ಇಂದು ಹಳೇಬೀಡಿನಲ್ಲಿ ಮಸ್ತಾಕಾಭಿಷೇಕ ಕಾರ್ಯಕ್ರಮ
ಹಳೇಬೀಡು: ಹಳೇಬೀಡಿನಲ್ಲಿ 1008 ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ ಪೂಜಾ ಮಹೋತ್ಸವವನ್ನು ಫೆ. 2ರಂದು ಹಮ್ಮಿಕೊಳ್ಳಲಾಗಿದೆ. ಶ್ರೀ ಹಾಸನ ಜೈನ ಸಂಘ, ದಿಗಂಬರ ಜೈನ ಯುವಕರ ಸಂಘ ಹಾಗೂ ಸಮಸ್ತ ಜೈನ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಪೂಜೆಯ ಸಾನಿಧ್ಯವನ್ನು ಶ್ರೀಕ್ಷೇತ್ರ ಕನಕಗಿರಿಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ವಹಿಸುವರು. ಬೆಳಗ್ಗೆ 7ಕ್ಕೆ ಭಗವಾನ್ ಶ್ರೀ ಆದಿನಾಥ ತೀರ್ಥಂಕರರಿಗೆ ಮತ್ತು ಭಗವಾನನ್ಶ್ರೀ ವಿಜಯ ಪಾರ್ಶ್ವನಾಥ ತೀರ್ಥಂಕರರಿಗೆ ಪಂಚಾಮೃತಪೂಜೆ, 9.30ಕ್ಕೆ ಸ್ವಾಮೀಜಿಯವರ ಸ್ವಾಗತ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ 12ಕ್ಕೆ 1008 ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರರಿಗೆ ಮಸ್ತಕಾಭಿಷೇಕ ನಡೆಯಲಿದೆ. ಮಸ್ತಕಾಭಿಷೇಕದಲ್ಲಿ ನಾರಿಕೇಳ (ಎಳನೀರು), ಕಬ್ಬಿನ ಹಾಲು, ಕ್ಷೀರಾಭಿಷೇಕ, ಕಲ್ಕಚೂರ್ಣ (ಅಕ್ಕಿಹಿಟ್ಟು), ಅರಿಶಿಣ, ಕಷಾಯ, ಚತುಷ್ಕೋನ ಕಲಶ, ಅಷ್ಟಗಂಧ, ಶ್ರೀಗಂಧ, ಚಂದನ, ಪುಷ್ಪವೃಷ್ಟಿ, ಕನಕಾಭಿಷೇಕ, ಪೂರ್ಣಕುಂಭ (ಮಹಾಶಾಂತಿಧಾರ ಕಳಸ), ಮಹಾಮಂಗಳಾರತಿ ನೆರವೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

