ಹಾಸನ

ಅಕ್ರಮ ಮರಳುಗಾರಿಕೆಗೆ ಪೊಲೀಸರ ಕುಮ್ಮಕ್ಕು: ಗ್ರಾಮಸ್ಥರ ಆರೋಪ

Published On :

ಸಕಲೇಶಪುರ: ತಾಲೂಕಿನ ಮಳಲಿ, ರಾಮೇನಹಳ್ಳಿ ಹಾಗೂ ಹಾಲೇಬೆಲೂರು ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಪೊಲೀಸರೇ
ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಾಲೇಬೇಲೂರು ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನದಿಯಿಂದ ಹಗಲುವೇಳೆ ಟ್ರ್ಯಾಕ್ಟರ್ ಮೂಲಕ ದಿಣ್ಣೆ ಪ್ರದೇಶಕ್ಕೆ ಮರಳು ಸಂಗ್ರಹಿಸಿ ರಾತ್ರಿ ವೇಳೆ ಲಾರಿಗಳಲ್ಲಿ ಹಾಸನ ಮತ್ತಿತ್ತರ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ ಎಂಬ ದೂರನ್ನು ಜಿಲ್ಲಾಧಿಕಾರಿಗೆ ನೀಡಿದ ಹಿನ್ನಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗಾಗಿ ಈ ಗ್ರಾಮಗಳಿಗೆ ರಿಸರ್ವ್ ಪೊಲೀಸ್ ನಿಯೋಜಿಸಲಾಗಿದೆ.
ಆದರೆ, ಪೊಲೀಸರು ಅಕ್ರಮ ಮರಳುಗಾರಿಕೆ ನಡೆಸುವವರೊಂದಿಗೆ ಹೊಂದಾ ನಿಕೆ ಮಾಡಿಕೊಂಡಿರುವ ಪರಿಣಾಮ, ಹಗಲು-ರಾತ್ರಿ  ಮರಳು ಸಾಗಟ ನಡೆಸಲಾಗುತ್ತಿದೆ ಆರೋಪಿಸಿದ್ದಾರೆ.  ಮಳಲಿ ಗ್ರಾಮ ಸಮೀಪದ ಸುಬ್ಬಶೆಟ್ಟಿ ಎಂಬುವವರ ಕಾಫಿ ತೋಟದ ಮೂಲಕ ದಿನಂ ಪ್ರತಿ ಹತ್ತಾರು ಲಾರಿಗಳು ಮರಳು ಹೊತ್ತು ಸಾಗುತ್ತಿದ್ದರೂ ಅವುಗಳನ್ನು ಹಿಡಿಯುವ ಗೋಜಿಗೆ ಹೋಗದ ಪೊಲೀಸರನ್ನು ತಕ್ಷಣವೇ ಬದಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.