ಹಾನಿಯಾದ ತೆಂಗಿನ ಮರಗಳ ಪುನಶ್ಚೇತನಕ್ಕಾಗಿ ಸಹಾಯಧನ
ಅರಸೀಕೆರೆ: ಪರ್ಯಾಯ ಬೆಳೆಗಳನ್ನು ಬೆಳೆಯಲು ಅಥವಾ ಭಾಗಶಃ ಹಾನಿಯಾದ ತೆಂಗಿನ ಮರಗಳನ್ನು ತೆಗೆಯದೆ ಪುನಶ್ಚೇತನ ಗೊಳಿಸಲು ಎರಡು ವಿಧಗಳಲ್ಲಿ ಸಹಾಯಧನ ನೀಡಲಾಗುತ್ತಿದ್ದು, ರೈತರು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಸತತ ಬರಗಾಲದ ಕಾರಣ ಮಳೆಯಿಲ್ಲದೆ ನೀರಿನ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ರೋಗಗ್ರಸ್ಥ ತೆಂಗಿನ ಮರಗಳನ್ನು ಬುಡ ಸಮೇತ ತೆಗೆದು ಹಾಕಲು ಪ್ರತಿ ಮರಕ್ಕೆ 375 ರು.ಗಳಂತೆ ಒಂದು ಹೆಕ್ಟೇರ್ ಪ್ರದೇಶಕ್ಕೆ 40 ಮರಗಳಂತೆ 15 ಸಾವಿರ ರು.ಗಳನ್ನು ನಿಗದಿ ಮಾಡಿದೆ ಎಂದರು.
ಶೇ.25 ಸಹಾಯಧನ ಆಧಾರದಂತೆ 3750 ರು. ಗಳು ನಿಗದಿಯಾಗಿದ್ದು, ಪರ್ಯಾಯ ಬೆಳೆಗಳಾದ ಗೋಡಂಬಿ, ಮಾವು, ದಾಳಿಂಬೆ ಇತ್ಯಾದಿ ಬೆಳೆಗಳನ್ನು ಬೆಳೆಯಲು ಹೇಕ್ಟರ್ಗೆ 150 ಗಿಡಗಳಂತೆ ಪ್ರತಿ ಗಿಡಗಳಿಗೆ 50 ರು. ನಂತೆ 7500 ರು., ಗುಂಡಿ ತೆಗೆಯಲು 30 ರು.ನಂತೆ 4500 ರು., ಗೊಬ್ಬರ ಖರೀದಿಗೆ 6000 ರು., ಅಪ್ರಧಾನ ಹಣ್ಣಿನ ಗಿಡಗಳನ್ನು ಬದುಗಳಲ್ಲಿ ಬೆಳೆಸಲು ಪ್ರತಿ ಗಿಡಕ್ಕೆ 20 ರು. ನಂತೆ 100 ಗಿಡಗಳಿಗೆ 2000 ರು. ಹಾಗೂ ಗಿಡಗಳ ಬುಡಗಳಲ್ಲಿ ತೇವಾಂಶ ಸಂರಕ್ಷಣೆ ಸಮಪಾತಾಳಿ ಬದುಗಳ ನಿರ್ಮಿಸಲು 10 ಸಾವಿರ ರು. ಸೇರಿದಂತೆ ಒಟ್ಟು 48 ಸಾವಿರ ರು. ಅಂದಾಜು ವೆಚ್ಚದಂತೆ ಸರ್ಕಾರದ ಸಹಾಯಧನ ಶೇ. 25ರಂತೆ 12 ಸಾವಿರ ರು. ನೀಡಲಾಗುತ್ತದೆ ಎಂದರು.
