ಚಿಕ್ಕಬೊಮ್ಮನಹಳ್ಳಿ ಮಠಕ್ಕೆ ಸ್ವಾಮೀಜಿ ಭೇಟಿ
ರಾಮನಾಥಪುರ: ಇಲ್ಲಿಗೆ ಸಮೀಪದ ಹಂಡ್ರಂಗಿ ಪಂಚಾಯ್ತಿ ವ್ಯಾಪ್ತಿಗೆ ಬರುವ ಚಿಕ್ಕಬೊಮ್ಮನಹಳ್ಳಿ ಗ್ರಾಮದ ಮಠಕ್ಕೆ ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಭೇಟಿ ನೀಡಿದ್ದರು. ನಂತರ ಸಮೀಪದಲ್ಲೇ ಇರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಂತರ ಅಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿ, ಬೊಮ್ಮನಹಳ್ಳಿಯ ಶಾಖಾ ಮಠ ಅರೆ ಮಲೆನಾಡಿನ ಭಾಗದಲ್ಲಿ ಸರಿಯಾದ ಸಹಕಾರ ದೊರಕದೆ, ಅಭಿವೃದ್ಧಿ ಕಾಣದೆ ಸೊರಗಿದೆ ಎಂದರು.
ಕಾಳಜಿ: ಇಲ್ಲಿನ ಶಾಖಾ ಮಠವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಒಂದು ಧಾರ್ಮಿಕ ಕ್ಷೇತ್ರವನ್ನಾಗಿಸಿ ಮತ್ತು ಜಾತಿ ಮತಗಳ ಬೇಧ ಭಾವವಿಲ್ಲದೆ ಬಡಮಕ್ಕಳಿಗೆ ಒಂದು ಶಿಕ್ಷಣ ಸಂಸ್ಥೆಯನ್ನು ಈ ಅರೆಮಲೆನಾಡಿನ ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಇಲ್ಲಿನ ಮಕ್ಕಳು ಉತ್ತಮ ಸಾಧನೆ ಮಾಡಬೇಕೆನ್ನುವ ಬಗ್ಗೆ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿದರು.
ಪೊಟ್ಯಾಟೊ ಕ್ಲಬ್ನ ಅಧ್ಯಕ್ಷ ಹೆಚ್. ಯೋಗಾರವುಶ್ ಮಾತನಾಡಿ, ಈ ಅರೆಮಲೆನಾಡು ಪ್ರಾಂತ್ಯದ ಚಿಕ್ಕಬೊಮ್ಮನಹಳ್ಳಿ ಶಾಖಾ ಮಠದ ಹಿಂದೆ ಒಂದು ಇತಿಹಾಸವೇ ಅಡಗಿದೆ.
ಮೈಸೂರು ಸಂಸ್ಥಾನದ ಅರಸರ ಕಾಲ 1847ರಲ್ಲಿ 40 ಎಕರೆ ಜಮೀನು ಈ ಶಾಖಾ ಮಠಕ್ಕೆ ದಾನವಾಗಿ ನೀಡಿದ್ದು, ಕಾಲ ಕ್ರಮೇಣ ಒತ್ತುವರಿಯಾಗಿ ಈಗ ಬರೀ 19 ಎಕರೆ ಮಾತ್ರ ಉಳಿದಿದೆ ಎಂದರು.
ಮೂಲ ಮಠದ ಕುಂದೂರು ಶ್ರೀ ರಾಮಯ್ಯ ಪರದೇಶಿ ಸ್ವಾಮೀಜಿಯವರು ಇದನ್ನರಿತು ತಮ್ಮ ವಿಶಾಲ ಮನಸ್ಸಿನಿಂದ ಹಾಗೂ ಮಠದ ಅಭಿವೃದ್ಧಿ ಕುರಿತು ಚಿಂತಿಸಿ ಆದಿಚುಂಚನಗಿರಿ ಶ್ರೀಗಳಿಗೆ ಹಸ್ತಾಂತರಿಸುವುದು. ಈ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ಒಂದು ನಿಜವಾದ ಕೊಡುಗೆಯಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

