ಹಾಸನ

ಕುಡಿವ ನೀರಿಗೆ ಚಲ್ಲಾಪುರ ಗ್ರಾಮಸ್ಥರ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಅರಸೀಕೆರೆ. ಆ 5
ಕಳೆದ 6 ತಿಂಗಳಿಂದಲೂ ಕುಡಿಯುವ ನೀರಿಗೆ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಮರ್ಪಕ ಕುಡಿಯುವ ನೀರು ಪೂರೈಸಲು ತಾಪಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಸಂಪೂರ್ಣವಿಫಲವಾಗಿದೆ ಎಂದು ಆರೋಪಿಸಿ ತಾಲೂಕಿನ ಚಲ್ಲಾಪುರ ಗ್ರಾಮದ ಮಹಿಳೆಯರು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 6 ತಿಂಗಳ ಹಿಂದೆ ಇದ್ದ ಒಂದು ಕೊಳವೆಬಾವಿ ಬತ್ತಿಹೋಗಿದ್ದರಿಂದ ತೆಗಿಸಲಾದ ಮತ್ತೊಂದು ಕೊಳವೆ ಬಾವಿಯೂ ಕೂಡ ವಿಫಲವಾಗಿ ಕುಡಿಯುವ ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ದಿನಕ್ಕೆ 3 ಟ್ಯಾಂಕರ್ ನೀರನ್ನು ಒದಗಿಸುತ್ತಿದ್ದ ತಾ.ಪಂ. ಕೂಡ ಕಳೆದ 3 ತಿಂಗಳಿನಿಂದ ನೀರು ಸರಬರಾಜು ಮಾಡದೆ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರತ್ನ ಮಾತನಾಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಗ್ರಾಪಂ, ತಾಪಂ ಆಡಳಿತಗಳು ಸಂಪೂರ್ಣ ವಿಫಲವಾಗಿದ್ದು ಗ್ರಾಮದ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು ರಾತ್ರಿಯ ವೇಳೆಯಲ್ಲಿ ಕಿಲೋಮೀಟರ್ಗಟ್ಟಲೇ ನಡೆದುಕೊಂಡು ಹೋಗಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಚಲ್ಲಾಪುರ ಬಸವರಾಜ್ ಮಾತನಾಡಿ ತೀವ್ರ ಬರ ಪರಿಸ್ಥಿತಿಯಿಂದಾಗಿ ಮುಂಗಾರುಬೆಳೆ ಸಂಪೂರ್ಣ ವಿಫಲವಾಗಿದ್ದು ತೆಂಗಿನ ಮರಗಳು ಒಣಗಿ ನಿಂತಿದ್ದು ಕೆರೆಕಟ್ಟೆಗಳು ಬರಿದಾಗಿವೆ. ಈವರೆಗೆ ಹಿಂಗಾರುಬೆಳೆ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ತಾ. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಮುಖಂಡರಾದ ಮಹೇಶ್, ಸುಭಾಷ್, ಈಶ್ವರಪ್ಪ, ಶಿವಲಿಂಗಯ್ಯ, ರಾಂಪುರ ಸುನಿಲ್, ಭಾಗ್ಯಮ್ಮ ನೇತೃತ್ವ ವಹಿಸಿದ್ದ ಗ್ರಾಮದ ಮಹಿಳೆಯರಾದ ರತ್ನಮ್ಮ, ಕವಿತಾ, ಗೌರಮ್ಮ ಬಸವರಾಜ್, ಸಿದ್ದಮ್ಮ, ಮಲ್ಲಮ್ಮ, ಶಶಿಕಲಾ, ಪುಟ್ಟಮ್ಮ, ಪುಷ್ಪಾವತಿ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.