ಅದೇ ಮಾದರಿಯಲ್ಲಿ ಭಾಗಶಃ ಹಾನಿಯಾದ ತೆಂಗಿನ ತೋಟಗಳ ಪುನಶ್ಚೇತನಕ್ಕೆ ಪ್ರತಿ ಮರಕ್ಕೆ 375 ರು. ನಂತೆ ಒಂದು ಹೆಕ್ಟೇರ್ ಪ್ರದೇಶಕ್ಕೆ 40 ಮರಗಳಂತೆ 15 ಸಾವಿರ ರು. ನಿಗದಿ ಮಾಡಿದ್ದು, ಶೇ.25 ಸಹಾಯಧನ ಆಧಾರದಂತೆ 3750 ರು., ಸಮಗ್ರ ಬೇಸಾಯ ಪದ್ಧತಿಯಲ್ಲಿ ತೆಂಗಿನಮರಗಳ ಪುನಶ್ಚೇತನಕ್ಕೆ 10 ಸಾವಿರ ರು., ಅಂತರರ್ಜಲ ಮರುಪೂರ್ಣಗೊಳಿಸಲು 8 ಸಾವಿರ ರು., ಮಿಶ್ರ ಬೆಳೆಗಳು, ಮಧ್ಯಂತರ ಬೆಳೆ ಬೆಳೆಯಲು 5 ಸಾವಿರ ರು., ಹೈಬ್ರೀಡ್ ತೆಂಗಿನ ಗಿಡಗಳನ್ನು ಮರುನಾಟಿ ಮಾಡಲು 10 ಸಾವಿರ ರು. ಸೇರಿದಂತೆ ಒಟ್ಟು 48 ಸಾವಿರ ರು.ಗಳಲ್ಲಿ ವೆಚ್ಚಕ್ಕೆ ಸರ್ಕಾರದ ಸಹಾಯಧನ ಶೇ. 25ರಂತೆ 12 ಸಾವಿರ ರು. ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪುನಶ್ಚೇತನಕ್ಕೆ ಒಳಪಟ್ಟ ತೆಂಗಿನ ತೋಟಗಳಲ್ಲಿ ಮೂಲ ತೆಂಗು ಬೆಳೆಯ ಜೊತೆಗೆ ಕನಿಷ್ಠ 2 ಅಥವಾ 3 ಮಿಶ್ರ ಅಥವಾ ಮಧ್ಯಂತರ ಬೆಳೆಗಳನ್ನು ಬೆಳೆಸುವುದು ಕಡ್ಡಾಯವಾಗಿದ್ದು, ಇದರಿಂದ ರೈತರ ಆಧಾಯ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಪ್ರತಿಯೊಬ್ಬ ರೈತರು ಪರ್ಯಾಯ ಬೆಳೆ ಅಥವಾ ಪುನಶ್ಚೇತನ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಕೈಗೊಳ್ಳಬಹುದಾಗಿದ್ದು, ಆದರೆ ಸ್ಥಳೀಯ ಪ್ರದೇಶ ಮತ್ತು ಫಲಾನುಭವಿ ಇಚ್ಛೆಯಂತೆ ಒಂದೇ ತೆಂಗಿನ ತೋಟದಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಪರ್ಯಾಯ ಬೆಳೆಯನ್ನು ಕನಿಷ್ಠ ಅರ್ಧ ಎಕರೆ ಬ್ಲಾಕ್ನಲ್ಲಿ ನಾಟಿ ಮಾಡುವುದು ಹಾಗೂ ಹೆಕ್ಟೇರ್ ಒಂದಕ್ಕೆ ಗರಿಷ್ಠ ಸಹಾಯಧನ 12 ಸಾವಿರ ರು ಮೀರದಂತೆ ಕಾರ್ಯಕ್ರಮಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಹೆಚ್ಚಿನ ಆಸಕ್ತರು ತಾಲೂಕಿನ ಹೋಬಳಿ ಮಟ್ಟದಲ್ಲಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.ದೂ. ಸಂ. 08174-231808, ಉಮೇಶ್, ಕಣಕಟ್ಟೆ ಹೋಬಳಿ 96634 74155, ವಿನಯ್, ಬಾಣಾವರ ಹೋಬಳಿ 81051 21279, ದೊಡ್ಡೇಗೌಡ ಗಂಡಸಿ ಹೋಬಳಿ 99728 44710, ಗಂಗಪ್ಪ, ಜಾವಗಲ್ ಹೋಬಳಿ, 89713 88951 ಹಾಗೂ ಶಿವಕುಮಾರ್ ಕಸಬಾ ಹೋಬಳಿ 96327 45241 ಇವರುಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

