ಹಾಸನ

ಶುಚಿತ್ವ ಇರುವೆಡೆ ಆರೋಗ್ಯ

Published On :

ಹಾಸನ: ಸುತ್ತಮುತ್ತಲಿನ ಪರಿಸರದ ಶುಚಿತ್ವವನ್ನು ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಯಾರೂ ಕೂಡ ಆಸ್ಪತ್ರೆಗೆ ಹೋಗುವ ಪರಿವೇ ಇರುವುದಿಲ್ಲ ಎಂದು ಹೃದ್ರೋಗ ತಜ್ಞ ಡಾ. ಎಂ.ಆರ್. ಪದ್ಮ ಪ್ರಸಾದ್ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಂ.ಟಿ.ಎಸ್.ಎಸ್. ಯೂತ್‌ಗ್ರೂಪ್, ರೋಟರಿ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ನಗರದ ಬೀರನಹಳ್ಳಿಕೆರೆ ರಾಘವೇಂದ್ರ ಕಾಲೋನಿಯಲ್ಲಿ ನಾಗರಿಕ ಪ್ರಜ್ಞಾ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಪರಿಸರ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಹೆಚ್.ಆರ್. ಮದನ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಕೃಷಿ ಅಧಿಕಾರಿ  ಸತೀಶ್, ಆರ್.ಜೆ.ಗಿರೀಶ್ ಇತರರು ಇದ್ದರು. ವಿಜಯಲಕ್ಷ್ಮಿ ತಂಡದವರು ಪ್ರಾರ್ಥಿಸಿದರು. ಮೇಲ್ವಿಚಾರಕ ಸತೀಶ್ ಆಚಾರ್ಯ ವಂದಿಸಿದರು.
ಅಂತರಂಗ ಶುದ್ಧಿ ಮೂಲಕ ದೈವತ್ವ
ರಾಮನಾಥಪುರ: ಮಾನವ ಕೇವಲ ಬಹಿರಂಗ ಶುದ್ಧಿಗೆ ಗಮನ ನೀಡದೆ, ಅಂತರಂಗದ ಶುದ್ಧಿ ಮಾಡುವ ಮೂಲಕ ಮಾನವತ್ವದಿಂದ ದೈವತ್ವಕ್ಕೆ ತೆರಳಬೇಕು ಎಂದು ವೀರಶೈವ- ಲಿಂಗಾಯಿತ ಮಹಾ ವೇದಿಕೆ ರಾಷ್ಟ್ರಾಧ್ಯಕ್ಷ ಬೆಂಗಳೂರು ರಾಜಪುರ ಮಠದ ನಟರಾಜ್ ಹೇಳಿದರು.  ರಾಮನಾಥಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರದನಹಳ್ಳಿ ಬಸವಕಲ್ಯಾಣ ಮಠದಲ್ಲಿ ಅರಕಲಗೂಡು ತಾಲ್ಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 25 ವೀರಶೈವ ವಟುಗಳಿಗೆ ಲಿಂಗ-ದೀಕ್ಷಾ ಕಾರ್ಯಕ್ರಮದ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಟಿ. ಮಾಹಿಗೌಡನಹಳ್ಳಿ ರಾಜಾಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ. ಶಿರದನಹಳ್ಳಿ ಬಸವಕಲ್ಯಾಣ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ವಿಶ್ವ ವೀರಶೈವ- ಲಿಂಗಾಯಿತ ಮಹಾ ವೇದಿಕೆ ರಾಜ್ಯಾಧ್ಯಕ್ಷ ಶಿವಲಿಂಗಶಾಸ್ತ್ರಿ, ಹಾಸನ ಜಿಲ್ಲಾ ಅಧ್ಯಕ್ಷ ಹಾಸನ ವೈ.ಎಂ. ಕುಮಾರ್, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಷಡಕ್ಷರಿ, ಬಸವಪಟ್ಟಣದ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಪುಟ್ಟಪಾಜಿ, ಎಸ್.ಎನ್. ಅಣ್ಣಜಪ್ಪ, ಪ. ಚಂದ್ರಪ್ಪ, ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.