ಹೊಸ ಮರಳು ನೀತಿ ಅನುಷ್ಠಾನ: ಸಿಎಂ
ಹಾಸನ: ರಾಜ್ಯದಲ್ಲಿ ಸರ್ಕಾರದ ಹೊಸ ಮರಳು ನೀತಿ 2011ನ್ನು ಜಾರಿಗೊಳಿಸಲಾಗಿದ್ದು, ತಿದ್ದುಪಡಿ ನಿಯಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹೊಸ ಮರಳು ನೀತಿ-2011 ಜಾರಿಯಾದ ನಂತರ ಸರ್ಕಾರಕ್ಕೆ ಈ ಕೆಳಕಂಡಂತೆ ರಾಜಸ್ವ ಸಂಗ್ರಹವಾಗಿದ್ದು, ತಿದ್ದುಪಡಿ ನಿಯಮಗಳು 2013ರ ಡಿ.16ರಂದು ಜಾರಿಗೆ ತಂದಿರುವುದರಿಂದ ಈ ನೀತಿಯಿಂದ ಬರುವ ರಾಜಸ್ವ ಪ್ರಮಾಣವು ಮುಂದಿನ ತಿಂಗಳಿನಿಂದ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿಗಳು ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
2011-12ರಲ್ಲಿ 72.10 ಕೋಟಿ ರು. ರಾಜಧನ ಸಂಗ್ರಹವಾಗಿದ್ದು, 2012-13ನೇ ಸಆಲಿನಲ್ಲಿ 173.68 ಕೋಟಿ ರು. ಹಾಗೂ 2013-14ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 77.85 ಕೋಟಿ ರು. ರಾಜಧನ ಸಂಗ್ರಹವಾಗಿದೆ.
ಹೊಸ ಮರಳು ನೀತಿಯಲ್ಲಿ ಪರಿಸರ ಸಂರಕ್ಷಣಾ ತಿದ್ದುಪಡಿ ಮರಳು ನಿಯಮಗಳಲ್ಲಿ ಅನುಷ್ಠಾನಗೊಳಿಸಲಾದ್ದು, ಈಗಾಗಲೇ ಗುರುತಿಸಿರುವ ಅಥವಾ ಹೊಸದಾಗಿ ಗುರುತಿಸಬೇಕಾದ ಮರಳು ನಿಕ್ಷೇಪವನ್ನು ತಾಲ್ಲೂಕು ಸಮಿತಿಯಿಂದ ತಪಾಸಣೆಗೊಳಪಡಿಸಿ ಜಿಲ್ಲಾ ಸಮಿತಿಯು ಅಧಿಸೂಚನೆ ಹೊರಡಿಸಿದೆ.
ಜಿಲ್ಲಾ ಸಮಿತಿಯಿಂದ ್ಕ್ಡಛ್ಠ್ಠಣ್ಝಟ್ಜಿ ಕಿಟಛಟಿ ಪರಿಸರ ಯೋಜನಾ ನಿರ್ವಹಣಾ ಯೋಜನೆ ಸಿದ್ಧಪಡಿಸಿ ತದನಂತರ ರಾಜ್ಯ ಪರಿಸರ ಇಲಾಖಾ ಪ್ರಾಧಿಕಾರದಿಂದ ಜಟಿಢ್ಝ್ಠ್ಟಟಿಟಜಟಿಡಿಛಟ ಈಟಜಛ್ಠಛಟ್ಛಿಜ ಪಡೆದು ಟೆಂಡರ್ ಮುಖಾಂತರ ಗಣಿಗಾರಿಕೆಗೆ ನಡೆಸಲು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಹೇಳಿದರು.
ಮರಳು ಗಣಿಗಾರಿಕೆಗೆ ನದಿಯ ಪಾತ್ರದಲ್ಲಿ ಯಾವುದೇ ರೀತಿ ಯಂತ್ರಗಳ ಬಳಕೆಗೆ ನಿರ್ಬಂಧವಿರುತ್ತದೆ. ಹೊಸ ಮರಳು ನೀತಿಯಿಂದ ಪರಿಸರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದರಿಂದ ಪರಿಸರಕ್ಕೆ ಯಾವುದೇ ರೀತಿ ಧಕ್ಕೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಿಎಂ ತಿಳಿಸಿದ್ದಾರೆ.
