಖರ್ಚು-ವೆಚ್ಚಗಳ ಕುರಿತಂತೆ, ತಾಲೂಕು ಕಸಾಪ ಅಧ್ಯಕ್ಷರಾದ ಎಚ್.ಎಸ್. ಪುಟ್ಟಸೋಮಪ್ಪ ಅವರು ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕ-ಪತ್ರಗಳನ್ನು ಮಂಡಿಸಿದರು. ಸಭೆಯಲ್ಲಿ ಮೊದಲು ಸಮ್ಮೇಳನದ ಕುರಿತಂತೆ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸದಸ್ಯರ ಅನುಮೋದನೆ: ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದ ಖರ್ಚು-ವೆಚ್ಚದ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು. ನಂತರ ಸಭೆಯಲ್ಲಿದ್ದ ಸರ್ವಸದಸ್ಯರು ಲೆಕ್ಕ-ಪತ್ರವನ್ನು ಅನುಮೋದಿಸಿದರು.
ತಹಸೀಲ್ದಾರ್ ನಾಗರಾಜು ಮಾತನಾಡಿ, ಸಾಹಿತ್ಯ ಭವನ ನಿರ್ಮಾಣದ ನಂತರ ಸಾಹಿತ್ಯಾತ್ಮಕ ಚಟುವಟಿಕೆಗಳು ಹೆಚ್ಚಾಗಿವೆ ಎಂದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಗುಂಜೇವು ಅಣ್ಣಾಜಪ್ಪ, ಬಾ.ರಾ. ಸುಬ್ಬರಾಯ, ಎಚ್.ಡಿ.ಗುರುಪ್ರಸಾದ್,ಎನ್.ಆರ್. ಶಿವರಾಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

