'ಪಠ್ಯಪುಸ್ತಕ ಪೂಜಾದ್ರವ್ಯ, ಬೋಧನೆಯೇ ಮಂತ್ರ'
ಹೊಳೆನರಸೀಪುರ: ಶಾಲೆಯೇ ದೇವಾಲಯ, ವಿದ್ಯಾರ್ಥಿಗಳೇ ದೇವರು. ಅಧ್ಯಾಪಕನೇ ಪುರೋಹಿತ, ಪಠ್ಯಪುಸ್ತಕಗಳೇ ಪೂಜಾದ್ರವ್ಯಗಳು, ಬೋಧನೆಯೇ ಮಂತ್ರ, ಶಾಲೆಯ ಬೆಲ್ ದೇಗುಲದ ಘಂಟೆ, ವಿದ್ಯಾರ್ಥಿಗಳ ಅರಿವು ದೈವ ಸಾಕ್ಷಾತ್ಕಾರ, ಶಾಲೆ ಎಂದು ಹೇಳಿದರೆ, ಅದರ ಅರ್ಥ ಹಾಗೆಯೇ ಎಂದು ವ್ಯಾಖ್ಯಾನಿಸಿದವರು ಕನ್ನಡದ ಪೂಜಾರಿ ಖ್ಯಾತಿಯ ವಾಗ್ಮಿ ಹಿರೇಮಗಳೂರು ಕಣ್ಣನ್. ಅವರು ಹಳ್ಳಿಮೈಸೂರಿನ ಅನುಗ್ರಹ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನರನ್ನುದ್ದೇಶಿಸಿ ಮಾತಾಡುತ್ತಾ ಗುಡಿಕಟ್ಟುವವರು ಸಿಗುತ್ತಾರೆ. ಚರ್ಚು ಕಟ್ಟುವವರು ಸಿಗುತ್ತಾರೆ. ಮಸೀದಿ ನಿರ್ಮಾಣ ಮಾಡುವವರೂ ಸಿಗುತ್ತಾರೆ. ಶಾಲೆ ಕಟ್ಟುವುದು ಕಷ್ಟ, ಆ ಶಾಲೆ ಕಟ್ಟಿದ ಮೇಲೆ ಪಾಠ ಮಾಡಿಸುವುದು ಇನ್ನೂ ಕಷ್ಟ ಎಂದು ಕಣ್ಣನ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