ಸಮಿತಿ ದರ ನಿಗದಿ: ಮುಖ್ಯಮಂತ್ರಿಗಳು ಮರಳಿನ ಬೆಲೆ ನಿಯಂತ್ರಣ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಉತ್ತರಿಸುತ್ತಾ, ತಿದ್ದುಪಡಿ ನಿಯಮ 31- ಖ (1ಇ) (ಗ್ಝ್ಝ) ರ ಅನ್ವಯ ಮಾರಾಟ ಬೆಲೆ ನಿಗದಿ ಮಾಡುವ ಅಧಿಕಾರ ಜಿಲ್ಲಾಧಿಕಾರಿಯವರಿಂದ ರಚಿಸಲ್ಪಟ್ಟಿರುವ ಜಿಲ್ಲಾ ಸಮಿತಿಗೆ ನೀಡಲಾಗಿದೆ.
ಮರಳು ಮಾರಾಟ ಬೆಲೆ ನಿಗದಿಪಡಿಸುವ ಸಂದರ್ಭದಲ್ಲಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿ, ಜಿಲ್ಲಾ ಸಮಿತಿ ದರವನ್ನು ನಿಗದಿಪಡಿಸಲಿದೆ ಎಂದರು.
ಮರಳು ತೆಗೆಯಲು, ಸಾಗಿಸಲು ಮತ್ತು ಸಂಗ್ರಹಿಸಿ ಲೋಡ್ ಮಾಡಲು ತಗಲುವ ವೆಚ್ಚ, ರಾಜಧನ ಮತ್ತು ತೆರಿಗೆಗಳು (ವ್ಯಾಟ್), ಜಿಲ್ಲಾ ಆಡಳಿತಾತ್ಮಕ ವೆಚ್ಚ (ಪ್ರತಿ ಕ್ಯೂಬಿಕಕ್ಮೀ.ಗೆ 20 ರು), ಪರಿಸರ ನಿರ್ವಹಣಾ ಶುಲ್ಕ (ಪ್ರತಿ ಕ್ಯೂಬಿಕಕ್ಮೀ.ಗೆ 10 ರು.), ಆರ್.ಕ್ಯೂ.ಪಿ.ಗಳ ಕನ್ಸಲ್ಟೇಷನ್ ಶುಲ್ಕ, ಹೀಗಾಗಿ ರಾಜ್ಯದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ಗೆ ಕನಿಷ್ಟ ರು. 250ರಿಂದ ಗರಷ್ಟ ರೂ 930 ಗಳ ಮಾರಾಟ ಬೆಲೆ ನಿಗದಿಪಡಿಸಿದ್ದು, ಸಾಗಾಣಿಕೆ ವೆಚ್ಚದ ಮೇಲೆ ಮಾರುಕಟ್ಟೆ ದರ ನಿರ್ಧರಿಸಲ್ಪಡುತ್ತದೆ ಎಂದರು.
ಅಂತರ ಜಿಲ್ಲೆ ಮರಳು ಸಾಗಾಣಿಕೆಗೆ ನಿರ್ಬಂಧ ವಿಧಿಸುವಂತಿಲ್ಲ. ಆದರೆ ಕೆಲವು ಜಿಲ್ಲಾ ಸಮಿತಿಯು ಜಿಲ್ಲಾ ವ್ಯಾಪ್ತಿಯಿಂದ ಹೊರಗೆ ಮರಳು ಸಾಗಾಣಿಕೆಗೆ ನಿಷೇಧ ಹೇರಿರುವ ಅಂಶ ಸರ್ಕಾರದ ಗಮನಕ್ಕೆ ಬಂದ ನಂತರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸದರಿ ನಿಷೇಧ ಹೇರದಂತೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
ಬೆಂಗಳೂರು ಮತ್ತು ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿನ ಮರಳು ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡು ಸರ್ಕಾರವು ನೆರೆಹೊರೆ ಜಿಲ್ಲೆಗಳಿಂದ ಪ್ರತಿದಿನ ಇಂತಿಷ್ಟು ಪ್ರಮಾಣದ ಮರಳನ್ನು ಪೂರೈಸಲು ನಿರ್ದೇಶನ ನೀಡಲಾಗಿದೆ. ಅಂತರ ರಾಜ್ಯ ಮರಳು ಸಾಗಾಣಿಕೆಯನ್ನು ನಿಷೇಧಿಸಿ ತನಿಖಾ ಠಾಣೆಗಳನ್ನು ಸ್ಥಾಪಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮರಳಿಗೆ ಪರ್ಯಾಯವಾದ ಉತ್ಪಾದಿತ ಮರಳು (ಂ-ಖಛಟಿಜ) ಗ್ರೀನ್ ಸ್ಲಾಗ್ ಬಳಸಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪಟೇಲ್ ಶಿವರಾಂಗೆ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

